ಹೈದರಾಬಾದ್:ನೋಡು ನೋಡುತ್ತಿದ್ದಂತೆ ಎಲ್ಲರ ಕಣ್ಮುಂದೆಯೇ ಮಹಿಳೆಯೊಬ್ಬಳು ಕೊಚ್ಚಿ ಹೋಗಿರುವ ಘಟನೆ ತೆಲಂಗಾಣದ ಕೊತಗುಡೆಂನಲ್ಲಿ ನಡೆದಿದೆ.
ಇದನ್ನೂ ಓದಿ:ಸಾಲ ವಾಪಸ್ಸು ನೀಡಲಿಲ್ಲ ಎಂದು ಪತಿಯ ಸಮ್ಮುಖದಲ್ಲೇ ಪತ್ನಿಗೆ ಲೈಂಗಿಕ ಕಿರುಕುಳ
56 ವರ್ಷದ ಮಹಿಳೆ ಕುಂಜ ಸಾವಿತ್ರಿ ಎಂಬಾಕೆ ಭತ್ತದ ನಾಟಿ ಕೆಲಸ ಮುಗಿಸಿ ಕೃಷಿ ಕಾರ್ಮಿಕರ ಗುಂಪಿನೊಂದಿಗೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೊತಗುಡೆಂ ಬಳಿ ಸೇತುವೆಯೊಂದು ಮುಳುಗಿದ್ದು, ನೀರು ರಭಸವಾಗಿ ಹರಿಯುತ್ತಿತ್ತು.
ಈ ವೇಳೆ ಕಾರ್ಮಿಕರ ಗುಂಪೊಂದು ಪರಸ್ಪರ ಕೈಹಿಡಿದುಕೊಂಡು ಒಂದು ದಡದಿಂದ ಇನ್ನೊಂದು ದಡಕ್ಕೆ ಹೊರಟಿತ್ತು. ಈ ವೇಳೆ ಮಹಿಳೆಯು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾಳೆ. ಸ್ಥಳೀಯರು ಮಹಿಳೆಯ ರಕ್ಷಣೆಗೆ ಧಾವಿಸಿದ್ದು, ಮಹಿಳೆಯ ಹುಡುಕಾಟ ಇನ್ನೂ ಮುಂದುವರೆದಿದೆ.
Welcome to Bangaru Telangana.
Women got washed away!
When this is pointed out loser binkes talk about other states.
Location: Kothagudem!pic.twitter.com/E1oqGOegvn
— 𝐒𝐚𝐠𝐚𝐫 𝐆𝐨𝐮𝐝 (@Sagar4BJP)July 26, 2023
ನೆರೆಯ ರಾಜ್ಯವಾದ ತೆಲಂಗಾಣದಲ್ಲಿ ಜುಲೈ 25 ರಿಂದ 27ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಅಲ್ಲದೇ, ರಾಜ್ಯದ ಅತಿ ಎತ್ತರದ ಜಲಪಾತವಾದ ಮುತ್ಯಾಲಧಾರವನ್ನು ವೀಕ್ಷಿಸಲು ತೆರಳಿದ್ದ ಮುಲುಗು ಜಿಲ್ಲೆಯ ಆಳವಾದ ಅರಣ್ಯ ಪ್ರದೇಶದಲ್ಲಿ ಕನಿಷ್ಠ 42 ಪ್ರವಾಸಿಗರು ಸಿಕ್ಕಿಬಿದ್ದಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 11 =
Remember me
