ನವದೆಹಲಿ:ಭಾರತದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿ) ಇಂಟರ್​ನೆಟ್ ಬಳಕೆ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಮಾತ್ರವಲ್ಲದೆ ಸ್ತ್ರೀ-ಪುರುಷರ ನಡುವೆಯೂ ಬಹಳ ಅಸಮಾನತೆಯಿದೆ ಎಂಬುದು ಐದನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಿಂದ (ಎನ್​ಎಫ್​ಎಚ್​ಎಸ್) ತಿಳಿದು ಬಂದಿದೆ. ಗ್ರಾಮೀಣ ಭಾರತದಲ್ಲಿ ಸರಾಸರಿಯಾಗಿ, 10 ಮಹಿಳೆಯರಲ್ಲಿ ಮೂರಕ್ಕಿಂತ ಕಡಿಮೆ ಹಾಗೂ ನಗರಗಳ 10 ಮಹಿಳೆಯರ ಪೈಕಿ ನಾಲ್ವರು ಇಂಟರ್​ನೆಟ್ ಬಳಸುತ್ತಾರೆ ಎನ್ನುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ಸಮೀಕ್ಷೆ ಸಾಮಾನ್ಯವಾಗಿ ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಟಿಕತೆಯ ಸೂಚಕಗಳ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಆದರೆ, 5ನೇ ಎನ್​ಎಫ್​ಎಚ್​ಎಸ್ 2019ರಲ್ಲಿ ಅದೇ ಮೊದಲ ಬಾರಿಗೆ ಇಂಟರ್​ನೆಟ್ ಬಳಸದೇ ಇರುವ ಮಹಿಳೆಯರು ಹಾಗೂ ಪುರುಷರ ಸೂಚಕಗಳ ಬಗ್ಗೆಯೂ ವಿವರಗಳನ್ನು ಕಲೆ ಹಾಕಿದೆ. 3.07 ಲಕ್ಷ ಕುಟುಂಬಗಳ ಸಮೀಕ್ಷೆ ಆಧಾರದಲ್ಲಿ ಅಂಕಿಅಂಶ ಕ್ರೋಡೀಕರಿಸಲಾಗಿದೆ.
ನಗರ ಭಾಗದಲ್ಲಿ ಮಹಿಳೆಯರು ಹೆಚ್ಚು ಇಂಟರ್​ನೆಟ್ ಬಳಸುವ ರಾಜ್ಯಗಳು (ಶೇಕಡದಲ್ಲಿ): ಗೋವಾ-78.1, ಹಿಮಾಚಲಪ್ರದೇಶ-78.9, ಕೇರಳ-64.9, ಮಹಾರಾಷ್ಟ್ರ-54.3, ಮಣಿಪುರ-50.8, ಮೇಘಾಲಯ-57.8, ಮಿಜೋರಾಂ-83.8, ನಾಗಾಲ್ಯಾಂಡ್-66.5, ಸಿಕ್ಕಿಂ-90, ಜಮ್ಮು-ಕಾಶ್ಮೀರ-55, ಲಡಾಖ್-66.5, ಲಕ್ಷದ್ವೀಪ-61.80.
ಗಂಡನ ಮನೆಯಲ್ಲಿ ಹಿಂಸೆ ಹೆಚ್ಚಾಗಿರುವುದು ಕಳವಳಕಾರಿ ಸಂಗತಿ. ವಿವಿಧ ಪ್ರದೇಶಗಳಲ್ಲಿ ಹಿಂಸಾ ಸಂಸ್ಕೃತಿ ಹರಡಿರುವುದು ದೃಢಪಟ್ಟಿದೆ.
|ಪೂನಂ ಮುಟ್ರೇಜಾಭಾರತ ಜನಸಂಖ್ಯಾ ಪ್ರತಿಷ್ಠಾನದ ನಿರ್ದೇಶಕಿ
ಸಮೀಕ್ಷೆ ನಡೆಸಲಾದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸಹಿತ ಐದು ರಾಜ್ಯಗಳಲ್ಲಿ ಶೇಕಡ 30ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಹಿಂಸೆಯಿಂದ ನರಳಾಡುತ್ತಿದ್ದಾರೆ. ಅಸ್ಸಾಂ, ಮಿಜೋರಾಂ, ತೆಲಂಗಾಣ ಮತ್ತು ಬಿಹಾರ ಇವುಗಳು ಪತಿಯ ಅಥವ ಆತನ ಮನೆಯವರಿಂದ ದೌರ್ಜನ್ಯ ಹೆಚ್ಚಿನ ಪ್ರಮಾಣದಲ್ಲಿರುವ ಇತರ ನಾಲ್ಕು ರಾಜ್ಯಗಳಾಗಿವೆ. 5ನೇ ಎನ್​ಎಚ್​ಎಫ್​ಎಸ್ ಅಂಗವಾಗಿ 6.10 ಲಕ್ಷ ಕೌಟುಂಬಿಕ ಮಾದರಿಗಳನ್ನು ಅಧ್ಯಯನ ನಡೆಸಿದಾಗ ಈ ಅಂಶಗಳು ಬಯಲಾಗಿವೆ. ಕೋವಿಡ್-19 ಸಾಂಕ್ರಾಮಿಕತೆ ಹರಡಿರುವ ಹಿನ್ನೆಲೆಯಲ್ಲಿ ಈ ಹಿಂಸೆ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು ಎಂಬುದು ಕಾರ್ಯಕರ್ತರು ಹಾಗೂ ಸರ್ಕಾರೇತರ ಸಂಸ್ಥೆಗಳು (ಎನ್​ಜಿಒ) ಆತಂಕ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ 18ರಿಂದ 49 ವರ್ಷ ವಯೋಮಿತಿಯ ಶೇಕಡ 44.4ರಷ್ಟು ಗೃಹಿಣಿಯರು ಗಂಡನ ಮನೆಯಲ್ಲಿ ಹಿಂಸೆ ಅನುಭವಿಸುತ್ತಿದ್ದಾರೆ. 4ನೇ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ. 20.6 ಆಗಿತ್ತು. ಕೌಟುಂಬಿಕ ಕಾಟ ಹೆಚ್ಚಿರುವ ಇತರ ರಾಜ್ಯಗಳ ಶೇಕಡಾವಾರು ಪ್ರಮಾಣ: ಬಿಹಾರ-40, ಮಣಿಪುರ-39, ತೆಲಂಗಾಣ-36.9, ಅಸ್ಸಾಂ-32, ಆಂಧ್ರಪ್ರದೇಶ-30.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × 4 =
Remember me
