ಲಖನೌ:ಅವರಿಬ್ಬರು ಎಂಟು ವರ್ಷಗಳ ಕಾಲ ಪ್ರೀತಿಸಿ, ಲಾಕ್​ಡೌನ್​ ಸಮಯದಲ್ಲಿ ಮದುವೆಯಾಗಿದ್ದರು. ಅಪ್ಪ ಅಮ್ಮನ ವಿರೋಧವಿದ್ದರೂ ಮದುವೆಯಾದ ಜೋಡಿಯೊಂದಿಗೆ ಕುಟುಂಬ ಇತ್ತೀಚೆಗೆ ಮಾತನಾಡಲು ಆರಂಭಿಸಿದೆ. ಪ್ರೀತಿ ಒಪ್ಪಿರುವುದಾಗಿ ಹೇಳಿ ಮನೆ ಮಗಳನ್ನು ವಾಪಾಸು ಮನೆಗೆ ಕರೆಸಿಕೊಂಡ ಕುಟುಂಬ ಆಕೆಗೆ ಕೊಟ್ಟಿದ್ದು ಮಾತ್ರ ಯಾರೂ ನಿರೀಕ್ಷಿಸದ ಉಡುಗೊರೆಯನ್ನು.
ಇದನ್ನೂ ಓದಿ:ನನ್ನ ಶಕ್ತಿ ಏನೆಂದು ತೋರಿಸಿದ್ದೇನೆ ಎಂದ ಸಿಪಿವೈ ಆಡಿಯೋ ವೈರಲ್: ಸ್ಕೆಚ್ ಹಾಕಿ ಎಚ್​ಡಿಕೆ ಸರ್ಕಾರ ಬೀಳಿಸಿದ್ದು ನಾನೇ
ಉತ್ತರ ಪ್ರದೇಶದ ಮೈನ್​ಪುರಿ ಜಿಲ್ಲೆಯ ಚಾಂದಿನಿ ಕಶ್ಯಪ್​ (23) ಕಳೆದ ಎಂಟು ವರ್ಷಗಳಿಂದ ಅರ್ಜುನ್​ ಕುಮಾರ್​ (25) ಹೆಸರಿನ ದಲಿತ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ದಲಿತ ಎನ್ನುವ ಕಾರಣಕ್ಕೆ ಚಾಂದಿನಿ ಕುಟುಂಬ ಮದುವೆಗೆ ಒಪ್ಪಿರಲಿಲ್ಲ. ಕುಟುಂಬವನ್ನು ತ್ಯಜಿಸಿ ಬಂದ ಚಾಂದಿನಿ ಜೂನ್​ 12ರಂದು ಅರ್ಜುನ್​ ಜತೆ ದಾಂಪತ್ಯ ಜೀವನ ಆರಂಭಿಸಿದ್ದಾಳೆ. ಉತ್ತರ ಪ್ರದೇಶದಿಂದ ದೆಹಲಿಗೆ ಬಂದ ದಂಪತಿ ಅಲ್ಲೇ ವಾಸ ಹೂಡಿದ್ದಾರೆ.
ಕಳೆದ ನವೆಂಬರ್​ನಲ್ಲಿ ಚಾಂದಿನಿ ಅಣ್ಣಂದಿರು ಆಕೆಯೊಂದಿಗೆ ಮಾತನ್ನಾಡಲು ಆರಂಭಿಸಿದ್ದಾರೆ. ನಾವು ನಿನ್ನ ಪ್ರೀತಿಯನ್ನು ಒಪ್ಪಿದ್ದೇವೆ, ಮನೆಗೆ ಬಾ ಎಂದು ಕರೆದಿದ್ದಾರೆ. ಅದರಂತೆ ನವೆಂಬರ್​ 17ರಂದು ಆಕೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಮೂರು ದಿನಗಳ ನಂತರ ಅಂದರೆ ನವೆಂಬರ್​ 20ರಂದು ಚಾಂದಿನಿ, ಮನೆಯಲ್ಲಿ ತನಗೆ ಹಿಂಸೆ ನೀಡುತ್ತಿರುವುದಾಗಿ ಗಂಡನಿಗೆ ತಿಳಿಸಿದ್ದಾಳೆ. ವಾಪಾಸು ದೆಹಲಿಗೆ ಕಳಿಸುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ಅದಾದ ನಂತರ ಆಕೆಯಿಂದ ಯಾವುದೇ ಕರೆ ಬಂದಿಲ್ಲ. ಈ ವಿಚಾರವಾಗಿ ಅರ್ಜುನ್​ ನವೆಂಬರ್​ 22ರಂದು ಪೊಲೀಸ್​ ದೂರು ದಾಖಲಿಸಿದ್ದಾನೆ.
ಇದನ್ನೂ ಓದಿ:ಪ್ರತಿಭಟನಾಕಾರರ ನಡುವೆ ಸಮಾಜ ವಿರೋಧಿಗಳು ಕಂಡರೆ ಬಂಧಿಸಿ, ನಮಗೆ ಸಿಕ್ಕರೆ ಪೊಲೀಸರಿಗೊಪ್ಪಿಸ್ತೇವೆ- ರೈತರು
ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಚಾಂದಿನಿ ಕೊಲೆಯಾಗಿರುವ ವಿಚಾರ ತಿಳಿದುಬಂದಿದೆ. ತಮಗೆ ಇಷ್ಟವಿಲ್ಲದ ಹುಡುಗನನ್ನು ತಂಗಿ ಮದುವೆಯಾದಳು ಎನ್ನುವ ಸಿಟ್ಟಿನಿಂದ ಆಕೆಯ ಅಣ್ಣ ಅವಳನ್ನು ಕೊಲೆ ಮಾಡಿದ್ದಾನೆ. ಕುಟುಂಬದವರ ಸಮ್ಮುಖದಲ್ಲಿ ತಮ್ಮ ಗದ್ದೆಯಲ್ಲೇ ಆಕೆಯ ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಲಾಗಿದೆ. ಇದೀಗ ಚಾಂದಿನಿ ಅಣ್ಣ ಮತ್ತು ಕೊಲೆಗೆ ಸಹಾಯ ಮಾಡಿದ ಮೂವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
