ನದಿಯಲ್ಲಿ ಮುಳುಗುತ್ತಿದ್ದ ನಾಲ್ವರು ಯುವಕರನ್ನು ರಕ್ಷಿಸಲು ಮೂವರು ಮಹಿಳೆಯರು ತಮ್ಮ ಸೀರೆಯನ್ನೇ ಬಿಚ್ಚಿ, ಹಗ್ಗದಂತೆ ಕಟ್ಟಿದ ಘಟನೆ ತಮಿಳುನಾಡಿನ ಪೆರಂಬಲೂರ್​​ನಲ್ಲಿ ನಡೆದಿದೆ.
ತಮ್ಮ ಮಾನವನ್ನೂ ಲೆಕ್ಕಿಸದೆ ನಾಲ್ವರು ಯುವಕರನ್ನು ರಕ್ಷಿಸಲು ಮುಂದಾದ ಈ ಮಹಿಳೆಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆಯಾದರೂ, ಅವರಿಗೆ ನಾಲ್ವರನ್ನೂ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಇಬ್ಬರು ಯುವಕರ ಪ್ರಾಣ ಮಾತ್ರ ಉಳಿಸಲಾಯಿತು ಎಂಬ ಕೊರಗು ಇದೆ.
ಆಗಸ್ಟ್​ 6ರಂದು 12 ಜನ ಯುವಕರ ಗುಂಪು ಕ್ರಿಕೆಟ್​ ಆಡಲು ಕೊಟ್ಟಾರಿ ಗ್ರಾಮಕ್ಕೆ ತೆರಳಿತ್ತು. ಕ್ರಿಕೆಟ್​ ಮುಗಿದ ಬಳಿಕ ಅವರು ಕೊಟ್ಟಾರಿ ಡ್ಯಾಂನಲ್ಲಿ ಸ್ನಾನಕ್ಕೆಂದು ಇಳಿದರು. ಅದೇ ಸಮಯದಲ್ಲಿ ನದಿಯ ಬಳಿ ಸೆಂಥಾಮಿಜ್ ಸೆಲ್ವಿ (38), ಮುತಮಾಲ್ (34) ಮತ್ತು ಅನಂತವಳ್ಳಿ (34) ಎಂಬ ಮಹಿಳೆಯರು ಸ್ನಾನ ಮುಗಿಸಿ, ಬಟ್ಟೆ ತೊಳೆಯುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಯುವಕರು ನಮ್ಮ ಬಳಿ ಇಲ್ಲಿ ಸ್ನಾನ ಮಾಡಬಹುದಾ ಎಂದು ಕೇಳಿದರು. ನಾವು ಆಳವಾಗಿದೆ. ಇಲ್ಲಿ ಇಳಿಯಬೇಡಿ ಎಂದು ಹೇಳಿದೆವು. ಉಳಿದವರು ಹೇಗೋ ಅಲ್ಲೇ ಸ್ನಾನ ಮಾಡಿ ಹೊರಬಂದರು. ನಾಲ್ವರು ಆಯತಪ್ಪಿ ಆಳಕ್ಕೆ ಬಿದ್ದರು. ನಾವು ಹಿಂದೆ ಮುಂದೆ ಯೋಚಿಸದೆ ನಾವು ಉಟ್ಟಿದ್ದ ಸೀರೆಯನ್ನೇ ಬಿಚ್ಚಿ,ಅದನ್ನು ಒಂದಕ್ಕೊಂದು ಕಟ್ಟಿದೆವು. ಆದರೆ ನಾಲ್ವರನ್ನೂ ಉಳಿಸಲಾಗಲಿಲ್ಲ. ಕಾರ್ತಿಕ್ ಮತ್ತು ಸೆಂಥಿಲ್ವೆಲನ್ ಎಂಬುವರನ್ನು ರಕ್ಷಿಸಿದ್ದೇವೆ. ಪವಿತ್ರನ್​ ಮತ್ತು ರಂಜಿತ್​ ಇಬ್ಬರೂ ಟ್ರೇನಿ ಡಾಕ್ಟರ್​ಗಳನ್ನು ಕಾಪಾಡಲು ಸಾಧ್ಯವಾಗಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಅಲ್ಲಿಗೆ ಆಗಮಿಸಿ, ಉಳಿದಿಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. (ಏಜೆನ್ಸೀಸ್​)
ಮಣಿಪುರದಲ್ಲಿ ವಿಶ್ವಾಸಮತ ವೇಳೆ ಕಾಂಗ್ರೆಸ್​ ಶಾಸಕರೇ ಕೈಕೊಟ್ಟರು; ಗೆಲುವು ಸಾಧಿಸಿದ ಬಿಜೆಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 2 =
Remember me
