ನವದೆಹಲಿ:ಹಸುಗೂಸಿಗೆ ಹಾಲುಣಿಸುವಾಗ ಕತ್ತು ಹಿಸುಕಿ ಹತ್ಯೆ ಮಾಡಿರುವ ತಾಯಿ-ಮಕ್ಕಳ ಸಂಬಂಧಕ್ಕೆ ಮಸಿ ಬಳಿಯವಂತಹ ಘಟನೆ ಬೆಳಕಿಗೆ ಬಂದಿದೆ. ಆರು ದಿನದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು , ಕೃತ್ಯ ಎಸಗಿದ ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ಮಾಲಿವುಡ್​ನಲ್ಲಿ #Metoo; ಮೌನ ಮುರಿದ ಮೆಗಾಸ್ಟಾರ್​​ ಮೊದಲ ರಿಯಾಕ್ಷನ್​​​ ಹೀಗಿದೆ..
ಅಸಲಿಗೆ ಖಯಾಲಾ ಪೊಲೀಸ್​ ಠಾಣೆಗೆ ಆರು ದಿನದ ಹೆಣ್ಣು ಮಗು ಮನೆಯಿಂದ ನಾಪತ್ತೆಯಾಗಿದೆ ಎಂದು ಕರೆ ಮಾಡಿ ತಿಳಿಸಲಾಗಿದೆ. ವಿಷಯದ ಸೂಕ್ಷ್ಮತೆ ಅರಿತ ಠಾಣೆಯ ಅಧಿಕಾರಿಗಳು ಮಗು ನಾಪತ್ತೆಯಾದ ಸ್ಥಳಕ್ಕೆ ತಲುಪಿದ್ದಾರೆ. ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಗಿ ಶಹದಾರದ ನಿವಾಸಿ ವಿಮಲೇಶ್ ಅವರ ಪತ್ನಿ ಶಿವಾನಿ ಪೊಲೀಸರಿಗೆ ತಿಳಿಸಿದ್ದಾರೆ. ಗುರುವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತನ್ನ ಪಾಲಕರ ಮನೆಗೆ ಬಂದಿದ್ದಾಗಿ ಹಾಗೂ ರಾತ್ರಿ 2ರಿಂದ 2.30ರ ಸುಮಾರಿಗೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದೆ. ಮತ್ತೆ 4.30ರ ಸುಮಾರಿಗೆ ಎಚ್ಚರವಾಗಿ ನೋಡಿದಾಗ ಮಗು ಜತೆಯಲ್ಲಿ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಆಕೆ ಹೇಳಿದ ಕಥೆಯನ್ನು ನಂಬಿದ ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಅಕ್ಕಪಕ್ಕದ ಮನೆಗಳಲ್ಲಿ ಶೋಧ ನಡೆಸಿದ್ದಾರೆ. ಹುಡುಕಾಟ ನಡೆಯುತ್ತಿರುವ ಶಿವಾನಿ ಹೋಲಿಗೆ ತೆಗಿಸಲು ಆಸ್ಪತ್ರೆಗೆ ಹೋಗಬೇಕಿದೆ ಎಂದು ಹೇಳಿದ್ದಾಳೆ. ಸ್ವಲ್ಪ ವಿಚಿತ್ರವೆನಿಸಿದರು ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿದ ಪೊಲೀಸರು ಆಕೆಯನ್ನು ತಡೆಯದೆ ತಮ್ಮ ಹುಡುಕಾಟ ಮುಂದುವರಿಸಿದ್ದಾರೆ.
ಶೋಧ ನಡೆಸುವಾಗ ಪೊಲೀಸರಿಗೆ ಪಕ್ಕದ ಮನೆಯ ಮೇಲ್ಛಾವಣಿಯಲ್ಲಿ ಬ್ಯಾಗ್​ವೊಂದು ಪತ್ತೆಯಾಗಿದೆ. ಅದರಲ್ಲಿ ನವಜಾತ ಶಿಶು ಇದಿದ್ದನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ತಾಯಿಯ ವರ್ತನೆಯಲ್ಲಿ ಅನುಮಾನ ಮೂಡಿಬಂದ ಬಳಿಕ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಶಿವಾನಿ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಶಿವಾನಿಗೆ ಇದು ನಾಲ್ಕನೆ ಹೆಣ್ಣು ಮಗುವಾಗಿದೆ. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸಾಕಷ್ಟು ಸಾಮಾಜಿಕ ನಿಂದೆಗಳನ್ನು ಎದುರಿಸುತ್ತಿದ್ದ ಆಕೆ ಮಗುವಿಗೆ ಹಾಲುಣಿಸುವಾಗ ಈ ಆಲೋಚನೆಗಳಿಂದ ಭಯಗೊಂಡ ಮಗುವನ್ನು ಉಸಿರುಗಟ್ಟಿಸಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಕೊಂದ ಬಳಿಕ ಮನೆಯವರಿಗೆ ಏನು ಹೇಳುವುದು ಎಂಬ ಆಲೋಚನೆಯಲ್ಲಿ ನಿದ್ರೆ ಮಾಡದೆ ಶಿಶು ನಾಪತ್ತೆ ಕಥೆಯನ್ನು ಹೆಣೆದಿದ್ದಾಳೆ ಎಂದು ಹೇಳಿದರು. ಕಪಶೇರಾ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆಯ ಹೇಳಿಕೆಯನ್ನು ಖಚಿತಪಡಿಸಲು ಮತ್ತು ಸಾವಿನ ಕಾರಣ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.(ಏಜೆನ್ಸೀಸ್​​)
ಹೆಲ್ಮೆಟ್​ ಬಳಸಿಲ್ಲವೆಂದು ಕಾರು ಮಾಲೀಕನಿಗೆ ದಂಡ; ಚಲನ್​ ನೋಡಿ ಓನರ್​ಗೆ ಶಾಕ್​.. ಮುಂದೇನಾಯ್ತು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
