ಬೆಂಗಳೂರು:ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.
ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ಮಹಿಳೆ ಒಬ್ಬರು ಆನ್​ಲೈನ್​ನಲ್ಲಿ ವಂಚಕನೊಬ್ಬನಿಗೆ ಸರಿಯಾಗಿ ತಿರುಗೇಟು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಬೆಂಗಳೂರು ಮೂಲದ ಸ್ಟಾರ್ಟ್​​ಅಪ್​ ಸಹ ಸಂಸ್ಥಅಪಕಿ ಉದಿತಾ ಪಾಲ್​ ಎಂಬುವವರಿಗೆ ಆನ್​ಲೈನ್​ನಲ್ಲಿ ವಂಚಕ ಓರ್ವ ಮೋಸ ಮಾಡಲು ಯತ್ನಿಸಿದರ ಕುರಿತು ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್​ ಮಾಡಿರುವ ಉದಿತಾ ವಂಚಕನಿಗೆ ಚಳಿ ಬಿಡಿಸಿರುವ ಕುರಿತು ಹಂಚಿಕೊಂಡಿದ್ದಾರೆ ಮತ್ತು ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
Aur wo raaz unke block ke saath chala Gayapic.twitter.com/GaNwQejOPF
ಕೆಲಸ ಹುಡುಕುತ್ತಿರುವವರಿಗೆ ಗಾಳ ಹಾಕುವ ವಂಚಕ/ವಂಚಕಿ ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಲೈಕ್​ ಮಾಡಿ ಸಂಪಾದಿಸಬಹುದು ಎಂದು ಹೇಳಿದ್ದಾನೆ.
ಇದನ್ನೂ ಓದಿ:ಯೂಟ್ಯೂಬ್​ನಲ್ಲಿ ಲೈಕ್​ ಮಾಡಿ ಹಣ ಗಳಿಸಿ; 7 ಲಕ್ಷ ರೂ. ಕಳೆದುಕೊಂಡ ಮಹಿಳೆ!
ಇದಕ್ಕೆ ಪ್ರತಿಕ್ರಿಯಿಸಿದ ಉದಿತಾ ವಂಚಕರಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತ ಹೋಗಿದ್ದಾರೆ ಮತ್ತು ಅವರ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ನಂತರ ವಂಚಕನಿಗೆ ಒಂದು ಸ್ಕೀನ್​ಶಾಟ್​ ಕಳುಹಿಸಿ ವಂಚಿಸಲು ಯತ್ನಿಸಿದ ಮೂರ್ಖನನ್ನು ಹಿಡಿದೆ ಎಂದು ಹೇಳಿದ್ದಾರೆ.
ಇದೀಗ ಇವರ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ವಂಚಕರಿಗೆ ಇನ್ನು ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + ten =
Remember me
