ದೆಹಲಿ:ಹೋಮ್​ವರ್ಕ್ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ತಾಯಿಯೊಬ್ಬಳು ತನ್ನ ಐದು ವರ್ಷದ ಮಗಳಿಗೆ ಭಯಂಕರ ಅನಿಸುವಂಥ ಶಿಕ್ಷೆಯನ್ನು ನೀಡಿದ್ದಾಳೆ. ಸಂಕಟ ತಾಳಲಾಗದೆ ಮಗು ಒದ್ದಾಡುತ್ತಿದ್ದುದನ್ನು ನೋಡಿದ ಯಾರಿಗೇ ಆದರೂ ಕರುಳು ಚುರುಕ್​ ಅನಿಸುವಂಥ ಘಟನೆ ಇದು.
ಇಂಥದ್ದೊಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ಕುರಿತು ದೆಹಲಿ ಪೊಲೀಸರಿಗೆ ಸಾರ್ವಜನಿಕರು ದೂರು ಕೂಡ ನೀಡಿದ್ದಾರೆ. ಬಾಲಕಿಯೊಬ್ಬಳ ಕೈಕಾಲು ಕಟ್ಟಿ ಹಾಕಿ ಸುಡುಸುಡುವ ಬಿಸಿಲಿನಲ್ಲಿ ಟೆರೇಸ್​ನಲ್ಲಿ ಮಲಗಿಸಿದ ದೃಶ್ಯಾವಳಿ ಇರುವ ವಿಡಿಯೋ ಕಂಡ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಸ್ಥಳವನ್ನು ಪತ್ತೆ ಮಾಡಲು ಮುಂದಾಗಿದ್ದು, ದೆಹಲಿಯ ಟುಕ್​ಮಿರ್​ಪುರ್​ನ ಖಜೂರಿ ಖಾಸ್ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ಹೋಮ್​ವರ್ಕ್ ಮಾಡದಕ್ಕೆ ಮಗಳಿಗೆ ಹಾಗೆ ಶಿಕ್ಷೆ ಕೊಟ್ಟಿದ್ದು ನಿಜ. ಬರೀ 5ರಿಂದ 7 ನಿಮಿಷ ಮಾತ್ರ ಹಾಗೆ ಕಟ್ಟಿ ಹಾಕಿದ್ದು, ಬಳಿಕ ಕೆಳಗೆ ಮನೆಯೊಳಕ್ಕೆ ಕರೆದುಕೊಂಡು ಬಂದಿದ್ದೇನೆ ಎಂಬುದಾಗಿ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.

ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eleven =
Remember me
