ಉತ್ತರಪ್ರದೇಶ:ಅಯೋಧ್ಯೆಯ ಪವಿತ್ರ ಕೊಳದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್​ ಮಾಡಿದ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ವೈರಲ್​ ವಿಡಿಯೋಗೆ ಇದೀಗ ಪೊಲೀಸರು ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅರಣ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಎಸ್​​.ಟಿ. ಸೋಮಶೇಖರ್​, ಡಿಕೆಶಿ ಜಂಟಿ ಸುದ್ದಿಗೋಷ್ಠಿ
ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಹಿಳೆಯು ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಭಕ್ತರು ಪವಿತ್ರ ಸ್ನಾನಕ್ಕಾಗಿ ಭೇಟಿ ನೀಡುವ ಸ್ಥಳದಲ್ಲಿ ಮಹಿಳೆ ಡ್ಯಾನ್ಸ್ ರೀಲ್ಸ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಮೋಜಿಗಾಗಿ ಅಪ್​ಲೋಡ್​ ಮಾಡಿದ್ದಾರೆ.
ಇದನ್ನೂ ಓದಿ:ನನ್ನನ್ನು ಎಷ್ಟು ಅಳಿಸುತ್ತೀರಿ ಎಂದ ಬಿಗ್​ ಬಿ; ಕೆಬಿಸಿ ವೇದಿಕೆ ಮೇಲೆಯೇ ಅಮಿತಾಭ್ ಕಣ್ಣೀರು..!
ಮಹಿಳೆ ಬಾಲಿವುಡ್​ ಚಿತ್ರದ ಹಾಡಿಗೆ ನೃತ್ಯ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ಭಾರೀ ವೈರಲ್ ಆದ ಬೆನ್ನಲ್ಲೇ ಅಯೋಧ್ಯೆ ಪೊಲೀಸರು ಪ್ರತಿಕ್ರಿಯಿಸಿದ್ದು, ಮಹಿಳೆಯ ವಿರುದ್ಧ ಅಗತ್ಯ ಕ್ರಮ ಮತ್ತು ತನಿಖೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
#Ayodhyaराम की पैड़ी में रील बनाते एक महिला पानी के अंदर फिल्मी गाने पर ठुमका लगाते#VideoViral@ayodhya_police@Uppolice@dmayodhya@igrangeayodhya#Gaza#GazaUnderaAttack#Gaza_is_under_bombardment#EmergencyAlertSystempic.twitter.com/BxWoLGmXvN
— Tv 24 Network (@Tv24networkes)October 10, 2023

प्रभारी निरीक्षक को0 अयोध्या को आवश्यक जांच एंव कार्यवाही हेतु निर्देशित किया गया।
— AYODHYA POLICE (@ayodhya_police)October 10, 2023

ಈ ವರ್ಷದ ಆರಂಭದಲ್ಲಿ, ಅಯೋಧ್ಯೆಯ ಸರಯು ನದಿ ಘಾಟ್‌ನಿಂದ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ‘ಪಾನಿ ಮೇ ಆಗ್ ಲಗಾನಿ ಹೈ’ ಹಾಡಿಗೆ ಹುಡುಗಿಯೊಬ್ಬಳು ಡ್ಯಾನ್ಸ್​ ಮಾಡಿದ್ದ ವಿಡಿಯೋಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಈ ವಿಷಯವನ್ನು ತಿಳಿದು, ಧಾರ್ಮಿಕ ಮತ್ತು ಪೂಜಾ ಸ್ಥಳಗಳಲ್ಲಿ ಅನುಚಿತವಾದ ರೀಲ್‌ಗಳನ್ನು ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಸಾರ್ವಜನಿಕರಿಗೆ ಎಚ್ಚರಿಸಿದ್ದರು,(ಏಜೆನ್ಸೀಸ್).
ಫೆಬ್ರವರಿಯಲ್ಲಿ ಮಾಲಿವುಡ್​​ ಮೆಗಾಸ್ಟಾರ್ ಫ್ಯಾನ್ಸ್​ಗೆ​ ಡಬಲ್ ಧಮಾಕಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − one =
Remember me
