ನವದೆಹಲಿ:ಮೆಟ್ರೋ ರೈಲುಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಾಚಿಕೆ ಬಿಟ್ಟು ಡಾನ್ಸ್​ ಮಾಡುವ ಟ್ರೆಂಡ್​ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆನ್​ಲೈನ್​ನಲ್ಲಿ ನೆಟ್ಟಿಗರ ಆಕ್ರೋಶ ಮತ್ತು ಅಧಿಕಾರಿಗಳ ಪುನರಾವರ್ತಿತ ಎಚ್ಚರಿಕೆಯ ನಡುವೆಯೂ ಕೆಲ ಕಂಟೆಂಟ್​ ಕ್ರಿಯೆಟರ್​ಗಳು ತಮ್ಮ ಹುಚ್ಚಾಟವನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರಲ್ಲಿ ಇಬ್ಬರು ಯುವತಿಯರು, ಪ್ರಯಾಣಿಕರು ತುಂಬಿರುವ ರೈಲಿನ ಒಳಗೆ ಭೋಜ್​ಪುರಿ ಹಾಡಿಗೆ ಹುಚ್ಚೆದ್ದು ಕುಣಿದಿದ್ದಾರೆ.
ಬೂದು ಬಣ್ಣದ ಟಾಪ್​ ಮತ್ತು ಕಪ್ಪು ಬಣ್ಣದ ಜೀನ್ಸ್​ ಧರಿಸಿ ಸೊಂಟ ಬಳಕಿಸಿರುವ ಯುವತಿಯನ್ನು ಜಯಾ ಜೆರ್ರಿ ಎಂದು ಗುರುತಿಸಲಾಗಿದೆ. ಈಕೆ ಪ್ರಖ್ಯಾತ ಡಾನ್ಸರ್​ ಮತ್ತು ಕಂಟೆಂಟ್​ ಕ್ರಿಯೆಟರ್​ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ 1.7 ಲಕ್ಷ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಭೋಜ್​ಪುರಿಯ ಕೇಸರಿ ಲಾಲ್​ ಯಾದವ್​ ಅವರ ಸಾಜ್​ ಕೆ ಸವಾರ್​ ಕೆ ಹಾಡಿಗೆ ರೈಲಿನ ಒಳಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ಕೊನೆಯಲ್ಲಿ ಜಯಾ ಜತೆ ಆಕೆಯ ಸ್ನೇಹಿತೆಯು ಸಹ ಸೇರಿಕೊಂಡು ಹಾಡಿಗೆ ಹೂಕ್​ ಸ್ಟೆಪ್​ ಹಾಕುತ್ತಾರೆ. ಇದೇ ಸಂದರ್ಭದಲ್ಲಿ ಇಬ್ಬರು ರೈಲಿನ ಒಳಗೆ ಮಲಗಿರುವುದನ್ನು ಜಯಾ ಅವರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು.

A post shared by Jaya Jerry (@jayajerry8572)

ಭೋಜ್​ಪುರಿ ಲವರ್ಸ್​ ಇದು ಹೇಗಿದೆ ಎಂದು ನನಗೆ ತಿಳಿಸಿ ಎಂದು ವಿಡಿಯೋಗೆ ಜಯಾ ಅಡಿಬರಹ ನೀಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡಾಗಿನಿಂದ ಈವರೆಗೂ 7 ಮಿಲಿಯನ್​​ಗೂ ಅಧಿಕ ವೀಕ್ಷಣೆ ಮತ್ತು 1.7 ಲಕ್ಷಕ್ಕೂ ಅಧಿಕ ಲೈಕ್​ಗಳು ಬಂದಿವೆ. ಕಾಮೆಂಟ್​ ಬಾಕ್ಸ್​ನಲ್ಲಿ ಅಭಿಪ್ರಾಯಗಳ ಹೊಳೆಯೇ ಹರಿದಿದ್ದು, ಕೆಲವರು ಜಯಾ ಅವರ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ರೀಲ್​ ಶೂಟ್​ ಮಾಡಿದ ಸ್ಥಳವನ್ನು ಪ್ರಶ್ನೆ ಮಾಡಿದ್ದಾರೆ. ಇದೊಂದು ನ್ಯೂಸೆನ್ಸ್​ ಆಗಿದ್ದು, ಆಕೆಯ ವಿರುದ್ಧ ಭಾರತೀಯ ರೈಲ್ವೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗಮನಿಸಬೇಕಾದ ಸಂಗತಿ ಏನೆಂದರೆ, ಜಯಾ ಅವರು ಜನಪ್ರಿಯ ಡಾನ್ಸ್​ ಗ್ರೂಪ್​ ಬಾಂಬ್ ಫೈರ್ ಕ್ರ್ಯೂ ಭಾಗವಾಗಿದ್ದರು. ಈ ಗ್ರೂಪ್​ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನ ಸೀಸನ್ 9ರಲ್ಲಿ ರನ್ನರ್-ಅಪ್ ಸ್ಥಾನವನ್ನು ಪಡೆದಿತ್ತು. ಜಯಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೀ ಡಾನ್ಸ್​ ವಿಡಿಯೋಗಳೇ ತುಂಬಿದೆ.(ಏಜೆನ್ಸೀಸ್​)
ಡಿ.2ರಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ

ಹಣ ಕೊಟ್ಟು ವಿಕೆಟ್​ ಪಡೀತಾರಾ ಶಮಿ?! ಮಾಜಿ ಪತ್ನಿ ಹೇಳಿಕೆ ಹಿಂದಿನ ಅಸಲಿಯತ್ತು ಇಲ್ಲಿದೆ….

‘ಹೈದರಾಬಾದ್​​ ಅನ್ನು ಭಾಗ್ಯನಗರ ಮಾಡುತ್ತೇವೆ’: ತೆಲಂಗಾಣ ಬಿಜೆಪಿ ಮುಖ್ಯಸ್ಥ ಕಿಶನ್ ರೆಡ್ಡಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight + 20 =
Remember me
