ಹೈದರಾಬಾದ್​:ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್​, ತೆಲಂಗಾಣದಲ್ಲಿಯೂ ಇದೇ ತಂತ್ರವನ್ನು ಬಳಸಿ ಆಡಳಿತ ಚುಕ್ಕಾಣಿ ಹಿಡಿದಿದೆ. ಇದೀಗ ಕರ್ನಾಟಕದಂತೆ ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ರಾಜ್ಯಾದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಬಸ್​ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.
ಕೆಲವೆಡೆ ಮಹಿಳೆಯರು ಬಸ್​ ಹತ್ತುವಾಗ ಡೋರ್​, ಕಿಟಕಿಯ ಸರಳುಗಳು ಕಿತ್ತುಕೊಂಡು ಬಂದಿರುವ ಫೋಟೋ ಹಾಗು ವಿಡಿಯೋವನ್ನು ನಾವು ನೋಡಿದ್ದೇವೆ. ಇದೀಗ ಕಳಿತುಕೊಳ್ಳುವ ವಿಚಾರವಾಗಿ ಮಹಿಳೆಯರಿಬ್ಬರ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆಯೂ ತೆಲಂಗಾಣದ ನಿರ್ಮಲ್ ಜಿಲ್ಲೆಯ ಮುಧೋಳೆಯಲ್ಲಿ ನಡೆದಿದೆ.
Video going viral of women pulling each other's hair, reportedly over seat in#RTCbus; conductor unsuccessfully tried to bring situation under control, to civil behaviour; happened in#Mudhole#Nirmal#Telanganawhere@INCTelanganamade bus-ride free for women@ndtv@ndtvindiapic.twitter.com/LiFrdTnIov
ಇದನ್ನೂ ಓದಿ:ಕೃಷಿಕನಾಗುವುದು ತಪ್ಪಲ್ಲ, ಕೃಷಿಕ ಎಂದೇಳಲು ನಾಚಿಕೆ ಏಕೆ?: ಹೈಕೋರ್ಟ್
ವೈರಲ್​ ಆಗಿರುವ ವಿಡಿಯೋದಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರ ನಡುವೆ ಮೊದಲಿಗೆ ಮಾತಿನ ಚಕಮಕಿ ಆರಂಭವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳಲು ಶುರು ಮಾಡುತ್ತಾರೆ. ಇಬ್ಬರ ನಡುವಿನ ಜಗಳವನ್ನು ಬಿಡಿಸಲು ಕಂಡಕ್ಟರ್​ ಹಾಗೂ ಸಹ ಪ್ರಯಾಣಿಕರು ಯತ್ನನಿತ್ನಿಸಿದರಾದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ.
ಇನ್ನು ಘಟನೆಯ ವಿಡಿಯೋ ವೈರಲ್​ ಆಗಿದ್ದು, ನಿಜವಾದ ನಾರಿ ಶಕ್ತಿ ಅನಾವರಣ ಆಯಿತು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ಧಾರೆ. ಸೋನಿಯಾ ಗಾಂಧಿ ಜನುಮದಿನದ ನಿಮಿತ್ತ ತೆಲಂಗಾಣ ಕಾಂಗ್ರೆಸ್​ ಸರ್ಕಾರವು ಮಹಿಳೆಯರ ಉಚಿತ ಬಸ್​ ಸೇವೆ ಒದಗಿಸುವ ಮಹಾಲಕ್ಷ್ಮೀ ಯೋಜೆನೆಗೆ ಚಾಲನೆ ನೀಡಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + five =
Remember me
