ಚಂಡೀಗಢ:ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ನನ್ನಿಂದ ಕಿಡ್ನಿ ದಾನ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಹರಿಯಾಣದ ಬಲ್ಲಭಗಢ ಮೂಲದ ಮಹಿಳೆಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.
ಎರಡು ವರ್ಷಗಳ ಹಿಂದೆ ಕಿಡ್ನಿ ಕಸಿಗೆ ಸಂಬಂಧಿಸಿದ ಜಾಹಿರಾತನ್ನು ಮಹಿಳೆ ನೋಡಿದ್ದಳು. ಬಳಿಕ ಜಾಹಿರಾತಿನಲ್ಲಿ ಪ್ರಕಟವಾಗಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿ, ತಾನು ಕಿಡ್ನಿ ದಾನ ಮಾಡುವುದಾಗಿ ಹೇಳಿದ್ದಳು. ನಂತರ ಮನಸ್ಸು ಬದಲಿಸಿ ಕಿಡ್ನಿ ದಾನ ಮಾಡುವುದರಿಂದ ಹಿಂಜರಿದಿದ್ದಳು. ಇದಾದ ಬಳಿಕ ಜಾಹಿರಾತು ನೀಡಿದವರು ಮಹಿಳೆಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಕೊನೆಗೆ ಕಿಡ್ನಿ ದಾನ ಮಾಡಿದರೆ ಗಂಡನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದಾಗ, ಆ ಆಫರ್​ ಅನ್ನು ಮಹಿಳೆ ಒಪ್ಪಿಕೊಂಡು ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾಳೆ.
ಫರೀದಾಬಾದ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಪರೇಷನ್​ ನಡೆಯಿತು. ಇದಾದ ಬಳಿಕ ಸಾಕಷ್ಟು ತಿಂಗಳು ಕಳೆದರು ಗಂಡನಿಗೆ ಮಾತ್ರ ಸರ್ಕಾರಿ ಕೆಲಸ ಸಿಗಲಿಲ್ಲ. ಕರೆ ಮಾಡಿ ವಿಚಾರಿಸಿದರೆ ಭರವಸೆ ನೀಡಿದವರಿಂದ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಮಹಿಳೆ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದ ಹಿಂದೆ ಅಂಗಾಂಗ ಮಾಫಿಯಾ ಏನಾದರೂ ಇದೆಯಾ? ಎಂಬ ಆಯಮದಲ್ಲೂ ತನಿಖೆ ನಡೆಸುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರೋ ಆನೆಗಳ ಸಂಖ್ಯೆ ಪತ್ತೆಹಚ್ಚುವಲ್ಲಿ ಶೇ.95 ಮಂದಿ ಫೇಲ್​! ನೀವು ಪತ್ತೆ ಹಚ್ಚುವಿರಾ?

ಬಾಡ ಗ್ರಾಮಸ್ಥರಿಗೆ ಆರ್.ಅಶೋಕ್ ವಾಸ್ತವ್ಯದ ಬೆಳಕು: ಸಿಎಂ ಸ್ವಕ್ಷೇತ್ರದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ

ಬ್ರಿಟನ್​ನಲ್ಲಿ ಕೇರಳ ಮೂಲದ ನರ್ಸ್, ಆಕೆಯ ಮಕ್ಕಳಿಬ್ಬರ ದುರಂತ ಸಾವು: ಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
