ನವದೆಹಲಿ:ತಾನು ಕೆಲಸಕ್ಕೆ ಹೋದಾಗ ಹೆಂಡತಿ ಸುರಕ್ಷಿತವಾಗಿರಲಿ ಎಂದು ಗಂಡ, ಆಕೆಯನ್ನು ಇನ್ನೊಬ್ಬನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದ. ಆದರೆ ಕ್ರಮೇಣ ಆ ಇನ್ನೊಬ್ಬನ ಜೊತೆಗಿರುವುದನ್ನೇ ಇಷ್ಟ ಪಡಲಾರಂಭಿಸಿದ ಹೆಂಡತಿ ಗಂಡನನ್ನೇ ತೊರೆದಳು. ಇದು ಗಂಡ ಹಾಗೂ ಆತನ ಕಡೆಯವರನ್ನು ರೊಚ್ಚಿಗೆಬ್ಬಿಸಿದ್ದು, ಅವರೆಲ್ಲ ಸೇರಿ ಆಕೆಯ ವಿರುದ್ಧ ವಿಚಿತ್ರ ಹಾಗೂ ಅಮಾನುಷ ಎನ್ನುವ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ಪ್ರಿಯತಮನಿಗಾಗಿ ಹೀಗೆ ಗಂಡನನ್ನು ತೊರೆದ ಮಹಿಳೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಪತಿಯ ಕಡೆಯವರ ಕೃತ್ಯದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ, ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಪತ್ನಿಯ ಪತಿದ್ರೋಹದಿಂದ ಸಿಟ್ಟಾದ ಸಂಬಂಧಿಕರು ಆಕೆಯ ಗಂಡನ ತಮ್ಮನನ್ನು ಅವಳ ಹೆಗಲ ಮೇಲೆ ಕೂರಿಸಿಕೊಂಡು ಬೀದಿಯಲ್ಲಿ ನಡೆಸಿದ್ದಾರೆ. ಅವಳಿಗೆ ಛೀಮಾರಿ ಹಾಕುತ್ತ, ಅವಮಾನ ಮಾಡುತ್ತ, ಹೆದರಿಸುತ್ತ ಸುಮಾರು ಮೂರು ಕಿ.ಮೀ. ದೂರ ಗಂಡನ ತಮ್ಮನನ್ನು ಹೊತ್ತು ಸಾಗುವಂತೆ ಮಾಡಿದ್ದಾರೆ. ಅಂದಹಾಗೆ ಮಧ್ಯಪ್ರದೇಶದ ಸಗಾಯ್ ಮತ್ತು ಬಾನ್ಸ್ ಕೆಡಿ ಎಂಬ ಪ್ರದೇಶದ ಮಧ್ಯದಲ್ಲಿನ ಗುನಾ ಎಂಬಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಾಲ್ವರನ್ನೂ ಬಂಧಿಸಿರುವುದಾಗಿ ಹೇಳಿರುವ ಪೊಲೀಸರು, ಮುಂದೆ ಇಂಥ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸುವುದಾಗಿಯೂ ಹೇಳಿದ್ದಾರೆ. (ಏಜೆನ್ಸೀಸ್)
ಮಹಿಳೆಯೊಬ್ಬರು ಹೀಗೆ ಹುಡುಗನೊಬ್ಬನನ್ನು ಹೊತ್ತುಕೊಂಡು ಹೋಗುತ್ತಿರುವುದಾದರೂ ಎಲ್ಲಿಗೆ? ಯಾಕೆ?ವಿವರಗಳಿಗೆhttps://t.co/YaFZZchf1Jನೋಡಿpic.twitter.com/zr7DwITN9D
— Vijayavani (@VVani4U)February 16, 2021

‘ರಾಮ ಮಂದಿರಕ್ಕೆ ನನ್ನೆಲ್ಲ ಆಭರಣ ಅರ್ಪಿಸಿ’ ಹೆಂಡತಿಯ ಕೊನೆಯಾಸೆ ನೆರವೇರಿಸಿದ ಗಂಡ

ನವವಿವಾಹಿತ ಬರ್ಬರ ಹತ್ಯೆ: 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವಳ ಬಾಳಿಗೆ ಅಣ್ಣ-ಚಿಕ್ಕಪ್ಪನೇ ವಿಲನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
