ತಿರುವನಂತಪುರಂ:ನೆಚ್ಚಿನ ಸಿನಿಮಾ ಕಲಾವಿದರು ಎದುರಿಗೆ ಸಿಕ್ಕಾಗ ಅನೇಕ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಹೊಸ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುವಾಗಲೂ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದನ್ನು ಆ ವಿಡಿಯೋ ಹೇಳುತ್ತಿದೆ.
ಹೌದು, ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಅಭಿಮಾನಿಯೊಬ್ಬರ ಕೂದಲಿಗೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಮಹಿಳಾ ಅಭಿಮಾನಿ ಪಾರಾಗಿದ್ದಾರೆ. ಮಹಿಳೆಯೊಬ್ಬರು ನಟಿ ನಿತ್ಯಾ ದಾಸ್​ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಈ ಘಟನೆ ನಡೆದಿದೆ.
ಬ್ಯೂಟಿ ಪಾರ್ಲರ್​ ಉದ್ಘಾಟಿಸಲು ನಟಿ ನಿತ್ಯಾ ದಾಸ್​ ಅವರು ಕೋಯಿಕ್ಕೋಡ್​ನ ಕೊಡುವಲ್ಲಿ ಏರಿಯಾಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ನಿತ್ಯಾ ಅವರೊಂದಿಗೆ ಮಹಿಳೆ ಸೆಲ್ಫಿ ತೆಗೆದುಕೊಳ್ಳುವಾಗ ಇದ್ದಕ್ಕಿದ್ದಂತೆ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ನಟಿ ಅಲ್ಲಿಂದ ಓಡಿ ಹೋಗಿದ್ದಾರೆ. ಉಳಿದ ಮಹಿಳೆಯರು ಬೆಂಕಿಯನ್ನು ನಂದಿಸಿದರು. ಸ್ವಲ್ಪ ಎಚ್ಚರ ತಪ್ಪಿದ್ದರೂ ಬೆಂಕಿ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್​ ಮಹಿಳೆಗೆ ಏನು ಆಗಿಲ್ಲ.
ನಟ ಮಾಮುಕ್ಕೋಯ ಅವರೊಂದಿಗೆ ನಿತ್ಯಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಜನರು ನಿತ್ಯಾ ಜೊತೆ ಮಾತನಾಡುವುದು ಮತ್ತು ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಈ ನಡುವೆ ನಟಿಯೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿದ್ದಾಗ ಹಿಂದೆ ಇದ್ದ ಮೇಣದ ಬತ್ತಿಯಿಂದ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ನೋಡಿದ ಕೂಡಲೇ ನಟಿ ನಿತ್ಯ ಕಿರುಚಾಡುತ್ತಿರುವುದನ್ನು ಕಾಣಬಹುದು. (ಏಜೆನ್ಸೀಸ್​)

ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ ರಚಿಸಿ: ಸರ್ಕಾರಕ್ಕೆ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಲಹೆ; ಕನ್ನಡದಲ್ಲಿ ಸೇವೆ ನೀಡದ ಬ್ಯಾಂಕ್ ಧಿಕ್ಕರಿಸಿ

ಭಾಷೆ-ಬದುಕಿಗೆ ಒತ್ತು: ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಲಹೆಗಳು ಜಾರಿಯಾಗಲಿ

ವಿಕಸಿತ ಸಿರಿಕನ್ನಡವೀಗ ವಿಶ್ವಮುಖಿ: ಕನ್ನಡಕ್ಕೆ ಕೇಡು ಬಯಸುವವರಿಗೆ ಮಾತಿನ ಏಟು; ಅಕ್ಷರ ಜಾತ್ರೆಗೆ ಅದ್ದೂರಿ ಚಾಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
