ನಮ್ಮ ದೇಶದಲ್ಲಿ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿರುವ ಕ್ಯಾನ್ಸರ್​ ಎಂದರೆ ಸ್ತನದ ಕ್ಯಾನ್ಸರ್​(ಬ್ರೆಸ್ಟ್​ ಕ್ಯಾನ್ಸರ್). ಪ್ರತಿವರ್ಷ 1 ಲಕ್ಷ 60 ಸಾವಿರ ಹೊಸ ಸ್ತನ ಕ್ಯಾನ್ಸರ್​ ಕೇಸುಗಳು ಪತ್ತೆಯಾಗುತ್ತಿವೆ. ಸುಮಾರು 80 ಸಾವಿರ ಮಹಿಳೆಯರು ಈ ಕ್ಯಾನ್ಸರ್​​ನಿಂದಾಗಿ ಸಾವಪ್ಪುತ್ತಿದ್ದಾರೆ. ಇದು ಆತಂಕಭರಿತ ವಿಷಯವಾಗಿದೆ. ಈ ಹೆಚ್ಚಳಕ್ಕೆ ಕಾರಣ ಏನು? ರೋಗಲಕ್ಷಣಗಳೇನು? ತಪಾಸಣೆ ಮಾಡುವ ವಿಧಾನಗಳೇನು? ಎಂಬ ಬಗ್ಗೆ ಶಿವಮೊಗ್ಗದ ಉಷಾ ನರ್ಸಿಂಗ್​ ಹೋಂನಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆಡಾ. ರಕ್ಷಾ ರಾವ್ಅವರುವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ರೋಗಲಕ್ಷಣ:ಎರಡೂ ಸ್ತನಗಳ ಮೇಲೆ ಅಥವಾ ಒಂದು ಸ್ತನದ ಮೇಲೆ ಕೈಗೆ ಸಿಗುವಂತಹ ಸಣ್ಣ ಗೆಡ್ಡೆ ಕಂಡುಬಂದಲ್ಲಿ, ಈ ಗೆಡ್ಡೆ ಗಟ್ಟಿಯಾಗಿ ಚರ್ಮಕ್ಕೆ ಅಂಟಿಕೊಂಡಿರುತ್ತದೆ ಮತ್ತು ಅದರ ಮೇಲೆ ಕಿತ್ತಳೆ ಹಣ್ಣಿನ ಸಿಪ್ಪೆಯಂತಹ ದಪ್ಪ ಚರ್ಮ ಇರುತ್ತೆ. ಈ ಚರ್ಮ ಕೆಂಪು ಅಥವಾ ಬೇರೆ ಬಣ್ಣಕ್ಕೆ ತಿರುಗಿರಬಹುದು. ವಿವರವಾಗಿ ಪರೀಕ್ಷಿಸಿದಾಗ ಕಂಕುಳಿನ ಭಾಗದ ಕಡೆಗೂ ಸಣ್ಣಪುಟ್ಟ ಗೆಡ್ಡೆಗಳಿರಬಹುದು. ಈ ರೀತಿಯ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
ಇದನ್ನೂ ಓದಿ:ಮೈಸೂರು ಗ್ಯಾಂಗ್​ ರೇಪ್​: ಆ ತಡರಾತ್ರಿ ಪೊಲೀಸರನ್ನೇ ಚಾಕುವಿನಿಂದ ಇರಿಯಲು ಮುನ್ನುಗ್ಗಿದ್ದ ಆರೋಪಿ
ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಸಂಬಂಧಿ ಸಾವುಗಳು ಹೆಚ್ಚಾಗಿ ಸಂಭವಿಸುವುದಕ್ಕೆ ಹಲವು ಕಾರಣಗಳಿವೆ – ರೋಗದ ಅರಿವು ಇಲ್ಲದಿರುವುದು, ಆರೋಗ್ಯದ ಬಗ್ಗೆ ಅಸಡ್ಡೆ ಹೊಂದಿರುವುದು, ಭಯದಿಂದ ತಪಾಸಣೆ ಮಾಡಿಕೊಳ್ಳದೆ ಇರುವುದು. ಗೊತ್ತಾದ್ರೂ ತಮ್ಮ ಮನೆಯ ಜವಾಬ್ದಾರಿಯಿಂದಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಇರುವುದು ಪ್ರಮುಖವಾದವು. ವೈದ್ಯರ ಬಳಿ ತಪಾಸಣೆಗೆ, ಆಸ್ಪತ್ರೆಗೆ ಹೋದರೆ ಏನನ್ನುತ್ತಾರೋ ಎಂಬ ಅಂಜಿಕೆಯಿಂದ ಹಲವು ಮಹಿಳೆಯರು ಮನೆಯವರಿಗೂ ತಮ್ಮ ಸಮಸ್ಯೆ ಹೇಳದೆ ಅತಿಯಾದ ಸ್ಟೇಜ್​ಗೆ ಹೋಗುವವರೆಗೆ ವೈದ್ಯರ ಬಳಿ ಹೋಗೋದೇ ಇಲ್ಲ. ಹೀಗಾಗಿ ಶೇ. 75 ರಷ್ಟು ಕೇಸುಗಳು 3ನೇ ಅಥವಾ 4ನೇ ಹಂತದಲ್ಲಿ ವೈದ್ಯರ ಮುಂದೆ ಬರುತ್ತೆ. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ.
ಹೈರಿಸ್ಕ್​ ಯಾರಿಗೆ?
ಕೆಲವು ವರ್ಗಗಳ ಮಹಿಳೆಯರಿಗೆ ಸ್ತನ ಕ್ಯಾನ್ಸರ್​ನ ಅಪಾಯ ಹೆಚ್ಚಿರುವುದರಿಂದ ಅವರು ಎಚ್ಚರಿಕೆಯಿಂದ ಇರಬೇಕು.ಮೊದಲನೆಯದಾಗಿ, ಕೌಟುಂಬಿಕ ಹಿನ್ನೆಲೆ ಇರುವವರು ಅಂದರೆ ತಾಯಿಯ ಮನೆಯ ಕಡೆ – ಅಮ್ಮ, ಅಜ್ಜಿ, ಅಕ್ಕತಂಗಿ, ದೊಡ್ಡಮ್ಮಚಿಕ್ಕಮ್ಮ ಯಾರಿಗಾದರೂ ಕ್ಯಾನ್ಸರ್​ ಉಂಟಾಗಿದ್ದಲ್ಲಿ ಅಂಥವರು 30 ನೇ ವರ್ಷ ದಾಟಿದಾಗಿನಿಂದಲೇ ಸ್ತನ ತಪಾಸಣೆ ಮಾಡಿಸುತ್ತಿರಬೇಕು.ಎರಡನೆಯದಾಗಿ, ಯಾವುದೇ ವೈದ್ಯಕೀಯ ಸಮಸ್ಯೆಗಾಗಿ ಎಕ್ಸ್​ರೇ ಚಿಕಿತ್ಸೆ ಮಾಡಿಸಿದ್ದರೆ, ಚಿಕಿತ್ಸೆಯ ನಂತರ 2 ಅಥವಾ 3 ವರ್ಷಗಳಿಗೊಮ್ಮೆ ಸ್ತನ ತಪಾಸಣೆ ಮಾಡಿಸುತ್ತಿರಬೇಕು.ಮೂರನೆಯದಾಗಿ, ಹಾಲುಣಿಸುವಿಕೆಯನ್ನು ಸರಿಯಾಗಿ ಮಾಡದೆ ಇರುವವರು, ಕಡಿಮೆ ಅವಧಿಗೆ ಹಾಲುಣಿಸಿದವರು ಈ ರೋಗಕ್ಕೆ ತುತ್ತಾಗುವುದು ಹೆಚ್ಚು ಕಂಡುಬಂದಿದೆ. ಆದ್ದರಿಂದ ಅವರು ಎಚ್ಚರಿಕೆಯಿಂದಿರಬೇಕು.
