ನವದೆಹಲಿ:ಅಪ್ಪ ಅಮ್ಮನ ಜತೆ ಜಗಳವಾಡಿಕೊಂಡು ಸಿಟ್ಟಿನಿಂದ ರೈಲ್ವೆ ನಿಲ್ದಾಣಕ್ಕೆ ಬಂದು ಕುಳಿತಿದ್ದ ಯುವತಿಯನ್ನು ರೈಲ್ವೆ ನಿಲ್ದಾಣದಿಂದ ಎಳೆದೊಯ್ದು ಗ್ಯಾಂಗ್​ ರೇಪ್​ ಮಾಡಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.22 ವರ್ಷದ ಯುವತಿ ಗುರುವಾರ ತನ್ನ ಕುಟುಂಬದೊಂದಿಗೆ ಜಗಳವಾಡಿದ್ದು, ಹತ್ತಿರದ ಶಕುರ್​ ಬಸ್ತಿ ರೈಲ್ವೆ ನಿಲ್ದಾಣಕ್ಕೆ ಬಂದು ಕುಳಿತಿದ್ದಾಳೆ. ಅಲ್ಲಿದ್ದ ಮೂವರು ಯುವಕರು ಆಕೆಯನ್ನು ಗಮನಿಸಿದ್ದು, ಆಕೆಯ ಬಳಿ ಹೋಗಿದ್ದಾರೆ.
ಇದನ್ನೂ ಓದಿ:ಬೆಳಿಗ್ಗೆ ಅಂತ್ಯಸಂಸ್ಕಾರ ಮಾಡಿದರು; ಸತ್ತವ ರಾತ್ರಿಯೆನ್ನುವಷ್ಟರಲ್ಲಿ ಎದ್ದು ಬಂದ! ಆತ ಬದುಕಿದ್ದು ಹೇಗೆ ಗೊತ್ತಾ?
ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದಾರೆ. ಯುವತಿ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಅಕೆಯನ್ನು ಅಲ್ಲಿಂದ ಎಳೆದೊಯ್ಯಲಾಗಿದೆ. ಅಲ್ಲೇ ಹತ್ತಿರದ ಸ್ಥಳಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಮತ್ತೆ ತೊಂದರೆ ನೀಡುವುದಾಗಿ ಬೆದರಿಸಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ:ಕುಂಚಿಟಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ; ವಿಶ್ವ ಕುಂಚಿಟಿಗರ ಪರಿಷತ್ ಕಾರ್ಯಕ್ರಮದಲ್ಲಿ ಒತ್ತಾಯ ; ಕೇಂದ್ರದ ಒಬಿಸಿ ಪಟ್ಟಿಗೂ ಸೇರಿಸಿ
ಸ್ವಲ್ಪ ಸಮಯದ ನಂತರ ಮನೆಗೆ ಮರಳಿದ ಯುವತಿ ನಡೆದ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳ ಹುಡುಕಾಟಕ್ಕೆ ವಿಶೇಷ ತಂಡ ರಚಿಸಲಾಗಿದೆ. ಯುವತಿಯ ವೈದ್ಯಕೀಯ ವರದಿ ಬಂದ ನಂತರ ತನಿಖೆ ತೀವ್ರಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
