ತಮಿಳುನಾಡು:ಇನ್ಮುಂದೆ ದ್ರಾವಿಡ ಮಾದರಿಯ ಆಡಳಿತದಲ್ಲಿ ಮಹಿಳಾ ಅರ್ಚಕರು ಪೂಜೆ ಮಾಡಲಿದ್ದಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್​​​ನಲ್ಲಿ ಏನಿದೆ?:“ಮಹಿಳೆಯರು ಪೈಲೆಟ್ ಮತ್ತು ಗಗನಯಾತ್ರೆಯಲ್ಲಿ ಸಾಧನೆಗೈದಿದ್ದರೂ, ಹೆಣ್ಣು ದೇವರ ದೇವಾಲಯಗಳನ್ನೂ ಸೇರಿದಂತೆ ಮಹಿಳೆಯರು ಅಚರ್ಕ ವೃತ್ತಿಯನ್ನು ಮಾಡುವುದು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಆದರೆ ಕೊನೆಗೂ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ.” ಎಂದು ಟ್ವೀಟ್​ ಮಾಡಿದ್ದಾರೆ.
பெண்கள் விமானத்தை இயக்கினாலும், விண்வெளிக்கே சென்று வந்தாலும் அவர்கள் நுழைய முடியாத இடங்களாகக் கோயில் கருவறைகள் இருந்தன. பெண் கடவுளர்களுக்கான கோயில்களிலும் இதுவே நிலையாக இருந்தது.
ஆனால், அந்நிலை இனி இல்லை! அனைத்துச் சாதியினரும் அர்ச்சகர் ஆகலாம் எனப் பெரியாரின் நெஞ்சில் தைத்த…https://t.co/U1JgDIoSxb
— M.K.Stalin (@mkstalin)September 14, 2023

“ಎಲ್ಲಾ ಜಾತಿಯ ಜನರನ್ನು ದೇವಾಲಯಗಳ ಅರ್ಚಕರನ್ನಾಗಿ ನೇಮಿಸಿ ನಮ್ಮ ತಮಿಳುನಾಡಿನ ದ್ರಾವಿಡ ಮಾದರಿಯ ಸರ್ಕಾರ ತಂತಾಯ್ ಪೆರಿಯಾರ್​ ಅವರ ಹೃದಯದ ಮುಳ್ಳು ತೆಗೆದಿದ್ದೆವೆ. ಈಗ ಮಹಿಳೆಯರೂ ಗರ್ಭಗುಡಿಗೆ ಕಾಲಿಡುವುದರ ಮೂಲಕ ಸಮಾನತೆಯ ನವ ಯುಗವನ್ನು ತರುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನ ನಾಯಕ ಇ.ವಿ. ಪೆರಿಯಾರ್, “ಬೇರೆ ಜಾತಿಯವರನ್ನು ಪುಜೆ ಮಾಡಲು ಬಿಡದೇ ಇರುವುದು ಹೃದಯಕ್ಕೆ ಮುಳ್ಳು ಚುಚ್ಚಿದಂತೆ ಆಗುತ್ತದೆ” ಎಂದಿದ್ದರು. ಇವರ ಅನುಯಾಯಿ ಸ್ಟಾಲಿನ್ ಹೊಸ ಯೋಜನೆಯನ್ನು ತಂದಿದ್ದು, ತಿರುಚಿರಪಲ್ಲಿಯ ಶ್ರೀ ರಂಗನಾಥರ್ ದೇವಾಲಯದಲ್ಲಿ ವಿವಿಧ ಮತಗಳ ಆಯ್ದ ಜನರಿಗೆ ಅರ್ಚಕ ವೃತ್ತಿಯ ತರಬೇತಿ ನೀಡಲಾಗಿದೆ. ಇದರಲ್ಲಿ ಮೂವರು ಮಹಿಳೆಯರೂ ಇದ್ದಾರೆ.
ಈಗಾಗಲೇ ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಸೇಕರ್ ಬಾಬು ಅವರು 2021 ರಲ್ಲಿ ಮಹಿಳೆಯರ ತರಬೇತಿಯ ನಂತರ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಕಗೊಳ್ಳಬಹುದು ಎಂದು ಹೇಳಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 8 =
Remember me
