ರಾಂಚಿ:ಫೋನಿನಲ್ಲಿ ಮಾತನಾಡುವಾಗ ಅಳುತ್ತಿದ್ದ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತಾವು ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧ ಆರೋಪಿ ಅಫ್ಸಾನಾ ಖಾತೂನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಆರು ವರ್ಷಗಳ ಹಿಂದೆ ನಿಜಾಮುದ್ದೀನ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರೋಪಿ ಅಫ್ಸಾನಾ ಮಾವ ರೋಜನ್ ಅನ್ಸಾರಿ, ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಅಫ್ಸಾನಾ ಕಿರಿಯ ಮಗನೊಂದಿಗೆ ಬೇರೊಂದು ಕೋಣೆಯಲ್ಲಿ ಇದ್ದಳು. ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕಿರಿಯ ಮಗ ಅಳಲು ಶುರು ಮಾಡಿದ್ದು, ಸಂತೈಸುವ ಬದಲು ಆಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಇದನ್ನೂ ಓದಿ:ನಿಯಂತ್ರಣ ತಪ್ಪಿ ಟೀ ಅಂಗಡಿಗೆ ಲಾರಿ ಡಿಕ್ಕಿ; 5 ಮಂದಿ ದುರ್ಮರಣ
ಕೆಲ ಹೊತ್ತಿನ ಬಳಿಕ ರೂಮಿಗೆ ತೆರಳಿ ಪರಿಶೀಲಿಸಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬಂದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಆರೋಪಿ ಅಫ್ಸಾನಾ ಮಾವ ರೋಜನ್ ಅನ್ಸಾರಿ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಆರೋಪಿ ಅಫ್ಸಾನಾ, ನಾನು ಬೇಕಂತ ಈ ರೀತಿ ಮಾಡಿಲ್ಲ. ಅವನು ತುಂಬಾ ಹೊತ್ತು ಅಳುತ್ತಿದ್ದರಿಂದ ಕೋಪಗೊಂಡು ಸುಮ್ಮನಾಗುವಂತೆ ಬೆದರಿಸಲು ಹೋಗಿ ಅವಘಡ ನಡೆದಿದೆ ಎಂದು ಆರೋಪಿ ಅಫ್ಸಾನಾ ಹೇಳಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
