ಜಾರ್ಖಂಡ್‌:ಮದುವೆ ಎಂದರೆ ಸಂಭ್ರಮ ಸಡಗರ ಎನ್ನುವ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಒಂದು ಮದುವೆಗೆ ಸಾವಿರಾರು ಸಮಸ್ಯೆಗಳು ಬರುತ್ತವೆ. ಗಂಡು-ಹೆಣ್ಣು ಒಪ್ಪಿದರೆ ಅವರ ಕುಟುಂಬದಿಂದಲೇ ಸಮಸ್ಯೆ ಇರುತ್ತದೆ. ಆದರೆ ಇಲ್ಲೊಬ್ಬಳು ಯುವತಿ ಮದುವೆಯಾಗಲು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಆಕೆಯ ಕೂದಲು ಕತ್ತರಿಸಿದ ಘಟನೆ ನಡೆದಿದೆ.
ಇದನ್ನೂ ಓದಿ:ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?
ಜಾರ್ಖಂಡ್‌ನ ಪಲಮು ಎಂಬಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಥಳಿಸಿ, ಆಕೆಯ ಕೂದಲನ್ನು ಕತ್ತರಿಸಿ, ನಂತರ ಗ್ರಾಮ ಪಂಚಾಯತ್‌ನ ಆದೇಶದ ಮೇರೆಗೆ ಮೆರವಣಿಗೆ ನಡೆಸಲಾಯಿತು. ಯುವತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ಪಂಚಾಯತ್ ಸದಸ್ಯರು ಮತ್ತು ಮಹಿಳೆಯ ಅತ್ತಿಗೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ಕಾರ ರಚನೆಗೂ ಮುನ್ನ ಶುರುವಾಯ್ತು ಸಚಿವ ಸ್ಥಾನಕ್ಕೆ ಸ್ಪರ್ಧೆ; ವಿವಿಧ ಸಮುದಾಯದ ನಾಗರಿಕರಿಂದಲೂ ಒತ್ತಡ
ನಡೆದಿದ್ದೇನು?:ಯುವತಿ ಮದುವೆಯನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಆಕೆ ಮದುವೆಯಾಗಲು ನಿರಾಕರಿಸಿದಳು. ನಂತರ ಯುವತಿ ಸುಮಾರು 20 ದಿನಗಳ ಕಾಲ ನಾಪತ್ತೆಯಾಗಿದ್ದಳು. ಅವಳು ಹಿಂದಿರುಗಿದ ನಂತರ, ಆಕೆಯನ್ನು ಗ್ರಾಮ ಪಂಚಾಯತಿಗೆ ಕರೆಯಲಾಯಿತು. ಆಕೆಯ ಕುಟುಂಬದ ಸದಸ್ಯರು ಮತ್ತು ಇತರ ಸಂಬಂಧಿಕರು ಕೂಡ ಪಂಚಾಯತ್‌ನಲ್ಲಿ ಹಾಜರಿದ್ದರು. ಪಂಚಾಯತ್ ಸದಸ್ಯರ ನಿರ್ಧಾರದ ಆಧಾರದ ಮೇಲೆ, ಆಕೆಯ ಕೂದಲನ್ನು ಕತ್ತರಿಸಿ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಅಮೆಜಾನ್ ಭಾರತದಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 5 =
Remember me
