ನೋಯ್ಡಾ:ಟೋಲ್ ಪ್ಲಾಜಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಮಹಿಳೆಯ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ಮುಂದಿನ ಚುನಾವಣೆಗೆ ಮಹಾಘಟಬಂಧನ್: ರಾಜಧಾನಿ ಬೆಂಗಳೂರಲ್ಲಿ ಯುಪಿಎ ಅಂಗಪಕ್ಷಗಳ ನಾಯಕರ ದಂಡು!
ಉತ್ತರಪ್ರದೇಶದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರ್ಲಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ಸಂಭವಿಸಿದ್ದು, ಟೋಲ್ ಪಾವತಿ ಮಾಡಲು ಕೇಳಿದ್ದಕ್ಕಾಗಿ ಮಹಿಳೆ ಸಿಬ್ಬಂದಿಯ ಕೂದಲನ್ನು ಎಳೆದಾಡಿದ್ದಾರೆ ಮತ್ತು ಆಕೆಯನ್ನು ನೆಲಕ್ಕೆ ಕಡೆವಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಹೋದ್ಯೋಗಿಗಳು ಯುವತಿಯನ್ನು ಮಹಿಳೆಯ ಜಟಾಪಟಿಯಿಂದ ಬಿಡಿಸಿಕೊಂಡಿದ್ದಾರೆ.
https://twitter.com/SrishtiKanwar22/status/1680844151775023104?s=20
ಟೋಲ್​ ಪಾವತಿ ಮಾಡಿ ಎಂದು ಕೇಳಿದ್ದಕ್ಕೆ ಆಕ್ರೋಶಗೊಂಡ ಮಹಿಳೆ, ತನ್ನ ಕಾರನ್ನು ನಿಲ್ಲಿಸಿ, ಸಿಬ್ಬಂದಿಯ ಕೊಠಡಿಗೆ ನುಗ್ಗಿ ಆಕೆಯ ಕೂದಲನ್ನು ಎಳೆದಾಡಿ, ಮುಖವನ್ನು ಒತ್ತಿ ಹಿಡಿದಿದ್ದಾರೆ. ಬಳಿಕ ಸಿಬ್ಬಂದಿಯನ್ನು ಖುರ್ಚಿಯಿಂದ ಕೆಡವಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 91 ಟೋಲ್ ಪ್ಲಾಜಾದ ಉಸ್ತುವಾರಿ ಕಂಪನಿ ನೀಡಿದ ದೂರಿನ ಮೇರೆಗೆ ಪೊಲೀಸರು ಇದೀಗ ವಿಚಾರಣೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).
ಮುಂದಿನ ಚುನಾವಣೆಗೆ ಮಹಾಘಟಬಂಧನ್: ರಾಜಧಾನಿ ಬೆಂಗಳೂರಲ್ಲಿ ಯುಪಿಎ ಅಂಗಪಕ್ಷಗಳ ನಾಯಕರ ದಂಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
