ಹಿಮಾಚಲಪ್ರದೇಶ:ಯಾವುದೇ ರಾಜ್ಯದಲ್ಲಿ ದೊಡ್ಡ ಅಕ್ರಮ ನಡೆಯುತ್ತಿದ್ದರೆ ಅದನ್ನು ತಡೆಯಲು ಹೋಗುವ ಅಧಿಕಾರಿಗಳು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಹೋಗಿ ಕ್ರಮ ಜರುಗಿಸುವುದು ಸರ್ವೇ ಸಾಮಾನ್ಯ.
ಆದರೆ ಇಲ್ಲೊಂದು ಕಡೆ ಪೊಲೀಸರ ಭದ್ರತೆ ಇಲ್ಲದೆ ದೊಡ್ಡ ಅಕ್ರಮವೊಂದನ್ನು ತಡೆಯಲಾಗಿದೆ. ಅಷ್ಟೇ ಆಗಿದ್ದರೆ ಇದೇನೂ ಅಂಥ ವಿಶೇಷ ಅನಿಸಿರುತ್ತಿರಲಿಲ್ಲ. ಈ ಅಕ್ರಮವನ್ನು ತಡೆದಿದ್ದು ಮಹಿಳಾ ಅಧಿಕಾರಿ ಹಾಗೂ ಇದು ನಡೆದಿದ್ದು ರಾತ್ರಿಯಲ್ಲಿ ಎಂಬುದೇ ಇಲ್ಲಿನ ವಿಶೇಷ.
ಇದನ್ನೂ ಓದಿ:ಕಾಂಗ್ರೆಸ್​ನಲ್ಲೇ ಭಿನ್ನಾಭಿಪ್ರಾಯ ಮೂಡಿಸಿತಾ ಉದಯನಿಧಿಯ ‘ಸನಾತನ’ ಹೇಳಿಕೆ?
ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಸಂಧೋಲ್​ನ ಅಸಿಸ್ಟೆಂಟ್ ಕಮಿಷನರ್ ಕಂ ತಹಶೀಲ್ದಾರ್ ಆಗಿರುವ ಒಶಿನ್ ಶರ್ಮಾ ಎಂಬಾಕೆ ಈ ಸಾಹಸ ಮೆರೆದಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಈಕೆ ಸ್ಥಳಕ್ಕೆ ತೆರಳಿ ಕ್ರಮ ಜರುಗಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಭದ್ರತೆ ಇಲ್ಲದೆ, ಭಾನುವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಹೋಗಿದ್ದ ಈಕೆ ಅಲ್ಲಿ ನಡೆಯುತ್ತಿದ್ದ ಅಕ್ರಮವನ್ನು ತಡೆದು ದಂಡವನ್ನೂ ವಿಧಿಸಿದ್ದಾರೆ.
ಮುಖ್ಯಮಂತ್ರಿ ಜತೆ ಇರುವ ಈ ಮಹಿಳೆ ಯಾರು?; ನೆನಪಾಯ್ತಾ?

ಉದ್ಯಮಿ ಮನೆ ಮೇಲೆ ಗುಂಡಿನ ದಾಳಿ, ಪುತ್ರ ಕೂದಲೆಳೆಯ ಅಂತರದಲ್ಲಿ ಪಾರು; ನಾಯಿಗಳಿಗೆ ಗುಂಡು ತಾಗಿ 1 ಶ್ವಾನ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
