ನವದೆಹಲಿ:ಸದಾ ಲಕ್ಷಾಂತರ ಪ್ರಯಾಣಿಕರಿಂದ ಕಂಗೊಳಿಸುವ ದೆಹಲಿ ಮೆಟ್ರೋ ರೈಲಿನಲ್ಲಿ ಒಂದಲ್ಲ ಒಂದು ರೀತಿಯ ವಿಚಿತ್ರ ಘಟನೆಗಳು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ರೀಲ್ಸ್​ ಮಾಡುವವರಿಂದಲೇ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುವ ದೆಹಲಿ ಮೆಟ್ರೋ ಈ ಬಾರಿ ಬೇರೆ ಕಾರಣಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ:ಇನ್ನೆಷ್ಟು ಸಹಿಸಿಕೊಳ್ಳೋದು? ಮುಂದಿನ ಸೀಸನ್​​ಗಾದ್ರು ಈ ಬದಲಾವಣೆ ತನ್ನಿ ಸಾಕು! RCB ಫ್ಯಾನ್ಸ್​ ಮನವಿ
ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಲವಂತವಾಗಿ ಯುವಕನ ತೊಡೆಯ ಮೇಲೆ ಕುಳಿತಿರುವ ಆಘಾತಕಾರಿ ಘಟನೆಯ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಪ್ರಯಾಣಿಕರಿಂದ ತುಂಬಿಹೋಗಿದ್ದ ರೈಲಿನಲ್ಲಿ ಮಹಿಳೆಗೆ ಸೀಟು ಸಿಕ್ಕಿಲ್ಲ ಇದಕ್ಕೆ ಸಿಟ್ಟಾದ ಮಹಿಳೆ ಏಕಾಏಕಿ ಯುವಕನ ಮೇಲೆ ಕುಳಿತು ಅಸಭ್ಯ ವರ್ತನ ತೋರಿದ್ದಾರೆ. ಈ ಅನುಚಿತ ವರ್ತನೆ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಮಹಿಳೆಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
#delhimetroदिल्ली मेट्रो में महिला को सीट न मिली तो आदमी के गोद में बैठ गई। वीडियो हुआ वायरलpic.twitter.com/pTb7dMHAbQ
— Yug (@mittal68218)April 21, 2024

ಈ ಹಿಂದೆ ಪರಸ್ಪರ ಚುಂಬಿಸುವುದು, ಜನರ ಮಧ್ಯೆ ರೀಲ್ಸ್​ ಮಾಡುವುದು, ಕುಣಿಯುವುದು ಹೀಗೆ ನಾನಾ ರೀತಿಯ ಕಾರಣಗಳಿಗೆ ದೆಹಲಿ ಮೆಟ್ರೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೆ, ಈ ಘಟನೆ ಅನೇಕರಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಮಹಿಳೆಯ ಅನುಚಿತ ವರ್ತನೆಗೆ ಹಲವರು ಕಿಡಿಕಾರಿದ್ದಾರೆ. ಈ ಬಗ್ಗೆ ದೆಹಲಿ ಮೆಟ್ರೋ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ? ಇಂತಹ ಘಟನೆಗಳಿಗೆ ಬ್ರೇಕ್ ಹಾಕಲಿದ್ಯಾ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ,(ಏಜೆನ್ಸೀಸ್).
ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
