ಮಹಾರಾಷ್ಟ್ರ:ಮಹಾರಾಷ್ಟ್ರದ(Maharashtra)ಮಹಿಳಾ ಶಾಸಕಿಯೊಬ್ಬರು ನಡುರಸ್ತೆಯಲ್ಲೇ ಜೂನಿಯರ್ ಸಿವಿಕ್ ಇಂಜಿನಿಯರ್​​ನ ಶರ್ಟ್​ ಕಾಲರ್ ಹಿಡಿದು ಕಪಾಳಮೋಕ್ಷ(Slap)ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್(Viral)ಆಗಿದೆ.
ಇದನ್ನೂ ಓದಿ:ಲೋಕಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ? ದೊಡ್ಮೆನೆ ಸೊಸೆ ನೀಡಿದ ಸ್ಪಷ್ಟನೆ ಹೀಗಿದೆ…
ಥಾಣೆ ಜಿಲ್ಲೆಯ ಮೀರಾ ಭಾಯಂದರ್‌ನ ಶಾಸಕಿ ಗೀತಾ ಜೈನ್, ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಯಾವುದೇ ಸೂಚನೆಯಿಲ್ಲದೆ ಮನೆಯೊಂದರಲ್ಲಿ ವಾಸಿಸುತ್ತಿದ್ದವರನ್ನು ಹೊರಹಾಕಿ, ಕಟ್ಟಡವನ್ನು ಕೆಡವಿದ ಕಾರಣಕ್ಕೆ ಸ್ಥಳೀಯ ಎಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.
ಮನೆಯಲ್ಲಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಅವರ ಕುಟುಂಬಸ್ಥರನ್ನು ಬೀದಿಯಲ್ಲಿ ನಿಲ್ಲಿಸಿ, ಮನೆ ಕಡೆವಲು ಮುಂದಾದ ಅಧಿಕಾರಿಗಳ ವಿರುದ್ಧ ಶಾಸಕಿ ಗೀತಾ ಜೈನ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಿರಿಯ ನಾಗರಿಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಆತನ ಕಾಲರ್ ಹಿಡಿದು ನಾಲಾಯಕ್ ಎಂದು ಕರೆದಿದ್ದಾರೆ.
ಇದನ್ನೂ ಓದಿ:17 ಸಾವಿರ ಕೊಟ್ಟು ಫೇಶಿಯಲ್​ ಮಾಡಿಸಿಕೊಂಡವಳ ಮುಖ ವಿಕಾರ: ಡಾಕ್ಟರ್​ ಹೇಳಿದ್ದನ್ನು ಕೇಳಿ ಸಂತ್ರಸ್ತೆಗೆ ಶಾಕ್​
ಈ ಬಗ್ಗೆ ಸ್ಥಳೀಯ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ ಗೀತಾ ಜೈನ್, “ತಮ್ಮ ಮನೆ ಕೆಡವುತ್ತಿರುವಾಗ ಬೇಸರದಲ್ಲಿದ್ದ ಮಹಿಳೆಯರ ಅಳಲನ್ನು ಪ್ರಶ್ನಿಸುವಾಗ ಅಧಿಕಾರಿಗಳು ನಗುತ್ತಿರುವುದನ್ನು ಕಂಡು ನನಗೆ ಅತೀವ ಬೇಸರವಾಯಿತು. ಇದೇ ಕಾರಣಕ್ಕೆ ಇಂಜಿನಿಯರ್​​ನನ್ನು ಕರೆದು ಕಪಾಳಮೋಕ್ಷ ಮಾಡಿದೆ. ಇದು ನನ್ನ ಸಹಜ ಪ್ರತಿಕ್ರಿಯೆ! ನಾನು ಮಾಡಿದ್ದು ತಪ್ಪಲ್ಲ, ಅದಕ್ಕೆ ಕ್ಷಮೆಯೂ ಕೇಳುವುದಿಲ್ಲ ಎಂದು ಪ್ರತಿಪಾದಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
