ಇತ್ತೀಚಿನ ದಿನಗಳಲ್ಲಿಯುವಜನತೆಯನ್ನು ಬೆಂಬಿಡದೆ ಕಾಡುತ್ತಿರುವ ಅತೀ ದೊಡ್ಡ, ಬಗೆಹರಿಸಲಾದ ಸಮಸ್ಯೆ ಎಂದರೆ ಅದು ನಿರುದ್ಯೋಗ. ಹೌದು, ಉದ್ಯೋಗ ಅರಸಿ, ದೇಶ-ವಿದೇಶಗಳ ಗಡಿದಾಟಿ ಹೋಗುವ ಜನರು, ಕೆಲಸ ಗಿಟ್ಟಿಸಿಕೊಳ್ಳಲು ಯಾವ ಹಂತವನ್ನು ಬೇಕಾದರೂ ತಲುಪುತ್ತಾರೆ. ತಮ್ಮ ಬಳಿಯಿರುವ ಕೌಶಲ್ಯತೆಯನ್ನು ಆಯಾ ಸಂಸ್ಥೆಗೆ ಅಥವಾ ಕಂಪನಿಗೆ ತೋರಿಸುವ ಆಸಕ್ತರು, ಇಂಟರ್​ವ್ಯೂವ್ ಮಾಡುವವರನ್ನು ಮೆಚ್ಚಿಸಲು ಸಾಕಷ್ಟು ಕಸರತ್ತು ನಡೆಸುತ್ತಾರೆ. ಆದರೆ, ಇದು ಅಂದುಕೊಂಡಷ್ಟು ಸುಲಭವಲ್ಲ.
ಇದನ್ನೂ ಓದಿ:ಇಂಥಾ ಡ್ರೆಸ್​ ಧರಿಸಿದ್ರೆ ರೇಪ್​ ಆಗ್ತೀರಾ! ನಟಿ ಅನುಸೂಯ ಭಾರಧ್ವಜ್​ ಕಾಮೆಂಟ್​ ವೈರಲ್​
ಕೆಲಸ ಖಾಲಿಯಿದೆ, ಆಸಕ್ತರಿಗೆ ಮೊದಲ ಆದ್ಯತೆ ಎಂದು ಯುವಜನತೆಗೆ ಆಹ್ವಾನ ನೀಡುವ ಸಂಸ್ಥೆಯ ಎಚ್​ಆರ್​ಗಳು​ (ಹ್ಯೂಮನ್ ರಿಸೋರ್ಸ್​​) ಉದ್ಯೋಗ ಕೊಡ್ತೀವಿ, ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಎಂದು ಒಂದಷ್ಟು ಷರತ್ತುಗಳನ್ನು ಹಾಕುತ್ತಾರೆ. ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸುವ ಆಸಕ್ತ ಅಭ್ಯರ್ಥಿಗಳು ಎಚ್​ಆರ್​ಗಳನ್ನು ಮೆಚ್ಚಿಸಿ, ಕೆಲಸ ಪಡೆಯುವಲ್ಲಿ ವಿಫಲರಾಗುತ್ತಾರೆ.
Fraud-Kalesh in the Name of Job b/w HR and Female Employee, (Shivshankar Security Global Enterprises HR attacked a girl who came to ask for her money back after not getting a job Bindapur Delhi)pic.twitter.com/CG1n7IVKQS
— Ghar Ke Kalesh (@gharkekalesh)April 24, 2024

ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ, ಕೆಲಸ ಗಿಟ್ಟಿಸಿಕೊಂಡರೂ ಸಹ ಹಣ ಚೆಲ್ಲದೆ ಹೋದರೆ, ಕೆಲಸವೂ ಇಲ್ಲ, ಅದರ ಆಸೆಯೂ ಇಲ್ಲ ಎಂಬಂತೆ ಮಾಡಿ, ವಾಪಾಸ್ ಕಳಿಸುತ್ತಾರೆ. ಉದ್ಯೋಗ ಬೇಕಾದರೆ ಮೊದಲು ಲಂಚ ಕೊಟ್ಟು ಬನ್ನಿ, ಆನಂತರ ನೋಡೋಣ ಎಂದು ಹೇಳುವ ಕೆಲವು ಕಂಪನಿಗಳು, ಇಂಥ ನೀಚ ಕೃತ್ಯಕ್ಕೆ ಕೈಹಾಕುತ್ತದೆ. ತದನಂತರ ಉದ್ಯೋಗವು ಕೊಡದೆ, ಹಣವು ವಾಪಾಸ್ ಕೊಡದೆ ವಂಚನೆ ಮಾಡ್ತಾರೆ. ಇಂತಹದ್ದೇ ಪ್ರಕರಣವೊಂದು ಈಗ ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಹಿಂದುಪರ ಕಾರ್ಯಕರ್ತೆ ಕಾಜಲ್ ಹಿಂದುಸ್ತಾನಿ ವಿರುದ್ಧದ ಪ್ರಕರಣಕ್ಕೆ ತಡೆ
ಶಿವಶಂಕರ್ ಸೆಕ್ಯುರಿಟಿ ಗ್ಲೋಬಲ್ ಎಂಟರ್‌ಪ್ರೈಸಸ್ ಎಚ್‌ಆರ್ ಕಲೇಶ್​ ಎಂಬ ಮಹಿಳೆ, ಕೆಲಸ ಸಿಗದ ಹಿನ್ನೆಲೆಯಲ್ಲಿ ಹಣ ವಾಪಸ್ ಕೇಳಲು ಬಂದ ಹುಡುಗಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ, ಆಕೆಯನ್ನು ಮನಬಂದಂತೆ ಎಳೆದಾಡಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಘಟನೆ ದೆಹಲಿಯ ಬಿಂದಾಪುರದಲ್ಲಿ ವರದಿಯಾಗಿದೆ,(ಏಜೆನ್ಸೀಸ್).
ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eleven =
Remember me
