ಕೊಯಮತ್ತೂರು:ಲಾಡ್ಜ್​ನ ಬಾತ್​ರೂಮ್​ನಲ್ಲಿದ್ದ ಅದೊಂದು ಸಣ್ಣ ಕನ್ನಡಿ ಸಹಜವಾಗಿಯೇ ಪೊಲೀಸರಲ್ಲಿ ಅನುಮಾನ ಹುಟ್ಟುಹಾಕಿತ್ತು. ಹೀಗಾಗಿ ತಮಿಳುನಾಡಿನ ಕೊಯಮತ್ತೂರು ಪೊಲೀಸರು ಲಾಡ್ಜ್​ ಮೇಲಿನ ದಾಳಿಯ ವೇಳೆ ಬಾತ್​ರೂಮ್​ನಲ್ಲಿದ್ದ ಕನ್ನಡಿಯನ್ನು ನೂಕಿದಾಗ ಅವರಿಗೊಂದು ಅಚ್ಚರಿಯೇ ಕಾದಿತ್ತು.
ಕನ್ನಡಿಯ ಹಿಂದೆಯೇ ಸಣ್ಣದಾದ ಕೋಣೆಯೊಂದಿತ್ತು. ಅದರಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿಡಲಾಗಿತ್ತು. ತಮ್ಮ ಕರ್ತವ್ಯ ಪಜ್ಞೆಯಿಂದ ಕೊಯಮತ್ತೂರು ಪೊಲೀಸರು 22 ವರ್ಷ ವಯಸ್ಸಿನ ಬೆಂಗಳೂರು ಮೂಲದ ಮಹಿಳೆಯನ್ನು ರಕ್ಷಿಸಿ, ಇದೀಗ ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿದ್ದಾರೆ. ದಾಳಿಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಂದಹಾಗೆ ಈ ಎಲ್ಲ ಪ್ರಸಂಗ ಮೊನ್ನೆಯಷ್ಟೇ (ಬುಧವಾರ) ಜರುಗಿದೆ.
ಇದನ್ನೂ ಓದಿ:ಸುಶಾಂತ್​ ಸಾವಿಗೂ ಮುಂಚೆ ರಿಯಾ-ಮಹೇಶ್​ ಭಟ್​ ನಡುವೆ ನಡೆದ ವಾಟ್ಸ್​ಆ್ಯಪ್​ ಚಾಟ್​ ಬಹಿರಂಗ!
ಮಾಹಿತಿ ಮೇರೆಗೆ ಬುಧವಾರ ಮೇಟುಪಾಳ್ಯಂ ಉಪವಲಯದಲ್ಲಿ ಬರುವ ಕಲ್ಲಾರ್​ ಬಳಿಯ ಊಟಿ ರಸ್ತೆ ಬದಿಯಲ್ಲಿ ಇರುವ ಸರಣ್ಯ ಲಾಡ್ಜ್​ ಮೇಲೆ ಕೊಯಮತ್ತೂರು ಪೊಲೀಸರು ದಾಳಿ ನಡೆಸಿದ್ದರು.​ ಈ ವೇಳೆ ಪೊಲೀಸರು ಲಾಡ್ಜ್​ ಒಳಗಿದ್ದ ರಹಸ್ಯ ಕೋಣೆಯೊಂದನ್ನು ಪತ್ತೆ ಹಚ್ಚಿದರು. ಅದಕ್ಕೆ ಕಿಟಕಿಯಷ್ಟು ಪ್ರವೇಶ ದ್ವಾರವಿತ್ತು. ಕೊಣೆ ಕಾಣದಂತೆ ಅದಕ್ಕೆ ಕನ್ನಡಿಯನ್ನು ಅಂಟಿಸಲಾಗಿತ್ತು.
ಕೊನೆಗೂ ಸಿಂಗಲ್​ ಬೆಡ್​ ಕೋಣೆಯನ್ನು ಪತ್ತೆ ಮಾಡಿದ ಪೊಲೀಸರಿಗೆ ಅದರೊಳಗೆ 22 ವರ್ಷದ ಮಹಿಳೆ ಹಾಗೂ ಆಕೆಯನ್ನು ಹಿಡಿದಿಟ್ಟುಕೊಂಡಿದ್ದ ಮಹೇಂದ್ರನ್​ (46) ಮತ್ತು ಗಣೇಶನ್​ (36) ಪತ್ತೆಯಾಗಿದ್ದರು. ಆರೋಪಿ ಮಹೇಂದ್ರನ್​ ಕಳೆದ ಮೂರು ವರ್ಷಗಳಿಂದ ಲಾಡ್ಜ್​ ನಡೆಸುತ್ತಿದ್ದು, ಅಲ್ಲಿಯೇ ಗಣೇಶನ್​ ರೂಮ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರು ಸಹ ವೆಲ್ಲೋರ್​ ಮೂಲದವರು.
ಇದನ್ನೂ ಓದಿ:ಚಿತ್ರಮಂದಿರದಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ: ವೈರಲ್​ ವಿಡಿಯೋಗೆ ನೆಟ್ಟಿಗರ ತರಾಟೆ!
ಪೊಲೀಸರು ತಕ್ಷಣ ಮಹಿಳೆಯನ್ನು ತಮ್ಮ ವಶಕ್ಕೆ ಪಡೆದು ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿಕೊಟ್ಟುರು ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದರು. ಅಲ್ಲದೆ, ಲಾಡ್ಜ್​ ಅನ್ನು ಸೀಲ್​ ಮಾಡಲಾಯಿತು. ಇದೀಗ ಇವರ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿದ್ದು, ಆರೋಪಿಗಳ ವಿರುದ್ಧ ವಿವಿಧ ಸೆಕ್ಸನ್​ ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.(ಏಜೆನ್ಸೀಸ್​)
ಬಾಯ್ಬಿಟ್ಟರೆ ನಿನ್ನ ತಂಗಿಗೂ ಇದೇ ಗತಿ: ರಾಜಕಾರಣಿ ಪುತ್ರನ ಕರಾಳ ಮುಖ ಬಿಚ್ಚಿಟ್ಟ ಅಪ್ರಾಪ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
