ಲಖನೌ:ಪ್ರೀತಿಸಿದ್ದ ಯುವತಿಯನ್ನು ಬರೋಬ್ಬರಿ 21 ವರ್ಷಗಳ ಕಾಲ ಪೀಡಿಸಿ, ಕೊನೆಗೂ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿಲಿಭಿತ್​ನಲ್ಲಿ ನಡೆದಿದೆ. ಮಹಿಳೆ ಮೃತಳಾಗಿ 9 ತಿಂಗಳ ನಂತರ ಆಕೆಯ ನೋವಿನ ಕಥೆ ಹೊರಬಿದ್ದಿದೆ.
ಇದನ್ನೂ ಓದಿ:ಲಗ್ನ ಪತ್ರಿಕೆ ಜತೆ ವೈನ್​ ಬಾಟೆಲ್​, ಸ್ನಾಕ್ಸ್​ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!
21 ವರ್ಷಗಳ ಹಿಂದೆ 21 ವರ್ಷದ ಯೌವನದಲ್ಲಿದ್ದ ಯುವತಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಗ ಆಕೆಗೆ ಕಾಲೇಜಿನ ಕ್ಲರ್ಕ್​ ರಮೇಶ್​ ಸಿಂಗ್​ ಜತೆ ಪ್ರೀತಿ ಹುಟ್ಟಿದೆ. ಇಬ್ಬರು ಕೆಲ ಕಾಲ ಪ್ರೀತಿಯ ಬದುಕನ್ನು ನಡೆಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಯುವತಿಗೆ ರಮೇಶ್​ನ ನಿಜ ಬಣ್ಣ ಗೊತ್ತಾಗಿದೆ. ಯುವತಿಯ ಖಾಸಗಿ ಕ್ಷಣಗಳ ಫೋಟೋಗಳನ್ನು ತೆಗೆದುಕೊಂಡು ರಮೇಶ್​ ಅದನ್ನೇ ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡಲಾರಂಭಿಸಿದ್ದಾನೆ. ನಂತರ ಯುವತಿ ಆತನೊಂದಿಗೆ ಸಂಪರ್ಕ ಮುರಿಯುವ ಪ್ರಯತ್ನ ಮಾಡಿದ್ದಾಳಾದರೂ ಅದು ಸಾಧ್ಯವಾಗಿಲ್ಲ.
ಕೆಲ ವರ್ಷಗಳಲ್ಲಿ ಯುವತಿಗೆ ಮದುವೆ ಮಾಡಲಾಗಿದೆ. ಆದರೆ ಬೆನ್ನು ಬಿಡದ ರಮೇಶ್​, ಯುವತಿಯ ಫೋಟೋಗಳನ್ನು ಆಕೆಯ ಗಂಡನಿಗೆ ತೋರಿಸಿ, ಅವರಿಬಬ್ಬರ ವಿಚ್ಛೇದನವಾಗುವಂತೆ ಮಾಡಿದ್ದಾನೆ. ಅದಾದ ನಂತರ ಯುವತಿ ಮತ್ತೆ ತನ್ನ ತಾಯಿ ಮನೆಯಲ್ಲೇ ಜೀವನ ಮುಂದುವರಿಸಿದ್ದಾಳೆ.
ಇದನ್ನೂ ಓದಿ:ಶಾಲೆಯ ಟಾಯ್ಲೆಟ್​ನಲ್ಲೇ ಪಾರ್ಟಿ ಆಯೋಜಿಸಿದ ಬಾಲಕ! ವಿಚಾರ ತಿಳಿದ ಅಮ್ಮ ನಕ್ಕಿದ್ದೇಕೆ?
ಈ ಮಧ್ಯೆ ಆಕೆಯ ತಂದೆ ತೀರಿಕೊಂಡಿದ್ದಾರೆ. ಅದನ್ನೇ ದುರುಪಯೋಗ ಮಾಡಿಕೊಂಡ ರಮೇಶ್​, ಸಂತ್ರಸ್ತೆಯ ಮನೆಗೇ ಬಂದು ಆಕೆಯ ಮೇಲೆ ಅತ್ಯಾಚಾರವೆಸಗಲಾರಂಭಿಸಿದ್ದಾನೆ. ತಾನೊಬ್ಬನೇ ಅಲ್ಲದೆ, ಸ್ನೇಹಿತರನ್ನೂ ಕರೆದುಕೊಂಡು ಬಂದು ಅತ್ಯಾಚಾರ ಮಾಡಲು ಆರಂಭಿಸಿದ್ದಾನೆ. ಒಂಬತ್ತು ತಿಂಗಳ ಹಿಂದೆ ಸಂತ್ರಸ್ತೆಯ ತಾಯಿ ಮನೆಯಲ್ಲಿಲ್ಲದ ಸಮಯ ನೋಡಿ ಬಂದ ರಮೇಶ್​, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆಯಾಗಿ 9 ತಿಂಗಳ ನಂತರ ಆಕೆಯ ತಾಯಿ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ತನ್ನ ಮಗಳು ಜೀವನಪೂರ್ತಿ ಅನುಭವಿಸಿದ ನೋವಿನ ಕಥೆಯನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಇದೀಗ ರಮೇಶ್​ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)
ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
