ಮುಂಬೈ:ಯಾರಾದರೂ ವೈದ್ಯರು ನಿಮಗೆ ಕಾಯಿಲೆ ಇದೆ ಎಂದು ಹೇಳಿದರೆ ಒಮ್ಮೆ ಅದು ಹೌದೋ ಇಲ್ಲವೋ ಎಂದು ನೀವೇ ಯೋಚಿಸುವುದು ಅವಶ್ಯಕ. ಏಕೆಂದರೆ ಇದೇ ರೀತಿ ಕ್ಯಾನ್ಸರ್​ ಇದೆ ಎಂದು ಹೇಳಿ ವೈದ್ಯೆಯೊಬ್ಬಳು ತನ್ನ ಸ್ನೇಹಿತೆಗೇ 1.47 ಕೋಟಿ ರೂಪಾಯಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇದನ್ನೂ ಓದಿ:ಅಜ್ಜ ಕೊಟ್ಟ ಆಸ್ತಿಯನ್ನು ತಾಯಿ ಚಿಕ್ಕ ಮಗಳ ಹೆಸರಿಗೆ ಮಾಡಿದ್ದಾರೆ- ನಮಗೆಲ್ಲಾ ಪಾಲು ಸಿಗಲ್ವಾ?
ಪುಣೆಯ ರಕ್ಷಣಾ ಖಾತೆಗಳ ಪ್ರಧಾನ ನಿಯಂತ್ರಕದಲ್ಲಿ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುತ್ತಿರುವ ಸುಷ್ಮಾ ಜಾಧವ್​ (58)ಗೆ ಮೂರು ವರ್ಷಗಳ ಹಿಂದೆ ವಿದ್ಯಾ ಧನಂಜಯ್​ ಹೆಸರಿನ ಡಾಕ್ಟರ್​ ಪರಿಚಯವಾಗಿದೆ. ಅದಾದ ಮೇಲೆ ಆಕೆ ವಿದ್ಯಾಳ ಬಳಿ ಮಂಡಿ ನೋವಿಗೆ ಚಿಕಿತ್ಸೆಯನ್ನೂ ಪಡೆದಿದ್ದಳಂತೆ. ಅದಾದ ಮೇಲೆ ಸುಷ್ಮಾ ಈ ವರ್ಷದ ಜೂನ್​ ತಿಂಗಳಲ್ಲಿ ಒಮ್ಮೆ ವಿದ್ಯಾಳನ್ನು ಭೇಟಿ ಮಾಡಿದ್ದಾಳೆ. ಯಾವುದೋ ಸಣ್ಣ ತೊಂದರೆಯನ್ನಿಟ್ಟುಕೊಂಡು ವಿದ್ಯಾಳ ಬಳಿ ಹೋದ ಸುಷ್ಮಾಗೆ ದೊಡ್ಡ ಶಾಕ್​ ಕಾದಿತ್ತು.
ನಿನಗೆ ಲಿವರ್​ ಕ್ಯಾನ್ಸರ್​ ಇದೆ. ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಸತ್ತೇ ಹೋಗುತ್ತೀಯ ಎಂದು ವಿದ್ಯಾ ತಿಳಿಸಿದ್ದಾಳೆ. ಯಾವುದೋ ಒಂದಿಷ್ಟು ಫೋಟೋಗಳನ್ನು ತೋರಿಸಿ ನೋಡು, ಇದೇ ರೀತಿ ನಿನಗೂ ಸಮಸ್ಯೆಯಿದೆ ಎಂದು ನಂಬಿಸಿದ್ದಾಳೆ. ಹೆದರಬೇಡ, ನಾನು ಚಿಕಿತ್ಸೆ ನೀಡುತ್ತೇನೆ ಎಂದು ಧೈರ್ಯವನ್ನೂ ತುಂಬಿದ್ದಾಳೆ. ಪ್ರಾಣಕ್ಕೆ ಹೆದರಿದ ಸುಷ್ಮಾ, ವಿದ್ಯಾ ಹೇಳಿದ ಎಲ್ಲ ಟ್ರೀಟ್ಮೆಂಟ್​ ಆರಂಭಿಸಿದ್ದಾಳೆ.
ಇದನ್ನೂ ಓದಿ:VIDEO| ಚಿಕಿತ್ಸೆ ಕೊಡಲು ನಕಾರ: ಆಸ್ಪತ್ರೆ ಒಳಗಡೆಯೇ ವಾಹನ ನುಗ್ಗಿಸಿದ ವ್ಯಕ್ತಿ, ವಿಡಿಯೋ ವೈರಲ್​!
ಜೂನ್​ನಿಂದ ಡಿಸೆಂಬರ್​ವರೆಗೂ ಎಲ್ಲ ರೀತಿಯ ಟ್ರೀಟ್ಮೆಂಟ್​ನ್ನು ಸುಷ್ಮಾ ತೆಗೆದುಕೊಂಡಿದ್ದಾಳೆ. ಇದಕ್ಕೆಂದು 1.45 ಕೋಟಿ ರೂಪಾಯಿಯ ಚೆಕ್​ ಮತ್ತು 1.75 ಲಕ್ಷ ರೂಪಾಯಿಯ ನಗದನ್ನು ವಿದ್ಯಾಳಿಗೆ ನೀಡಿದ್ದಾಳೆ. ಆದರೆ ಅದಾದ ನಂತರ ವಿದ್ಯಾಳ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ತನಗೆ ಕಾಯಿಲೆ ಇಲ್ಲದಿದ್ದರೂ ಸುಳ್ಳು ಹೇಳಿ, ಮೋಸ ಮಾಡಿ, ದುಡ್ಡು ದೋಚಿರುವುದಾಗಿ ಪೊಲೀಸ್​ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)
ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − two =
Remember me
