ಶರ್ಜಾ:ಕರೊನಾ ಸೋಂಕಿತ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕೇರಳದ ಶರ್ಜಾದಲ್ಲಿ ಘಟನೆ ನಡೆದಿದೆ. ಕೊವಿಡ್​-19 ಸೋಂಕಿತೆಯೋರ್ವಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.
32 ವರ್ಷದ ಈ ಮಹಿಳೆ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದರು. ಜೂನ್​ ತಿಂಗಳಲ್ಲಿ ಇವರಿಗೆ ಕೊವಿಡ್​-19 ಟೆಸ್ಟ್​ ಮಾಡಿಸಿದಾಗ ರಿಪೋರ್ಟ್​ ನೆಗೆಟಿವ್​ ಬಂದಿತ್ತು. ಹೆರಿಗೆಗಾಗಿ ಇವರು ಕಣ್ಣೂರ್​​ನಲ್ಲಿರುವ ಪೆರಿಯಾರಮ್​ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೇ ಇನ್ನೂ ಒಂದು ವಾರ ಇರುವಾಗ ಅಂದರೆ ಜು.24ರಂದು ಮತ್ತೊಮ್ಮೆ ಅವರನ್ನು ಕೊವಿಡ್​-19 ತಪಾಸಣೆಗೆ ಒಳಪಡಿಸಲಾಗಿತ್ತು. ಅದರ ವರದಿ ಪಾಸಿಟಿವ್​ ಎಂದು ಬಂದಿತ್ತು. ಕರೊನಾ ಚಿಕಿತ್ಸೆ ನೀಡುತ್ತಿರುವಾಗಲೇ ಅವರು ಅವಲಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದೃಷ್ಟವಶಾತ್​ ಮಕ್ಕಳಲ್ಲಿ ಕರೊನಾ ಸೋಂಕು ಇರಲಿಲ್ಲ. ಹಾಗೇ ಮಹಿಳೆಗೂ ಸಹ ನಂತರ ಮಾಡಿದ ಟೆಸ್ಟ್​ನಲ್ಲಿ ಕೊವಿಡ್​-19 ನೆಗೆಟಿವ್​ ಎಂದು ವರದಿ ಬಂದಿದೆ.ಇದನ್ನೂ ಓದಿ:ಕಂದನಿಗೆ ಮುಳುವಾಯ್ತು ಕಂಟೈನ್‌ಮೆಂಟ್‌ ಜೋನ್‌! ನಾಣ್ಯ ನುಂಗಿದರೂ ಚಿಕಿತ್ಸೆ ಕೊಡಲಿಲ್ಲ…
ಈ ದಂಪತಿಗೆ ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ನಂತರ ಐವಿಎಫ್​ ಮೂಲಕ ಗರ್ಭ ಧರಿಸಿದ್ದರು. ಇದೀಗ ತಾಯಿ ಮತ್ತು ಮಕ್ಕಳು ಆರೋಗ್ಯವಂತರಾಗಿದ್ದಾರೆ. ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​ನಲ್ಲಿ ಮಹಿಳೆಯ ಕರೊನಾ ಟೆಸ್ಟ್​ ರಿಪೋರ್ಟ್ ನೆಗೆಟಿವ್​ ಎಂದು ಬಂದಿದೆ ಎಂದು ಆಸ್ಪತ್ರೆಯ ವೈದ್ಯೆ ಡಾ. ಮಾಲಿನಿ ರಾಘವನ್​ ತಿಳಿಸಿದ್ದಾರೆ. ಹಾಗೇ, ಇವರಿಗೆ ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರತೆಗೆಯಲಾಗಿತ್ತು ಎಂದೂ ಹೇಳಿದ್ದಾರೆ.
ಮಹಿಳೆಯ ಹೆರಿಗೆ ತುಂಬ ಜಟಿಲವಾಗಿತ್ತು. ಕೊವಿಡ್​-19 ಪೊಸಿಟಿವ್​ ಜತೆಗೆ ಇವರಿಗೆ ಡಯಾಬಿಟಿಕ್​ ಇತ್ತು. ಅಷ್ಟೇ ಅಲ್ಲ ಹೈಪರ್​ ಟೆನ್ಷನ್​​ನಿಂದ ಕೂಡ ಬಳಲುತ್ತಿದ್ದರು. ಸಿಸೇರಿಯನ್​ ಕೂಡ ಒಂದು ಸವಾಲಾಗಿತ್ತು. ಕರೊನಾ ಕಾಣಿಸಿಕೊಂಡರೂ ಜ್ವರವಾಗಲೀ, ಉಸಿರಾಟದ ಸಮಸ್ಯೆಯಾಗಲೀ ಅವರಿಗೆ ಇರಲಿಲ್ಲ ಎಂದಿದ್ದಾರೆ.ಇದನ್ನೂ ಓದಿ:ಕರೊನಾಗೆ ಆಯುರ್ವೇದ ಔಷಧ ಪ್ರಯೋಗ; ಬಿಎಂಸಿಆರ್​ಐ ನೋಟಿಸ್ ವಿಚಾರಕ್ಕೆ ಡಾ.ಗಿರಿಧರ ಕಜೆ ಹೇಳಿದ್ದೇನು?
ಕೊವಿಡ್​ ಇದ್ದುದರಿಂದ ಮಹಿಳೆಯನ್ನು ಐಸೋಲೇಶನ್​ ವಾರ್ಡ್​ನಲ್ಲಿ ಇರಿಸಲಾಗಿತ್ತು. ಅವಳಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರೂ ಕೂಡ ಎಲ್ಲರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಒಂದು ಮಗು 2.25 ಕೆಜಿ ಇದ್ದರೆ ಇನ್ನೊಂದು 2.35 ಕೆಜಿ ಇತ್ತು. ಮಕ್ಕಳನ್ನು 24 ಗಂಟೆಗಳ ಅಬ್ಸರ್ವೇಶನ್​​ನಲ್ಲಿ ಇಡಲಾಗಿತ್ತು ಎಂದು ಹೇಳಿದ್ದಾರೆ.
ಕರೊನಾ ಸೋಂಕಿತ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ವೈದ್ಯರ ತಂಡಕ್ಕೆ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)
ಹೆಂಡತಿ, ಮಕ್ಕಳೆದುರೇ ಇನ್​ಸ್ಪೆಕ್ಟರ್​​ನಿಂದ ಥಳಿತ; ಮನೆ ಬಾಡಿಗೆ ಕೊಡಲಾಗದ ಸಂಕಷ್ಟಕ್ಕೆ ಬೆಂಕಿ ಹಚ್ಚಿಕೊಂಡ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 11 =
Remember me
