ರಾಂಚಿ:ದೆಹಲಿಯ ನಿರ್ಭಯಾ ಪ್ರಕರಣದ ರೀತಿಯಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್​ ರೇಪ್​ ಪ್ರಕರಣದ ದಾಖಲಾಗಿ ವಾರದೊಳಗೆ ಮತ್ತೊಂದು ಅಂತದ್ದೇ ಪ್ರಕರಣ ಜಾರ್ಖಂಡ್​ನಲ್ಲಿ ದಾಖಲಾಗಿದೆ. 50 ವರ್ಷದ ವಿಧವೆಯನ್ನು ಗ್ಯಾಂಗ್ ರೇಪ್​ ಮಾಡಿರುವ ಗ್ಯಾಂಗ್​, ಆಕೆಯ ಗುಪ್ತಾಂಗಕ್ಕೆ ಗ್ಲಾಸಿನ ಚೂರುಗಳನ್ನು ತುಂಬಿದ್ದು, ಸಂತ್ರಸ್ತೆ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
ಇದನ್ನೂ ಓದಿ:ಬ್ಲೇಡ್​ನಿಂದ ಕತ್ತು ಕೊಯ್ದು ರಕ್ತ ಹೀರಿದ! ಅಂಕಲ್​ ಮೇಲಿದ್ದ ಕೋಪಕ್ಕೆ ತಮ್ಮನನ್ನೇ ಬಲಿ ಪಡೆದ ಅಣ್ಣ
ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಹಂಟರ್‌ಗಂಜ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗಿದೆ. 50 ವರ್ಷದ ಮಹಿಳೆ ವಿಧವೆಯಾಗಿದ್ದು, ಒಬ್ಬಂಟಿ ಜೀವನ ಸಾಗಿಸುತ್ತಿದ್ದಳು. ಆಕೆಯ ಮೇಲೆ ಮೂವರು ಯುವಕರ ಗ್ಯಾಂಗ್​ ರೇಪ್​ ನಡೆದಿದೆ. ರೇಪ್​ ಮಾಡಿದ ನಂತರ ಆಕೆಯ ಗುಪ್ತಾಂಗಕ್ಕೆ ಗ್ಲಾಸಿನ ಚೂರುಗಳನ್ನು ತುಂಬಲಾಗಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:75 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪಾಪಿ; ಒಡವೆಗಳೊಂದಿಗೆ ಪರಾರಿಯಾದ
ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಆದರೆ ಆಕೆ ಅಪಾಯದಿಂದ ಹೊರಗಿದ್ದಾರೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದುಹಂಟರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರದ ಅಧೀಕ್ಷಕ ಡಾ.ವೆದ್ಪ್ರಕಾಶ್ ಹೇಳಿದ್ದಾರೆ. ಘಟನೆಯ ಕುರಿತಾಗಿ ಹಂಟರ್‌ಗಂಜ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷಭ್ ಹೇಳಿದ್ದಾರೆ. (ಏಜೆನ್ಸೀಸ್​)
ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ಬೆಳ್ಳಂಬೆಳಗ್ಗೆ ಮದುವೆ ಮನೆಯಲ್ಲಿ ವಧುವಿನ ಕೋಣೆಯತ್ತ ಗುಂಡಿನ ದಾಳಿ! ಬೆಚ್ಚಿಬಿದ್ದ ಕುಟುಂಬಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
