ಉತ್ತರಪ್ರದೇಶ:ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ ಎಂಬಂತಾಗಿದೆ. ಅಂದರೆ ಇಲ್ಲೊಬ್ಬಳು ಪತ್ನಿ ಪತಿಗೇ ಚಾಕುವಿನಿಂದ ಚುಚ್ಚಿದ್ದಾಳೆ. ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಫತೇಘರ್ ಕೊತ್ವಾಲಿ ಪ್ರದೇಶದ ಬುಧ್ನಮಾವು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತಿನ್ ಎಂಬಾತ ಇರಿತಕ್ಕೊಳಗಾದ ಪತಿ. ಈತ ಮದುವೆಯಾಗಿ 15 ವರ್ಷಗಳಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ಹಾಲು ಚೆಲ್ಲಿದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಗಲಾಟೆ ಆಗಿತ್ತು.
ಸಣ್ಣ ಜಗಳದ ಬಳಿಕ ಪತಿ ಟೀ ಮಾಡಿ ಕೊಡುವಂತೆ ಪತ್ನಿಗೆ ಹೇಳಿದ್ದ. ಮೊದಲೇ ಮನಸು ಕೆಟ್ಟಂತಿದ್ದ ಪತ್ನಿ, ಪತಿ ಟೀ ಕೇಳಿದಾಗ ಇನ್ನಷ್ಟು ಸಿಟ್ಟಾಗಿ ಮಾತಿಗೆ ಮಾತು ಬೆಳೆದಿದೆ. ಬಳಿಕ ರೊಚ್ಚಿಗೆದ್ದ ಆಕೆ ಚಾಕು ತೆಗೆದುಕೊಂಡು ಗಂಡನ ಮುಖ-ಎದೆಗೆ ಚುಚ್ಚಿದ್ದಾಳೆ. ಸದ್ಯ ನಿತಿನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

ಮಾಂಗಲ್ಯ ಕದ್ದ ಕಳ್ಳ ಪೊಲೀಸ್ ಠಾಣೆ ಹಿಂದಿನ ಮನೆಯಲ್ಲೇ ನೆಲೆಸಿದ್ದ; ಮೊದಲ ಕಳ್ಳತನದ ಟೆನ್ಷನ್​ಗೇ 20 ಕೆ.ಜಿ. ದೇಹತೂಕ ಕಳ್ಕೊಂಡಿದ್ದ!

ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
