ಆಗ್ರಾ:ಅಪಾರ್ಟ್​ಮೆಂಟ್​ನ ಮಹಿಳೆಯೊಬ್ಬಳು ವಾಚ್​​ಮನ್​ ಜತೆಗೆ ಅನುಚಿತವಾಗಿ ವರ್ತಿಸಿ. ಪೊರಕೆಯಿಂದ ಥಳಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಇದನ್ನೂ ಓದಿ:ಪ್ರತಿಭಟನೆ ವೇಳೆ ಲಾಠಿಚಾರ್ಜ್: ಬಿಜೆಪಿ ಮುಖಂಡನ ಸಾವು, ಹಲವರಿಗೆ ಗಾಯ
ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಗದೀಶ್​ ಪ್ರಸಾದ ತಿವಾರಿ ಹಲ್ಲೆಗೊಳಗಾದ ವಾಚ್​ಮನ್​​ ಆಗಿದ್ದಾನೆ. ರೇನ್‌ಬೋ ಅಪಾರ್ಟ್‌ಮೆಂಟ್‌ನ ಸಿ-8ರಲ್ಲಿ ವಾಸಿಸುವ ಅನಿಲ್ ಶರ್ಮಾ ಎಂಬುವರ ಪತ್ನಿ ಅನಿತಾ ಹಾಗೂ ಮಗ ಪ್ರಾಂಶು ಎಂಬುವರೇ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
Kalesh B/w Watchman and Woman inside Rainbow Apartment in Agra due to lift failurepic.twitter.com/4pPL56hZPk
— Ghar Ke Kalesh (@gharkekalesh)July 13, 2023

ಜಗದೀಶ್ ಪ್ರಸಾದ್ ಎಂದಿನಂತೆ ಮಂಗಳವಾರ ಬೆಳಗ್ಗೆ ಕರ್ತವ್ಯದಲ್ಲಿದ್ದರು. ಈ ವೇಳೆ ತಾಯಿ ಮತ್ತು ಮಗ ಬಂದು, ಲಿಫ್ಟ್ ಏಕೆ ಕೆಲಸ ಮಾಡುತ್ತಿಲ್ಲ ಎಂದು ಕೇಳಿದ್ದಾರೆ. ಆಗ ಜಗದೀಶ್​​ ಕಾರಣವನ್ನು ವಿವರಿಸುತ್ತಿದ್ದಂತೆಯೇ, ಮಗ ಆತನನ್ನು ನಿಂದಿಸಲು ಪ್ರಾರಂಭಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಸ್ವಲ್ಪ ಸಮಯದ ನಂತರ, ತಾಯಿ ವಾಚ್​ಮನ್​ಗೆ ಪೊರಕೆಯಿಂದ ಥಳಿಸಲು ಪ್ರಾರಂಭಿಸಿದ್ದಾಳೆ.
ಘಟನೆಯಿಂದ ನೊಂದಿರುವ ಜಗದೀಶ್​ ಇಬ್ಬರ ವಿರುದ್ಧ ಸಿಕಂದರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಶಾಹಿ ತಿಳಿಸಿದ್ದಾರೆ.(ಏಜೆನ್ಸೀಸ್​​)
Sign in to your account
Please enter an answer in digits:16 + seventeen =
Remember me
