ಚಂಡೀಗಢ:ಪ್ರವಾಹದ ಸಮಸ್ಯೆಯಿಂದ ಆಕ್ರೋಶಗೊಂಡ ಮಹಿಳೆಯೊಬ್ಬಳು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಂದಿದ್ದ ಜನನಾಯಕ್​ ಜನತಾ ಪಾರ್ಟಿಯ ಶಾಸಕ ಈಶ್ವರ್​ ಸಿಂಗ್ ಅವರ ಕಪಾಳಕ್ಕೆ ಬಾರಿಸಿರುವ ಘಟನೆ ಹರಿಯಾಣದ ಘುಲಾ ಎಂಬಲ್ಲಿ ಬುಧವಾರ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಉಕ್ಕಿ ಹರಿಯುತ್ತಿರುವ ಘಾಗ್ಗರ್​ ನದಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಶಾಸಕರು ವೀಕ್ಷಿಸಲು ಬಂದಿದ್ದ ಸಂದರ್ಭದಲ್ಲಿ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಮಹಿಳೆ, ನೀನು ಈಗ ಬಂದ್ರಿ? ಎಂದು ಕಪಾಳಕ್ಕೆ ಬಾರಿಸಿದ ದೃಶ್ಯ ವಿಡಿಯೋದಲ್ಲಿದೆ.
ಸಣ್ಣ ಅಣೆಕಟ್ಟೊಂದು ಒಡೆದು ಪ್ರವಾಹ ಸ್ಥಿತಿ ಎದುರಾಗಿದೆ. ಅದನ್ನು ವೀಕ್ಷಿಸಲು ಶಾಸಕ ಈಶ್ವರ್​ ಸಿಂಗ್​ ಬಂದಿದ್ದರು. ಅಂದಹಾಗೆ ಜನನಾಯಕ್​ ಜನತಾ ಪಾರ್ಟಿಯು ಆಡಳಿತರೂಢ ಬಿಜೆಪಿಯ ಮೈತ್ರಿ ಪಕ್ಷವಾಗಿದೆ.
ಇದನ್ನೂ ಓದಿ:ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ! ತನಿಖೆಯಲ್ಲಿ ಕಿಲಾಡಿ ಲೇಡಿಯ ಕರಾಳ ಮುಖ ಬಯಲು
#WATCH| Haryana: In a viral video, a flood victim can be seen slapping JJP (Jannayak Janta Party) MLA Ishwar Singh in Guhla as he visited the flood affected areas
"Why have you come now?", asks the flood victimpic.twitter.com/NVQmdjYFb0
— ANI (@ANI)July 12, 2023

ಸಣ್ಣ ಅಣ್ಣೆಕಟ್ಟು ಒಡೆಯಬಾರದೆಂದು ಮಹಿಳೆ ಭಾವಿಸಿದ್ದಳು. ಆದರೆ, ಇದೊಂದು ಪ್ರಾಕೃತಿಕ ವಿಕೋಪ ಎಂದು ವಿವರಿಸಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ. ಆದರೂ ಮಹಿಳೆ ನನ್ನ ಕಪಾಳಕ್ಕೆ ಬಾರಿಸಿದರು. ಆಕೆಯನ್ನು ನಾನು ಕ್ಷಮಿಸಿದ್ದೇನೆ. ನಾನು ಅವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಈಶ್ವರ್​ ಸಿಂಗ್​ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಾಗಿ ಉಕ್ಕಿ ಹರಿಯುತ್ತಿರುವ ಘಗ್ಗರ್ ನದಿಯಿಂದ ಪಂಜಾಬ್ ಮತ್ತು ಹರಿಯಾಣದ ಹಲವಾರು ಹಳ್ಳಿಗಳು ಪ್ರವಾಹ ಸ್ಥಿತಿ ಎದುರಿಸುತ್ತಿದ್ದು, ಪರಿಹಾರ ಕ್ರಮಗಳು ನಡೆಯುತ್ತಿವೆ.(ಏಜೆನ್ಸೀಸ್​)
ಮತ್ತಷ್ಟು ಹೆಚ್ಚಾಯ್ತು ಯಮುನಾ ನದಿ ನೀರಿನ ಮಟ್ಟ: ಸಿಎಂ ಕೇಜ್ರಿವಾಲ್​ ಮನೆಯ ಸಮೀಪವೇ ಪ್ರವಾಹ

ಅನ್ನಭಾಗ್ಯ ಯೋಜನೆಯ 5 ಕೆಜಿಯ ಹಣ ಬಂದಿದೆಯೋ? ಇಲ್ಲವೋ? ಪರಿಶೀಲಿಸಲು ಹೀಗೆ ಮಾಡಿ…

ಪಂಚಾಯ್ತಿ ಪ್ರಗತಿಗೆ ರೇಟಿಂಗ್: 20 ಅಂಶಗಳ ಅಳತೆಗೋಲು;  ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
