ನವದೆಹಲಿ:ಮಹಿಳೆಯರ ಉಡುಗೆತೊಡುಗೆಗಳಲ್ಲಿ ಹೊಸ ಹೊಸ ಫ್ಯಾಶನ್​ ಟ್ರೆಂಡ್​ಗಳು ಜನಪ್ರಿಯವಾಗುತ್ತಿವೆ. ಭಾರತದ ಪಾರಂಪರಿಕ ಉಡುಗೆಯಾಗಿರುವ ಸೀರೆ ಮತ್ತು ಬ್ಲೌಸ್​ಗಳ ಡಿಸೈನುಗಳಲ್ಲೂ ಪ್ರತಿದಿನ ಏನಾದರೂ ಹೊಸತು ಕಾಣಿಸುತ್ತಿರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ಸೀರೆಗೆ ತೊಟ್ಟರೂ ತೊಡದಂಥಾ ಬ್ಲೌಸ್​ ಒಂದನ್ನು ಹೊಂದಿಸಿರುವ ವಿಡಿಯೋ ಒಂದು ವೈರಲ್ ಆಗಿದೆ.
ಈ ಮದುವೆ ಸೀಸನ್​ಗೆ ಸೀರೆ-ರವಿಕೆಯನ್ನೂ ಮೆಹೆಂದಿಯನ್ನೂ ಮೇಳೈಸಿದ ವಿಚಿತ್ರ ಧಿರಿಸನ್ನು ಈಕೆ ಪ್ರದರ್ಶಿಸಿದ್ದಾಳೆ. ಹಕೋಬಾ ಸೀರೆಗೆ ರವಿಕೆಯ ಬದಲು ಅದೇ ಆಕಾರದಲ್ಲಿ ಬೆನ್ನಿಗೆ ಮತ್ತು ಭುಜಗಳಿಗೆ ಮೆಹೆಂದಿಯ ಚಿತ್ತಾರ ಮಾಡಿಕೊಂಡು ಪ್ರಕಟವಾಗಿದ್ದಾಳೆ. ಇವಳ ವಿಡಿಯೋ ತುಣುಕನ್ನು ಥಾನೋಸ್​ ಎಂಬ ಹೆಸರಿಟ್ಟುಕೊಂಡಿರುವ ಇನ್​​ಸ್ಟಾಗ್ರಾಂ ಬಳಕೆದಾರ ಪೋಸ್ಟ್​ ಮಾಡಿದ್ದು, “ಹೀನ್ನಾ ಬ್ಲೌಸ್​… ಮುಂದೇನು?” ಎಂದು ಕ್ಯಾಪ್ಷನ್​ ಬರೆದಿದ್ದಾರೆ.


A post shared by Thanos (@thanos_jatt)
ಮದುವೆ ಮುಂತಾದ ಸಮಾರಂಭಗಳಿಗೆ ಕೈಕಾಲುಗಳಿಗೆ ಮೆಹೆಂದಿ ಹಾಕಿಕೊಳ್ಳುವುದು ವಾಡಿಕೆ. ಆದರೆ ಈ ಮಹಿಳೆ, ಅದನ್ನೇ ಮೈಮುಚ್ಚಬೇಕಾದ ಬ್ಲೌಸ್​ನ ಬದಲಾಗಿ ಬಳಸಿರುವುದು ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟಿಸಿದೆ. ಪೋಲಿಗಳು, ಮೆಹೆಂದಿ ಕಲಾವಿದ ಖುಷಿಯಾಗಿರ್ಬೇಕು ಎಂದರೆ, ಮತ್ತೆ ಹಲವರು ಇದು ಎಂಥಾ ನಾಚಿಕೆಗೇಡಿನ ಕೆಲಸ.. ಫ್ಯಾಶನ್​ ಹೆಸರಲ್ಲಿ ಇನ್ನು ಏನೇನು ಮಾಡ್ತಾರೋ ಎಂದು ಬೈದಿದ್ದಾರೆ.
VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

ಒಮಿಕ್ರಾನ್ ಸೋಂಕು ಬಂದ್ರೆ ಏನು ಚಿಕಿತ್ಸೆ? ಸಿಎಂ ಬೊಮ್ಮಾಯಿ ಹೇಳಿದ್ದು ಹೀಗೆ

Sign in to your account
Please enter an answer in digits:14 − twelve =
Remember me