ಇದನ್ನೂ ಓದಿ:ಗಂಡ ಪ್ರೀತಿಯಿಂದ ತಂದ ಪಾನಿಪುರಿಯೇ ಪತ್ನಿಯ ಆತ್ಮಹತ್ಯೆಗೆ ಕಾರಣವಾಯ್ತು! ಅಷ್ಟಕ್ಕೂ ಆಗಿದ್ದೇನು?
ತಪಾಸಣೆ ಹೇಗೆ? ಯಾವಾಗ?
ಮಹಿಳೆಯರು ಸ್ತನ ತಪಾಸಣೆ ಅಥವಾ ಬ್ರೆಸ್ಟ್ ಸ್ಕ್ರೀನಿಂಗ್​ ಮಾಡಿಸುವುದರಿಂದ ಸ್ತನ ಕ್ಯಾನ್ಸರ್​ ಇದ್ದರೆ ಪತ್ತೆಯಾಗುತ್ತದೆ. ಮ್ಯಾಮೋಗ್ರಫಿ ಎನ್ನುವ ಎಕ್ಸ್​ರೇ ಯಂತ್ರದ ಸಹಾಯದಿಂದ ಎರಡೂ ಸ್ತನಗಳನ್ನು ತಪಾಸಣೆ ಮಾಡುವ ಪರೀಕ್ಷೆ ಇರುತ್ತದೆ. ಇದರಲ್ಲಿ ಸಣ್ಣ ಗೆಡ್ಡೆಗಳಿದ್ದರೂ ಕಂಡುಬರುತ್ತವೆ. ಜೊತೆಗೆ, ಮ್ಯಾಮೋಸೋನೋಗ್ರಫಿ ಎಂಬ ಪೂರಕ ಸ್ಕ್ಯಾನಿಂಗ್​ ಮಾಡಿಸುವುದೂ ಅಗತ್ಯ.
40 ವರ್ಷ ದಾಟಿದ ಮೇಲೆ ರಿಸ್ಕ್​ ಫ್ಯಾಕ್ಟರ್​ ಇಲ್ಲದ ಜನರು 3 ವರ್ಷಕ್ಕೊಮ್ಮೆ ಬ್ರೆಸ್ಟ್​ ಸ್ಕ್ರೀನಿಂಗ್​ ಮಾಡಿಸಬೇಕು. ಹೈರಿಸ್ಕ್​ ಕ್ಯಾಟಗರಿಯ ಮಹಿಳೆಯರು 30 ವರ್ಷ ದಾಟಿದ ಮೇಲೆಯೇ ಸ್ಕ್ರೀನಿಂಗ್ ಮಾಡಿಸಲು ಆರಂಭಿಸಬೇಕು.
ಇದನ್ನೂ ಓದಿ:ಮನೆಯ ಬಳಿ ಆಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ!
ನಿರ್ವಹಣೆ ಹೇಗೆ? ಚಿಕಿತ್ಸೆ ಏನು?
