ಭೋಪಾಲ್​:ಕಾಮುಕ ಮಗನೊಬ್ಬ ತನ್ನ ಮಲತಾಯಿಯ ಮೇಲೇ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಾನಕ್ಕೆ ಹೆದರಿದ ಕುಟುಂಬ, ಪೊಲೀಸ್​ ದೂರನ್ನೂ ಕೂಡ ಕೊಡದಿರುವಂತೆ ಮಗಳನ್ನು ತಡೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್​! ಇವೆಲ್ಲ ಸೋಶಿಯಲ್​ ಮೀಡಿಯಾ ಎಫೆಕ್ಟ್​!
ಮಧ್ಯಪ್ರದೇಶದ ಭೋಪಾಲ್​ ಮೂಲದ 24 ವರ್ಷದ ಮಹಿಳೆ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದರು. ಮೊದಲ ಹೆಂಡತಿ ತೀರಿಕೊಂಡಿದ್ದ ಆತನಿಗೆ ಅದು ಎರಡನೇ ಮದುವೆಯಾಗಿತ್ತು. ಮೊದಲನೇ ಹೆಂಡತಿಗೆ ಓರ್ವ ಮಗನನ್ನು ಹೊಂದಿರುವ ಆತ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಮೂರು ವರ್ಷಗಳ ಹಿಂದೆ ಆತನೂ ಕೂಡ ಕೊನೆಯುಸಿರೆಳದಿದ್ದಾನೆ. ಆತನ ಮರಣದ ನಂತರ ಮಲತಾಯಿ, ತನ್ನ ಇಬ್ಬರು ಮಕ್ಕಳು ಮತ್ತು ತನ್ನ ಗಂಡನ ಮೊದಲನೇ ಹೆಂಡತಿಯ ಮಗನೊಂದಿಗೆ ಜೀವನವನ್ನು ನಡೆಸುತ್ತಿದ್ದಾಳೆ.
ಶುಕ್ರವಾರ ರಾತ್ರಿ ಮಕ್ಕಳನ್ನು ಕೋಣೆಯಲ್ಲಿ ಮಲಗಿಸಿ, ತನ್ನ ಕೋಣೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದ ಮಲತಾಯಿಯ ಮೇಲೆ ಮೊದಲನೇ ಹೆಂಡತಿಯ ಮಗ ದಾಳಿ ನಡೆಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಚಾರವನ್ನು ಯಾರೆದುರಾದರೂ ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ನೀಡಿದ್ದಾನೆ.
ಇದನ್ನೂ ಓದಿ:ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?
ಮರುದಿನ ಬೆಳಗ್ಗೆ ಧೈರ್ಯದಿಂದ ಮಹಿಳೆ ನಡೆದ ವಿಚಾರವನ್ನು ತನ್ನ ಕುಟುಂಬಸ್ಥರ ಮುಂದೆ ಹೇಳಿದ್ದಾಳೆ. ಆದರೆ ಮಾನಕ್ಕೆ ಅಂಜಿದ ಕುಟುಂಬ ಈ ವಿಚಾರವನ್ನು ನೀನು ಎಲ್ಲಿಯೂ ಹೇಳಬೇಡ, ಮರೆತುಬಿಡು ಎಂದು ಸಮಾಧಾನ ಮಾಡಿದೆ. ಪೊಲೀಸ್​ ಠಾಣೆಗೆ ಹೋಗದಂತೆ ತಡೆಯದೆ. ಆದರೆ ಮನಸ್ಸು ತಾಳದ ಮಹಿಳೆ ಸೋಮವಾರದಂದು ಪೊಲೀಸ್​ ಠಾಣೆಗೆ ಬಂದಿದ್ದು, ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)
ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!

ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
