ಅಹಮದಾಬಾದ್:ಮಾಜಿ ಪ್ರಿಯಕರ, ತನ್ನನ್ನು ಬಿಟ್ಟ ಮೇಲೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ ಎನ್ನುವ ಸಿಟ್ಟಿನಿಂದ, ಆ ಯುವತಿಯ ಅಶ್ಲೀಲ ಫೋಟೋಗಳನ್ನು ಮಾಜಿ ಲವರ್​ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.
ಇತ್ತೀಚೆಗೆ ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳು. ಇನ್​ಸ್ಟಾಗ್ರಾಂನ ಯಾವುದೋ ನಕಲಿ ಖಾತೆಯಿಂದ ನನ್ನ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಆಕೆ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಈ ಪ್ರಕರಣದ ಆರೋಪಿ ಒಬ್ಬ ಗಂಡಲ್ಲ ಬದಲಾಗಿ ಹೆಣ್ಣು ಎನ್ನುವುದು ತಿಳಿದುಬಂದಿದೆ.
ಫೋಟೋಗಳು ಪೋಸ್ಟ್​ ಆದ ಲೊಕೇಷನ್ ಟ್ರೇಸ್ ಮಾಡಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಮದುವೆಯಾಗಬೇಕಿದ್ದ ಯುವಕನ ಮಾಜಿ ಪ್ರಿಯತಮೆಯೇ ಈ ಕೆಲಸ ಮಾಡಿದ್ದು ಬೆಳಕಿಗೆ ಬಂದಿದೆ. ಆತನ ಇನ್​ಸ್ಟಾಗ್ರಾಂ ಖಾತೆಯ ಯೂಸರ್ ನೇಮ್ ಹಾಗೂ ಪಾಸ್​ವರ್ಡ್ ಆ ಯುವತಿಯ ಬಳಿ ಇತ್ತಂತೆ. ಅದನ್ನು ಬಳಸಿಕೊಂಡು ಅವನ ಖಾತೆಗೆ ಲಾಗ್​ಇನ್ ಆದ ಆಕೆ, ಅದರಲ್ಲಿ ಆತ ಮದುವೆಯಾಗಬೇಕಿದ್ದ ಯುವತಿಯೊಂದಿಗೆ ಮಾಡಿದ್ದ ಚಾಟ್ ಅನ್ನು ನೋಡಿದ್ದಾಳೆ. ಅಲ್ಲಿ ಆಕೆಗೆ ಆ ಯುವತಿಯ ಅಶ್ಲೀಲ ಫೋಟೊಗಳೂ ಸಿಕ್ಕಿವೆ. ಅದನ್ನು ಡೌನ್​ಲೋಡ್ ಮಾಡಿಟ್ಟುಕೊಂಡು, ಫೇಕ್​ ಅಕೌಂಟ್ ಒಂದರ ಮೂಲಕ ಆ ಫೋಟೋಗಳನ್ನು ಪೋಸ್ಟ್​ ಮಾಡಲಾರಂಭಿಸಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವಳು ಬಳಸುತ್ತಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್)
ಹಾಡ ಹಗಲೇ ಮಹಿಳೆಯ ಕೈ ಕಟ್ಟಿ ದರೋಡೆ! ಮಾರಕಾಸ್ತ್ರ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ಹೊತ್ತೊಯ್ದ ಕಿರಾತಕರು!

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − 2 =
Remember me