ಸ್ತನ ಕ್ಯಾನ್ಸರ್​ಗೆ ಮುಂಚೆ ಮಾಡಿಫೈಡ್​ ರಾಡಿಕಲ್ ಮಾಸ್ಟೆಕ್ಟಮಿ ಎಂಬ ಇಡೀ ಸ್ತನವನ್ನು ತೆಗೆಯುವ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಈಗ ಇದರೊಂದಿಗೆ, 25 ರಿಂದ 40 ವರ್ಷಗಳ ವಯಸ್ಸಿನಲ್ಲೇ ಈ ರೋಗಕ್ಕೆ ತುತ್ತಾಗುವ ಮಹಿಳೆಯರಿಗಾಗಿ ಬ್ರೆಸ್ಟ್​ ಕನ್ಸರ್ವೇಷನ್ ಸರ್ಜರಿ ಎಂದು ಮಾಡುತ್ತಾರೆ. ಇದರಲ್ಲಿ ಸ್ತನಭಾಗದ ಟಿಶ್ಯುವನ್ನು ಉಳಿಸಿಕೊಳ್ಳುವ ಇಲ್ಲವೇ ಬೇರೆಡೆಯ ಟಿಶ್ಯುವನ್ನು ಅಲ್ಲಿಗೆ ಹೊಂದಿಸುವ ಸರ್ಜರಿ ನಡೆಯುತ್ತದೆ.
ಈ ಸರ್ಜರಿಗಳ ನಂತರ ರೇಡಿಯೋ ಥೆರಪಿ. ಖೀಮೋಥೆರಪಿ, ಹಾರ್ಮೋನ್​ ಥೆರಪಿಯಂತಹ ಚಿಕಿತ್ಸೆಗಳನ್ನು ವೈದ್ಯರ ಸಲಹೆಯನುಸಾರ ಪಡೆಯಬೇಕಾಗುತ್ತದೆ. 2 ರಿಂದ 5 ವರ್ಷಗಳವರೆಗೆ ಮಾತ್ರೆಗಳು ಮುಂತಾದ ಚಿಕಿತ್ಸೆ ನೀಡಬಹುದು. ಇದು ಪೋಸ್ಟ್​ ಸರ್ಜರಿ ಸರ್ವೈವಲ್​ ರೇಟ್​ಅನ್ನು ಹೆಚ್ಚಿಸಿಕೊಳ್ಳಲು ಸಹಕಾರಿ.
ಇದನ್ನೂ ಓದಿ:ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!
ಸ್ವಸ್ತನ ತಪಾಸಣೆ(Self Breast Examination): 25 ರಿಂದ 30 ವರ್ಷ ಮೀರಿರುವ ಮಹಿಳೆಯರು ಮುಟ್ಟಿನ ಒಂದು ವಾರದ ನಂತರ ಕುಳಿತುಕೊಂಡು ಮುಂದೆ ಬಾಗಿ ಮತ್ತು ಮಲಗಿಕೊಂಡು ಸ್ವಸ್ತನ ತಪಾಸಣೆ ಮಾಡಿಕೊಳ್ಳಬಹುದು. ಕೈಬೆರಳುಗಳನ್ನು ಚಪ್ಪಟೆಯಾಗಿರಿಸಿಕೊಂಡು ಸ್ತನದ ಮೇಲೆ ಎಸ್​ ಆಕಾರದಲ್ಲಿ ಸ್ಪರ್ಶಿಸುತ್ತಾ ಗೆಡ್ಡೆಗಳಿವೆಯೇ ಎಂದು ತಪಾಸಣೆ ಮಾಡಬೇಕು. ಆಗ ಶುರುವಿನಲ್ಲೇ ರೋಗ ಪತ್ತೆಯಾಗಿ ಸಕಾಲಿಕವಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬಹುದು.
ಮುಟ್ಟಿನ ದೋಷ ಮತ್ತು ಬೊಜ್ಜು ನಿವಾರಣೆಗೆ ಹೇಳಿಮಾಡಿಸಿದ ಆಸನವಿದು!

ಮುಟ್ಟಿನ ಸಮಯದಲ್ಲಿ ಕರೊನಾ ಲಸಿಕೆ ಪಡೆಯಬಹುದೇ ? ಇಲ್ಲಿದೆ ಉತ್ತರ

ಗೂನು ಬೆನ್ನು ನಿವಾರಣೆಗೆ ಈ ಯೋಗಾಸನ ಸಹಕಾರಿ

Sign in to your account
Please enter an answer in digits:4 × 3 =
Remember me
