ಮುಂಬೈ:ನಗರದ ಅಕ್ಷ ಬೀಚ್​ ಬಳಿ ಪ್ಲಾಸ್ಟಿಕ್​ ಚೀಲದಲ್ಲಿ ಮಹಿಳೆಯ ಮೃತ ದೇಹ ಸಿಕ್ಕಿದ್ದ ಪ್ರಕರಣವನ್ನು ಮುಂಬೈ ಪೊಲೀಸರು ಇದೀಗ ಬೇಧಿಸಿದ್ದಾರೆ. ತನಿಖೆ ನಡೆಸಿದಾಗ ಮಹಿಳೆಯ ಮಾವನ ನಿಜ ರೂಪ ಬಯಲಾಗಿದೆ.
ಇದನ್ನೂ ಓದಿ:ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!
ನಂದಿನಿ ಮತ್ತು ಪಂಕಜ್​ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಈ ಮದುವೆ ಪಂಕಜ್​ನ ಅಪ್ಪ ಕಮಲ್​ ರೈ (55)ಗೆ ಇಷ್ಟವಿರಲಿಲ್ಲವಂತೆ. ಮದುವೆ ತಡೆಯಲು ಸಾಕಷ್ಟು ಪ್ರಯತ್ನವನ್ನು ಆತ ಮಾಡಿದ್ದನಂತೆ. ಮದುವೆಯಾದ ಮೇಲೂ ಸೊಸೆಯನ್ನು ಯಾವಾಗಲೂ ಅನುಮಾನದಿಂದಲೇ ನೋಡುತ್ತಿದ್ದನಂತೆ. ಡಿಸೆಂಬರ್​ 9ರಂದು ಮಗ ಹೊರಗಡೆ ಕೆಲಸಕ್ಕೆ ಹೋದಾಗ ಸೊಸೆ ರೂಮಿನಲ್ಲಿ ಮಲಗಿದ್ದಳು. ಆ ಸಮಯದಲ್ಲಿ ಮನೆಗೆ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡ ಕಮಲ್​, ಸೊಸೆಯ ರೂಮಿಗೆ ತೆರಳಿ ಆಕೆಯ ಕೈ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಆಕೆಯ ಮೃತ ದೇಹವನ್ನು ಪ್ಲಾಸ್ಟಿಕ್​ ಚೀಲವೊಂದರಲ್ಲಿ ಕಟ್ಟಿ ಪ್ಯಾಕ್​ ಮಾಡಿ ಮನೆ ಹತ್ತಿರದ ನಾಲೆಯಲ್ಲಿ ಬಿಸಾಕಿದ್ದಾರೆ.
ಇದನ್ನೂ ಓದಿ:ಬೆಳ್ತಂಗಡಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಸ್‌ಡಿಪಿಐ ಬೆಂಬಲಿಗರು
ಡಿಸೆಂಬರ್​ 9ರಂದು ನಾಲೆ ಸೇರಿದ್ದ ಶವ ಡಿಸೆಂಬರ್​ 24ರಂದು ಅಕ್ಷ ಬೀಚ್​ ತಲುಪಿದೆ. ಬೀಚ್​ನ ದಡದಲ್ಲಿದ್ದ ಚೀಲದಲ್ಲಿ ಶವವಿರುವುದನ್ನು ಗುರುತಿಸಿದ ದಾರಿಹೋಕನೊಬ್ಬ ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಕಂಡುಹಿಡಿದಿದ್ದಾರೆ. ಇದೀಗ ಕಮಲ್​ ರೈ ಮತ್ತು ಆತನಿಗೆ ಸಹಾಯ ಮಾಡಿದ್ದ ಇಬ್ಬರು ಸ್ನೇಹಿತರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)
ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
