ಛತ್ತೀಸ್​ಗಢ:ಮಹಿಳೆಯೊಬ್ಬಳು ತನ್ನ ಪತಿಯನ್ನೇ ಹತ್ಯೆಗೈದಿದ್ದು, ಆತನ ಶವವನ್ನು ಹೂಳಲು ಪ್ರಿಯಕರನ ಸಹಾಯವನ್ನು ಕೋರಿದ್ದಳು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ವೃತ್ತಿಯಲ್ಲಿ ದೇವಿಕಾ ಚಂದ್ರಕರ್ ಸರ್ಕಾರಿ ಶಾಲೆ ಶಿಕ್ಷಕಿ ಎಂದು ಹೇಳಲಾಗಿದೆ. ಮಹಿಳೆಯ ಪ್ರಿಯಕರ ಮುಕುಂದ್ ತ್ರಿಪಾಠಿ ಅವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಆಕೆಯ ತಾಯಿ ಕೂಡ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಘಟನೆ ಮಹಾಸಮುಂಡ್ ಜಿಲ್ಲೆಯಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆ ಆಮಂತ್ರಣ ಪತ್ರಿಕೆ ವೈರಲ್​; ಎಲ್ಲಿ, ಯಾವಾಗ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​
ಕುಡಿದ ಅಮಲಿನಲ್ಲಿದ್ದ ಮೃತ ಯುಪೇಶ್ ಚಂದ್ರಾಕರ್, ತನ್ನ ಪತ್ನಿ ದೇವಿಕಾಳ ಅಕ್ರಮ ಸಂಬಂಧದ ವಿಚಾರವಾಗಿ ವಿಪರೀತ ಜಗಳವಾಡಿದ್ದಾನೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದ ಬೆನ್ನಲ್ಲೇ ದೇವಿಕಾ ತನ್ನ ಗಂಡನನ್ನು ತಳ್ಳಿ, ದೊಣ್ಣೆಯಿಂದ ತಲೆಗೆ ಹೊಡೆದಿದ್ದಾಳೆ. ತಕ್ಷಣವೇ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತಿಯನ್ನು ಹತ್ಯೆಗೈದ ಬಳಿಕ ದೇವಿಕಾಳ ಪ್ರಿಯಕರ ಮುಕುಂದ್ ಕೂಡ ಘಟನಾ ಸ್ಥಳಕ್ಕೆ ಆಗಮಿಸಿ, ಆಕೆಯ ಪತಿಯನ್ನು ಗುಂಡಿ ತೋಡಿ, ಮಣ್ಣು ಮಾಡಲು ಸಹಾಯ ಮಾಡಿದ್ದಾನೆ. ಈ ಘಟನೆ ಪತ್ತೆಹಚ್ಚಿದ ಪೊಲೀಸರು ಸದ್ಯ ಮಹಿಳೆ ಮತ್ತು ಅವಳ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).
ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + five =
Remember me
