ಲಖನೌ:ಇಂದು (ಫೆ.4) ಮದುವೆ ಮಂಟಪದಲ್ಲಿ ಹಸೆ ಮಣೆ ಏರಬೇಕಾಗಿದ್ದ ಯುವತಿಯೊಬ್ಬಳು ನದಿಯಲ್ಲಿ ಹೆಣವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನ ಮಂದಾವರ್​ನಲ್ಲಿ ನಡೆದಿದೆ.
ಮಂದಾವರ್​ನಲ್ಲಿರುವ ಮಲನ್​ ನದಿಯಲ್ಲಿ 22 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದೆ. ಅಪಘಾತದಿಂದಾಗಿ ಗಂಭೀರ ಗಾಯಗಳಾಗಿರುವ ಆಕೆಯ ತಂದೆಯ ಆಸೆಯಂತೆ ಯುವತಿಗೆ ಇಂದು ಮದುವೆಯನ್ನು ಫಿಕ್ಸ್​ ಮಾಡಲಾಗಿತ್ತು. ಕೆಲ ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಯುವತಿ ಭಾನುವಾರ ಸಂಜೆ ಮನೆಯಿಂದ ಕಾಣೆಯಾಗಿದ್ದಳು.
ರಾವುಲಿ ಗ್ರಾಮದ ಬಳಿ ಮಲನ್​ ನದಿಗೆ ಹಾಕಲಾಗಿರುವ ಸೇತುವೆಯ ಕಂಬವೊಂದಕ್ಕೆ ಮೃತ ದೇಹವು ಸಿಲುಕಿಕೊಂಡಿದ್ದು, ಅದನ್ನು ಕಂಡ ದಾರಿಹೋಕನೊಬ್ಬ ಪೊಲೀಸರಿಗೆ ವಿಷಯ ತಲುಪಿಸಿದ್ದಾನೆ. ಗ್ರಾಮಸ್ಥರು ದೇಹವನ್ನು ಗುರುತಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬಂದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
