ಸೋನೆಪತ್:ರಾಷ್ಟ್ರೀಯ ಮಟ್ಟದ ಯುವ ಕುಸ್ತಿಪಟು ನಿಶಾ ದಹಿಯಾ ಅವರನ್ನು ಹರಿಯಾಣದ ಸೋನೆಪತ್‌ನಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ಸಂಜೆ ವದಂತಿ ಹರಡಿತ್ತು. ರಾಷ್ಟ್ರೀಯ ವಾಹಿನಿ, ವೆಬ್‌ಸೈಟ್‌ಗಳಲ್ಲೂ ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಕಾಣಿಸಿಕೊಂಡವು. ಇದರ ಬೆನ್ನಲ್ಲೇ ಸ್ವತಃ ನಿಶಾ ದಹಿಯಾ, ‘ಇದು ಫೇಕ್ ನ್ಯೂಸ್. ನಾನು ಸುರಕ್ಷಿತವಾಗಿರುವೆ ಮತ್ತು ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ಗೆ ಸಿದ್ಧತೆಯಲ್ಲಿ ತೊಡಗಿರುವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಸ್ಪಷ್ಟನೆ ನೀಡಿದರು. ನಿಶಾ ಆಪ್ತೆಯಾಗಿರುವ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡ ವಿಡಿಯೋದಲ್ಲಿದ್ದರು.
ಘಟನೆಯಲ್ಲಿ ನಿಶಾ ಸಹೋದರ ಕೂಡ ಹತ್ಯೆ ಆಗಿದ್ದು, ತಾಯಿ ಗಂಭೀರ ಗಾಯಗೊಂಡಿದ್ದಾರೆ ಎಂದು ಸುದ್ದಿ ಹರಡಿತ್ತು. ನಿಶಾ ಕಳೆದ ಶುಕ್ರವಾರವಷ್ಟೇ ಸೆರ್ಬಿಯಾದಲ್ಲಿ ನಡೆದ 23 ವಯೋಮಿತಿ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನ 65 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು. ಇದಕ್ಕಾಗಿ ಬುಧವಾರ ಬೆಳಗ್ಗೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಭಿನಂದನೆಯನ್ನೂ ಸಲ್ಲಿಸಿದ್ದರು.
ಬಳಿಕ ಹರಿಯಾಣ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸೋನೆಪತ್‌ನ ಸುಶೀಲ್ ಕುಮಾರ್ ಅಕಾಡೆಮಿ ಬಳಿ ಶೂಟೌಟ್ ಘಟನೆ ನಡೆದಿದ್ದು ಮತ್ತು ನಿಶಾ ದಹಿಯಾ ಎಂಬಾಕೆ ಮತ್ತು ಆಕೆಯ ಸಹೋದರ ಮೃತಪಟ್ಟಿದ್ದು ಕೂಡ ನಿಜವಾಗಿದೆ. ಆದರೆ ಈ ನಿಶಾ ಬೇರೆ ಮಹಿಳೆಯಾಗಿದ್ದಾರೆ. ಈ ನಿಶಾ ಕೂಡ ಕುಸ್ತಿಪಟುವಾಗಿದ್ದರೂ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಲ್ಲ. ಹೆಸರಿನ ಹೋಲಿಕೆಯಿಂದ ಉಂಟಾದ ಗೊಂದಲದಿಂದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಅವರೇ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು.
VIDEO| ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಸಖತ್ ಡ್ಯಾನ್ಸ್, ಮನಸೋತ ಅಭಿಮಾನಿಗಳು

VIDEO: ಮೈದಾನದಲ್ಲಿ ರಿಷಭ್ ಪಂತ್ ತೋರಿದ ಭಾರತೀಯ ಸಂಸ್ಕಾರಕ್ಕೆ ನೆಟ್ಟಿಗರು ಫಿದಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
