ಕರ್ನೂಲ್​: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ನಂದ್ಯಾಲ್ ಮಂಡಲದಲ್ಲಿ 20 ವರ್ಷದ ಯುವತಿಯೊಬ್ಬಳು ಯುವಕನೊಬ್ಬನ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ನಡೆದಿದೆ. ಗುರುವಾರ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಈ ಆ್ಯಸಿಡ್ ದಾಳಿ ನಡೆದಿದ್ದು, ದೂರು ದಾಖಲಾಗಿದೆ ಎಂದು ನಂದ್ಯಾಲ್ ತಾಲೂಕು ಪೊಲೀಸ್ ಠಾಣೆಯ ಸರ್ಕಲ್ ಇನ್​ಸ್ಪೆಕ್ಟರ್ ದಿವಾಕರ ರೆಡ್ಡಿ ತಿಳಿಸಿದ್ದಾರೆ.
ನಂದ್ಯಾಲ್ ಮಂಡಲದ ಪೆದ್ದ ಕೊಟ್ಟಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಯುವತಿ ಮತ್ತು ಯುವಕ ಮೂರು ವರ್ಷಗಳಿಂದ ಪ್ರೇಮಿಸುತ್ತಿದ್ದರು. ಮದುವೆಯಾಗುವುದಾಗಿಯೂ ಮಾತುಕೊಟ್ಟಿದ್ದ. ಆದ್ರೆ, ಕೆಲವು ದಿನಗಳ ಹಿಂದೆ ಆ ಯುವಕ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದ. ಮನೆಯಲ್ಲಿ ಪಾಲಕರ ಒತ್ತಾಯಕ್ಕೆ ಮಣಿದು ಮದುವೆಯಾಗಿದ್ದ.
ಇದನ್ನೂ ಓದಿ:ಶಿರಾ ಉಪಚುನಾವಣೆ ಪಕ್ಕಾ: ಕೋರ್ಟ್ ಮುಂದೆ ರಾಜರಾಜೇಶ್ವರಿ ನಗರ, ಮಸ್ಕಿ ಪ್ರಕರಣ
ಯುವತಿ ಕೊಟ್ಟ ಹೇಳಿಕೆ ಹೀಗಿದೆ- ಯುವಕ ಜತೆ ಪ್ರೇಮದ ಸುಳಿಗೆ ಬಿದ್ದ ಬಳಿಕ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಮೂರು ವರ್ಷ ವೇಸ್ಟಾಗಿ ಹೋಯಿತು. ನಂಬಿಸಿ ಮೋಸ ಮಾಡಿದ. ಅದಕ್ಕೆ ನಾನು ಆತನ ಮುಖಕ್ಕೆ ಆ್ಯಸಿಡ್ ಎರಚಿದೆ.
ಇದನ್ನೂ ಓದಿ:ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ: ಟ್ಯಾಂಕ್ ನಿಯೋಜನೆ ಹೆಚ್ಚಿಸಿದ ಚೀನಾ, ಪ್ರತ್ಯುತ್ತರಕ್ಕೆ ಭಾರತ ಸನ್ನದ್ಧ
ಯುವಕ ಹೇಳಿಕೆ ಹೀಗಿದೆ – ನಾವಿಬ್ಬರು ಪ್ರೀತಿಸುತ್ತಿದ್ದೆವು. ಆದರೆ, ನಮ್ಮ ಮನೆಯಲ್ಲಿ ಬೇರೆ ಹುಡುಗಿಯನ್ನು ನೋಡಿ ನಿಶ್ಚಿತಾರ್ಥಮಾಡಿ ಮದುವೆ ಮಾಡಿಸಿದರು. ನಾನು ಈ ವಿಚಾರವನ್ನು ಪ್ರೇಯಸಿಗೆ ತಿಳಿಸಿದ್ದೆ. ಬಳಿಕ ಪರಸ್ಪರ ಮಾತನಾಡಿ ಪ್ರೇಮ ಸಂಬಂಧವನ್ನು ಕಳಚಿಕೊಂಡಿದ್ದೆವು. ಇದರಿಂದ ಆಕ್ರೋಶಿತಳಾಗಿದ್ದ ಆಕೆ ನನ್ನ ಕೈ ಮೇಲೆ ಕಳೆದ ವಾರ ಆ್ಯಸಿಡ್ ಹಾಕಿದ್ದಳು. ನಂತರ ಈಗ ಮುಖದ ಮೇಲೂ ಸುರಿದಿದ್ದಾಳೆ.
ಇದನ್ನೂ ಓದಿ:ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಗೆಲುವಿನ ಓಟ
ಗಾಯಾಳು ಯುವಕನನ್ನು ನಂದ್ಯಾಲದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಜೈಲಿನಲ್ಲಿ ಡ್ರಗ್ಸ್, ಮೊಬೈಲ್​ ಫೋನ್, ಸಿಗರೇಟ್, ಬೀಡಿ ಪತ್ತೆಗೆ ಹೊಸ ಪ್ಲ್ಯಾನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
