ನವದೆಹಲಿ:ಪ್ರೀತಿ ಎಂದರೆ ಸುಂದರವಾದ ಬಂಧವಾಗಿದೆ. ಆದರೆ ಸಂಬಂಧ ಹಾಳಾದರೆ ಆ ಒಂದು ಬಂಧಕ್ಕೆ ಅರ್ಥವೇ ಇರುವುದಿಲ್ಲ. ಇಬ್ಬರ ಮನಸ್ಸು ಪರಸ್ಪರ ದೂರವಾಗುತ್ತದೆ. ಹೀಗೆ ಇಲ್ಲೊಬ್ಬಳು ಯುವತಿ ದೂರವಾದ ಪ್ರೀಯಕರನಿಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಕಸದ ಚೀಲಗಳನ್ನು ಕಳುಹಿಸುವ ಮೂಲಕ ತನ್ನ ಮಾಜಿ ಗೆಳೆಯನನ್ನು ಕೆಣಕಿದ್ದಾರೆ.ಈ ಪೋಸ್ಟ್ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವತಿ ಕಳುಹಿಸಿದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ತೋರಿಸುತ್ತದೆ. “ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ನಿಮಗೆ ಒಂದು ಉಡುಗೊರೆ ಕಳುಹಿಸಲಾಗಿದೆ, ಅದನ್ನು ಪ್ರೀತಿಯಿಂದ ಧರಿಸು. ಅದು ಸರಿಹೋಗದಿದ್ದರೆ ನನಗೆ ತಿಳಿಸು, ನಾನು ದೊಡ್ಡದನ್ನು ಕಳುಹಿಸುತ್ತೇನೆ ಎಂದು ಮೇಸೆಜ್​ ಮಾಡಲಾಗಿದೆ. ಜತೆಗೆ ‘ಕಸದ ಚೀಲಗಳು’ ಫೋಟೋವು ಕಾಣಿಸುತ್ತದೆ.
my roommate's ex sent this to him and I can't stop laughing 😭pic.twitter.com/MUs60dvm2T
— Naman (@yourtwtbro)July 18, 2023

“ನನ್ನ ರೂಮ್‌ಮೇಟ್‌ನ ಮಾಜಿ ಪ್ರೇಯಸಿ ಇದನ್ನು ಅವನಿಗೆ ಕಳುಹಿಸಿದ್ದಾಳೆ.ನನಗೆ ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ” ಎಂದು ಆತನ ಸ್ನೇಹಿತ ಫೋಟೋವನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್​​​ಗೆ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆ ಗೈದಿದ್ದಾರೆ.
ಬ್ಯಾಂಡೇಜ್ ನೀಡಲು ಬಯಸಿದ್ದರು, ಆದರೆ ಗಾಯಾ ತುಂಬಾ ದೊಡ್ಡದಾಗಿ ಅನ್ನಿಸುತ್ತದೆ ಹೀಗಾಗಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಕೂಡಾ ಕಾಮೆಂಟ್​​ ಮಾಡಿದೆ.
VIDEO| ಮೆಟ್ರೋದಲ್ಲಿ ಫಿಟ್ನೆಸ್ ಕೋಚ್ ಸ್ಟಂಟ್; ನೆಟ್ಟಿಗರಿಂದ ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
