ಮಧ್ಯಪ್ರದೇಶ:ಯುವಕನೊಬ್ಬ ಮಹಿಳೆಯರ ಒಳ ಉಡುಪು ಕದ್ದು ಸಿಕ್ಕಿಬಿದ್ದಿದ್ದು, ಮಹಿಳೆಯೊಬ್ಬಳು ಆತನನ್ನು ಹಿಡಿದು ಹೊಡೆದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಮೂತ್ರ ಕುಡಿಸಿದ್ದಾಳೆ. ಮಧ್ಯಪ್ರದೇಶದ ಛಿಂದ್ವಾರ ಎಂಬಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬರ್ಹಬರಿಯಾರಿಯ ಆದರ್ಶ ಗ್ರಾಮದಲ್ಲಿ ಸೆ. 4ರಂದು ಈ ಪ್ರಕರಣ ನಡೆದಿದೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ. ಈತ ವಾಮಾಚಾರಕ್ಕಾಗಿ ಮಹಿಳೆಯರ ಒಳ ಉಡುಪು ಹಾಗೂ ಬಟ್ಟೆಯನ್ನು ಕದಿಯುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದು, ಪೊಲೀಸರು ಇವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾದ ಯುವಕನ ತಂದೆ ಹೇಳುವ ಪ್ರಕಾರ, ಗ್ರಾಮಸ್ಥರು ಸೆ. 3ರಂದು ಆತ ಒಬ್ಬನೇ ಇದ್ದಾಗ ಮನೆಗೆ ನುಗ್ಗಿ ಮಗನಿಗಾಗಿ ಹುಡುಕಾಡಿ ಮರಳಿದ್ದರು. ಆ ಸಂದರ್ಭದಲ್ಲಿ ಮಗ ರಾಖಿ ಹಬ್ಬದ ಪ್ರಯುಕ್ತ ಸಂಬಂಧಿಕರ ಮನೆಗೆ ಹೋಗಿದ್ದ. ಸೆ. 4ರಂದು ಆತ ಮರಳಿದಾಗ ಈ ಹಲ್ಲೆ ನಡೆದಿದೆ.
ಮಹಿಳೆಯೊಬ್ಬಳು ಹಾಗೂ ಗ್ರಾಮಸ್ಥರು ಮೊದಲು ತನ್ನ ಅಣ್ಣನ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ, ನಂತರ ಬಾಟಲಿಯೊಂದರಿಂದ ಮೂತ್ರ ಕುಡಿಯುವಂತೆ ಮಾಡಿ, ಕೊನೆಯಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಆತನ ಸಹೋದರಿ ತಿಳಿಸಿದ್ದಾಳೆ.
ಯುವಕ ಕಳೆದ ಎರಡು ಮೂರು ತಿಂಗಳಿನಿಂದ ವಾಮಾಚಾರಕ್ಕಾಗಿ ಮಹಿಳೆಯರ ಒಳಉಡುಪು ಮತ್ತು ಬಟ್ಟೆಗಳನ್ನು ಕಳವು ಮಾಡುತ್ತಿದ್ದನ ಅನುಮಾನವಿತ್ತು. ಈ ಕುರಿತಂತೆ ಗ್ರಾಮಸ್ಥರು ನಿಗಾ ಇರಿಸಿದ್ದು, ಆತ ಕಳವು ಮಾಡುತ್ತಿದ್ದಾಗಲೇ ಹಿಡಿಯಲಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಮಾಂಗಲ್ಯ ಕಟ್ಟಿಸಿಕೊಂಡಿದ್ದ ಕೊರಳಿಗೇ ಬಿತ್ತು ಉರುಳು; ಮದುವೆಯಾದ ಮೂರೇ ತಿಂಗಳಲ್ಲಿ ಬದುಕೇ ಮುಕ್ತಾಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 + 8 =
Remember me
