ಅಗರ್ತಲಾ:ಬೇರೊಬ್ಬಳೊಡನೆ ಡೇಟಿಂಗ್ ಶುರುಮಾಡಿದ್ದ ಪತಿ. ಮದುವೆ ಆಗೋ ಅಂದ್ರೆ ಒಪ್ಪದ ಬಾಯ್​ಫ್ರೆಂಡ್. ಹತಾಶಳಾದ ಪತ್ನಿ ಮಾಡಿದ್ದೇನು ಅಂದ್ರೆ, ಬಾಯ್​ಫ್ರೆಂಡ್ ಮೇಲೆ ಆ್ಯಸಿಡ್ ದಾಳಿ! ಇದ್ಯಾವ ನಮೂನೆಯ ಪ್ರೇಮಕಥೆಯೋ ಗೊತ್ತಿಲ್ಲ. ಆ್ಯಸಿಡ್ ದಾಳಿ ನಡೆಸಿದ 27 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮಂಗಳವಾರ ಸ್ಥಳೀಯ ಕೋರ್ಟ್​ ಆಕೆಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆ್ಯಸಿಡ್ ದಾಳಿ ಸಂತ್ರಸ್ತನ ಮುಖ ಸುಟ್ಟು ಹೋಗಿದ್ದು, ಕಣ್ಣು, ಮೂಗು ಶ್ವಾಸಕೋಶಕ್ಕೆ ಹಾನಿಯಾಗಿದೆ. ಆತನ ಸ್ಥಿತಿ ಗಂಭೀರವಾಗಿದ್ದು, ಅಗರ್ತಲಾ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆರೋಪಿ ಮಹಿಳೆಯನ್ನು ಬಿನತಾ ಸಂತಾಲ್ ಎಂದು ಗುರುತಿಸಲಾಗಿದೆ. ಆಕೆ ಪೊಲೀಸರಿಗೆ ಹೇಳಿದ್ದಿಷ್ಟು- ಸಂತ್ರಸ್ತನೊಂದಿಗೆ ಎಂಟು ವರ್ಷಗಳಿಂದ ಸಂಬಂಧವಿದೆ. ಶಾಲಾ ದಿನಗಳಿಂದಲೇ ಆತನನ್ನು ಬಲ್ಲೆ ನಾನು. ಆತ ಪದವಿ ಶಿಕ್ಷಣ ಪಡೆದ ನಂತರದಲ್ಲಿ ಮನೆಯವರೊಂದಿಗೆ ಪುಣೆಗೆ ಸ್ಥಳಾಂತರಗೊಂಡ. ಅಷ್ಟೇ ಅಲ್ಲ ಸಂಪರ್ಕ ಬಿಟ್ಟಿದ್ದ.
ಇದನ್ನೂ ಓದಿ:ಚಿನ್ನ ಕಳ್ಳಸಾಗಣೆ ಕೇಸ್​: ಅಮಾನತುಗೊಂಡಿರುವ ಐಎಎಸ್​ ಅಧಿಕಾರಿ ಶಿವಶಂಕರ್ ಇಡಿ ಕಸ್ಟಡಿಗೆ
2018ರ ಮಾರ್ಚ್​ ನಲ್ಲಿ ಮತ್ತೆ ತ್ರಿಪುರಾಕ್ಕೆ ಆಗಮಿಸಿದ್ದ. ಈ ನಡುವೆ ನಾನು ರಾಂಚಿಯಲ್ಲಿ ಆರೋಗ್ಯ ಸೇವಾ ಸಿಬ್ಬಂದಿಯಾಗಿ ಕೆಲಸ ಆರಂಭಿಸಿದ್ದೆ. ತ್ರಿಪುರಾಕ್ಕೆ ಬಂದು ಆತನ ಗ್ರಾಮಕ್ಕೆ ಭೇಟಿ ನೀಡಿದರೆ ಆತ ಅಲ್ಲಿರಲಿಲ್ಲ. ಮೊನ್ನೆ ದುರ್ಗಾ ಪೂಜೆ ಸಂದರ್ಭದಲ್ಲಿ ಕಾಣಸಿಕ್ಕಿದ್ದ. ಆತನಿಗೆ ಪ್ರೇಮ ನಿವೇದನೆ ಮಾಡಿ ವಿವಾಹವಾಗುವಂತೆ ಕೇಳಿದೆ. ಆತ ಒಪ್ಪಲಿಲ್ಲ. ಪ್ರತೀಕಾರದ ದ್ವೇಷ ಹುಟ್ಟಿ ಆ್ಯಸಿಡ್ ದಾಳಿ ನಡೆಸಿದೆ.
ಇದನ್ನೂ ಓದಿ:ಟೆರರ್​ ಫಂಡಿಂಗ್: ಕಾಶ್ಮೀರ, ದೆಹಲಿಯಲ್ಲಿ ಎನ್​​ಜಿಒ, ಟ್ರಸ್ಟ್​ಗಳ ಮೇಲೆ ಎನ್​ಐಎ ದಾಳಿ
ಇದೀಗ, ಪ್ರಕರಣದ ವಿಸ್ತೃತ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್)
ಚಿನ್ನ ಕಳ್ಳಸಾಗಣೆ ಕೇಸ್​: ಅಮಾನತುಗೊಂಡಿರುವ ಐಎಎಸ್​ ಅಧಿಕಾರಿ ಶಿವಶಂಕರ್ ಇಡಿ ಕಸ್ಟಡಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
