ಬೆಂಗಳೂರು:ಐಟಿ ಸಿಟಿ, ಗಾರ್ಡನ್​ ಸಿಟಿ, ಸಿಲಿಕಾನ್​ ಸಿಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ನಮ್ಮ ಬೆಂಗಳೂರು ಹೊರರಾಜ್ಯದ ಜನರಿಗೆ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದು, ಆಶ್ರಯ ನೀಡಿದೆ. ಉದ್ಯಮಿಗಳು ಸೇರಿದಂತೆ ಹಲವರಿಗೆ ಬೆಂಗಳೂರು ಅಚ್ಚುಮೆಚ್ಚಾಗಿದ್ದು, ಸದಾ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಇಂದು ಕೋಟ್ಯಧೀಶರಾಗಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಆದರೆ, ಇದೇ ಬೆಂಗಳೂರು ಹಾಗೂ ಕನ್ನಡ ಭಾಷೆಯ ಬಗ್ಗೆ ಬಗ್ಗೆ ಮಹಿಳೆಯೊಬ್ಬರು ಅವಹೇಳನಕಾರಿಯಾಗಿ ಮಾತನಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಹರಿಯಾಣದ ಗುರುಗ್ರಾಮದ ಶಾನಿ ನಾನಿ ಎಂಬ ಮಹಿಳೆಯೂ ಬೆಂಗಳೂರು ಹಾಗೂ ಕನ್ನಡ ಭಾಷೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ನಾನು ಪಂಜಾಬ್​ ಮೂಲದವರನ್ನು ಮದುವೆಯಾಗಿದ್ದು, ಕೆಲಸದ ನಿಮಿತ್ತ 1.5 ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದೆ. ನಾನು ಧರಿಸುವ ಬಟ್ಟೆಗಳನ್ನು ನೋಡಿ ನನ್ನನ್ನು ಉತ್ತರಭಾರತದವಳು ಎಂದು ಜನರು ಅರ್ಥ ಮಾಡಿಕೊಳ್ಳುತ್ತಿದ್ದರು. ನನಗೆ ಭಾಷೆ ಗೊತ್ತಿಲ್ಲಾ ಎಂಬ ವಿಚಾರವನ್ನಿಟ್ಟುಕೊಂಡು ಆಟೋದಲ್ಲಿ ಕಿರುಕುಳ ನೀಡುತ್ತಿದ್ದರು. ನೀವು ಉತ್ತರಭಾರತದವರು ಬೆಂಗಳೂರಿನಲ್ಲಿ ಯಾಕಿದ್ದೀರಾ ಎಂದು ಆಟೋದವರು ನನಗೆ ಪದೇ ಪದೇ ಪ್ರಶ್ನಿಸುತ್ತಿದ್ದರು. ನಾನು ಹಿಂದಿ ಅಥವಾ ಇಂಗ್ಲೀಷ್​ನಲ್ಲಿ ಮಾತನಾಡಿದಾಗ ಅವರು ಅರ್ಥವಾಗದೇ ಇರದಂತೆ ನಟಿಸುತ್ತಿದ್ದದ್ದು, ನನಗೆ ದೊಡ್ಡ ಹಿಂಸೆಯಾಗಿತ್ತು.
I was working in Bangalore for 1.5 years. Married in Punjab, I wore chooda for the entire 1 year as it is a part of my tradition. It was clearly evident I was from North India.What a harassment it was to commute in auto from flat to office and back. The audacity of local auto…
ಇದನ್ನೂ ಓದಿ:ಆಗಷ್ಟ್​ 01ರವರೆಗೆ ದರ್ಶನ್​ಗೆ ಜೈಲೂಟವೇ ಗತಿ; ಪವಿತ್ರಾ ಗೌಡ ಸೇರಿದಂತೆ 17 ಮಂದಿಗೆ ಜೈಲುವಾಸ ಅನಿವಾರ್ಯ
ಇದಲ್ಲದೆ ಒಮ್ಮೆ ನಮ್ಮ ಮನೆಯಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಾಗ ನಾನು ಬೆಸ್ಕಾಂಗೆ ಕರೆ ಮಾಡಿದೆ. ಆಗ ಹೆಲ್ಪ್​​​ಲೈನ್​ನ ವ್ಯಕ್ತಿ ಹಿಂದಿ, ಇಂಗ್ಲೀಷ್​ ನಮಗೆ ಅರ್ಥವಾಗುವುದಿಲ್ಲ ಕನ್ನಡ ಮಾತ್ರ ಎಂದು ಹೇಳಿ ಕರೆಯನ್ನು ಸ್ಥಗಿತಗೊಳಿಸಿದ. ಅವರು ಆಡಿದ ರೀತಿ ನೋಡಿದರೆ ಕನ್ನಡ ಭಾಷಿಕರ ಸಮಸ್ಯೆಗಳನ್ನು ಮಾತ್ರ ಸರಿಪಡಿಸುವುದಾಗಿ ಹೇಳಿದಂತ್ತಿತ್ತು.
ಬೆಂಗಳೂರು ನಗರವು ತುಂಬಾ ನಕಾರಾತ್ಮಕತೆಯಿಂದ ಕೂಡಿದ್ದು, ಇದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ. ಸದಾ ಮಳೆ ಬರುತ್ತಿತ್ತು. ಹೊರಗೆ ಹೋಗಬೇಕೆಂದರೆ ಕ್ಯಾಬ್​ ಸಿಗುತ್ತಿರಲಿಲ್ಲ. ಕ್ಯಾಬ್​ ಸಿಕ್ಕರೂ ಟ್ರಾಫಿಕ್​ ಜಾಮ್​ನಿಂದಾಗಿ ಎಲ್ಲವೂ ತಡವಾಗುತ್ತಿತ್ತು. ಇದರಿಂದಾಗಿ ನಾನು ಹೆಚ್ಚು ಕಾಲ ಮನೆಯಲ್ಲೇ ಇರಬೇಕಾಯಿತು. ಇದರಿಂದಾಗಿ ನಾನು ಕೆಲಸವನ್ನು ಬಿಟ್ಟು ಗುರುಗ್ರಾಮಕ್ಕೆ ವಾಪಸ್​ ಬಂದೆ. ಈಗ ನಾನು ಮುಂಚಿಗಿಂತಲೂ ಆರಾಮಾಗಿದ್ದೇನೆ. ಗುರುಗ್ರಾಮ ಬೆಂಗಳೂರಿನಂತಿಲ್ಲಾ ಎಂದು ಮಹಿಳೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಇತ್ತ ಮಹಿಳೆಯಪೋಸ್ಟ್​ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಕೆಲವರು ಮಹಿಳೆಯ ಪೋಸ್ಟ್​ಅನ್ನು ಬೆಂಬಲಿಸಿದರೆ. ಹಲವರು ನಿನ್ನನ್ನು ಬೆಂಗಳೂರಿಗೆ ಬಾ ಎಂದು ಕರೆದವರು ಯಾರು, ಅಲ್ಲದೇ ಹೊಸ ಭಾಷೆ ಕಲಿಯುವುದರಿಂದ ನಿಮಗೆ ಏನು ಆಗುವುದಿಲ್ಲ. ಸುಮ್ಮನೇ ನಿಮ್ಮ ತಪ್ಪಿಟ್ಟುಕೊಂಡು ನಗರವನ್ನು ದೂಷಿಸಬೇಡಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × four =
Remember me
