ಅಮೃತಸರ:ಗುರುದ್ವಾರದ ಆವರಣದಲ್ಲಿ ಮಹಿಳೆ ಒಬ್ಬರು ಮದ್ಯ ಸೇವಿಸಿದ ಕಾರಣ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಟಿಯಾಲದ ಗುರುದ್ವಾರದಲ್ಲಿ ನಡೆದಿದೆ.
ಮೃತ ಮಹಿಳೆ ಹೆಸರಿ ಪರ್ಮಿಂದರ್​ ಕೌರ್(32)​ ಎಂದು ತಿಳಿದು ಬಂದಿದ್ದು ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಸರೋವರದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತ ಮಹಿಳೆ ಪರ್ಮಿಂದರ್​ ಕೌರ್​ ಗುರುದ್ವಾರದ ಆವರಣದಲ್ಲಿರುವ ಸರೋವರದ ಬಳಿ ಮದ್ಯ ಸೇವಿಸುತ್ತಿದ್ದನ್ನು ಗಮನಿಸಿದ ನಿರ್ಮಲ್​ಜಿತ್​ ಸಿಂಗ್ ಸೈನಿ​ ಎಂಬ ವ್ಯಕ್ತಿಯೂ ಹಲವು ಭಾರಿ ಆಕೆಯ ಮೇಲೆ ಗುಂಡು ಹಾರಿಸಿದ್ಧಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವರುಣ್​ ಶರ್ಮಾ ಮಹಿಳೆ ಮೇಲೆ ಆರೋಪಿ ಐದು ಭಾರಿ ಗುಂಡು ಹಾರಿಸಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮಹಿಳೆ ಗುರುದ್ವಾರದ ಆವರಣದಲ್ಲಿರುವ ಸರೋವರದಲ್ಲಿ ಮದ್ಯ ಸೇವಿಸುತ್ತಿರುವುದನ್ನು ಗಮನಿಸಿದ ನಿರ್ಮಲ್​ ಸಿಂಗ್​ ಸೈನಿ ಹಾಗೂ ಕೆಲವು ಭಕ್ತಾದಿಗಳು ಮಹಿಳೆಯನ್ನು ಹಿಡಿದು ಆಡಳಿತ ಮಂಡಳಿಗೆ ಒಪ್ಪಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಬಿಎಂಟಿಸಿ ಬಸ್ ಬ್ರೇಕ್​ ಫೇಲ್ಯೂರ್​​​; ಮುಂಬದಿ ನಿಂತಿದ್ದ ವಾಹನಗಳು ಜಖಂ
ಈ ವೇಳೆ ಸಿಟ್ಟಿಗೆದ್ದ ಆರೋಪಿ ನಿರ್ಮಲ್​ ಸಿಂಗ್​ ಮಹಿಳೆ ಮೇಲೆ ತನ್ನ ಬಳಿ ಇದ್ದ್ ಗನ್​ನಿಂದ ಐದಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ಧಾನೆ. ಮಹಿಳೆಯ ಜೊತೆ ಇನ್ನೋರ್ವರಿಗೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್​ ಆಗಿರುವ ಆರೋಪಿ ನಿರ್ಮಲ್​ ಸಿಂಗ್ ಯಾವುದೇ ಕ್ರಿಮಿನಲ್​ ಹಿನ್ನಲೆಯನ್ನು ಹೊಂದಿಲ್ಲ.​ ಆತನ ಬಳಿ ಇದ್ದ ಗನ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವರುಣ್​ ಶರ್ಮಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 10 =
Remember me
