ವಿಲ್ಲುಪುರಂ:ತಮಿಳುನಾಡಿನ ಅನಥೂರ್ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಮೇಲೆ ಹಲ್ಲೆ ನಡೆಸಿದ ಸಬ್ ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವೀಡಿಯೊದಲ್ಲಿ,ರಕ್ತಸ್ರಾವವಾಗುತ್ತಿರುವ ವ್ಯಕ್ತಿಯೊಬ್ಬ ತಿರುವೆನ್ನೈನಲ್ಲೂರ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸರೊಂದಿಗೆ ವಾದಿಸುತ್ತಿರುವ ಹಾಗೂ ಮಹಿಳೆಯೊಬ್ಬಳು ಒಬ್ಬ ಪೊಲೀಸ್​​ಗೆ ಕಪಾಳಮೋಕ್ಷ ಮಾಡುವ ದೃಶ್ಯವೂ ಇದೆ.ಈ ಘಟನೆ ಶನಿವಾರ ನಡೆದಿದೆ. ವೀಡಿಯೊ ದೃಶ್ಯಾವಳಿಯಲ್ಲಿ ಇರುವ ಇಬ್ಬರು ಪೊಲೀಸರು ಗುತ್ತಿಗೆದಾರ ಮತ್ತು ಕೃಷಿ ಕೆಲಸಗಾರರ ನಡುವಿನ ವಿವಾದವನ್ನು ಬಗೆಹರಿಸಲು ಅನತೂರ್ ಗ್ರಾಮಕ್ಕೆ ಹೋಗಿದ್ದರು.
ಇದನ್ನೂ ಓದಿ:ಆನ್​ಲೈನ್ ಪ್ರೇಮಿ ತೋಡಿದ ಹಳ್ಳಕ್ಕೆ ಬಿದ್ದು 34 ಲಕ್ಷ ರೂ. ಕಳೆದುಕೊಂಡಳು…
ಕೃಷಿ ಕೆಲಸಗಾರ ವಿ ಮುತ್ತುರಾಮನ್, ಪತ್ನಿ ಶರತಿ ಮತ್ತು ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಭಿಯಾನದಡಿ ತಯಾರಿಸಲಾದ ಜ್ಯೇಷ್ಠತಾ ಪಟ್ಟಿಯಲ್ಲಿ ಈ ಕುಟುಂಬದ ಹೆಸರೂ ಇತ್ತು.ಯೋಜನೆಯ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲು ಖಾಸಗಿ ಗುತ್ತಿಗೆದಾರ ಸುಭಾಷ್ ಚಂದ್ರ ಬೋಸ್‌ ಬ್ಲಾಕ್ ಅಭಿವೃದ್ಧಿ ಕಚೇರಿಯಿಂದ ನೇಮಕಗೊಂಡಿದ್ದರು.ಮನೆಯ ನಿರ್ಮಾಣದ ವೇಳೆ, ಮುತ್ತುರಾಮನ್ ಮತ್ತು ಬೋಸ್ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಆರೋಪಿಸಲಾಗಿದೆ. ಬೋಸ್ ಹಣದ ವಿಷಯದಲ್ಲಿ ತನಗೆ ಮೋಸ ಮಾಡಿದ್ದಾನೆ ಎಂದು ಮುತ್ತುರಾಮ್ ಹೇಳಿಕೊಂಡಿದ್ದಾನೆ. ಅವರಿಬ್ಬರ ನಡುವಿನ ವಿವಾದವನ್ನು ಬಗೆಹರಿಸಲು ಇಬ್ಬರು ಪೊಲೀಸರು ಗ್ರಾಮಕ್ಕೆ ಹೋಗಿದ್ದಾರೆ.
ಇದನ್ನೂ ಓದಿ:ಒಂದು ವಿಭಿನ್ನ ಪ್ರತಿಭಟನೆ… ತಮ್ಮ ವಿವಾಹಕ್ಕೆ ಕುಂದು ತಂದ ಲಾಕ್​ಡೌನ್ ನಿಯಮಾವಳಿಗಳ ವಿರುದ್ಧ ಇಟಲಿಯ ಯುವತಿಯರು ಮಾಡಿದ್ದೇನು?
ಪೊಲೀಸರು ಗ್ರಾಮಕ್ಕೆ ಹೋಗಿ ವಿಚಾರಣೆ ನಡೆಸುವಾಗ ಮುತ್ತುರಾಮನ್ ಮದ್ಯಪಾನ ಮಾಡಿದ್ದನೆನ್ನಲಾಗಿದೆ. ಇದರ ಬೆನ್ನಲ್ಲೇ ಪೊಲೀಸರೊಬ್ಬರು ಮುತ್ತುರಾಮನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪತಿಯ ಮೇಲೆ ಹಲ್ಲೆ ನಡೆಸಿದಾಗ ಕೋಪಗೊಂಡ ಶರತಿ ಸಬ್‌ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದಳು. ಏತನ್ಮಧ್ಯೆ, ಮುತ್ತುರಾಮನ್ ಕಾನ್ಸ್​​​ಟೆಬಲ್​​​​ನ ಫೋನ್ ಮತ್ತು ಎಸ್ಐನ ದ್ವಿಚಕ್ರ ವಾಹನದ ಕೀಲಿಯನ್ನು ಕಿತ್ತುಕೊಂಡ.ಗ್ರಾಮಸ್ಥರು ದಂಪತಿಗೆ ಬೆಂಬಲ ನೀಡಿ, ಪೊಲೀಸರು ಹಿಂತಿರುಗುವಂತೆ ಒತ್ತಾಯಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
https://www.vijayavani.net/no-school-colleges-and-coaching-centers-up-to-july-31-union-govt-clarifies-again/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
