ತ್ರಿಶೂರ್:ಹಾಡಹಗಲೇ ಯುವತಿಯೊಬ್ಬಳು ಅಂಗಡಿ ನಡೆಸುತ್ತಿದ್ದ ವೃದ್ಧರೊಬ್ಬರಿಗೆ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕಾರಣ ತಿಳಿದ ನೆಟ್ಟಿಗರು ವ್ಯಾಪಕ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಯುವತಿ ಹೊಡೆಯಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ.
ಇದನ್ನೂ ಓದಿ:ಡಿಸಿಎಂ ಹುದ್ದೆಗಳ ಸೃಷ್ಟಿ; ಹೈಕಮಾಂಡ್ ನಿರ್ಧಾರವೇ ಅಂತಿಮವೆಂದ ಗೃಹ ಸಚಿವ !
ಚಿಕ್ಕ ದಿನಸಿ ಅಂಗಡಿ ನಡೆಸುತ್ತಿದ್ದ ವೃದ್ಧನೊಬ್ಬ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಲು ಬಂದಿದ್ದ ಯುವತಿಯ ಎದೆ ಭಾಗವನ್ನು ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾಳೆ. ಜನಸಂದಣಿಯಿದ್ದ ಜಾಗದಲ್ಲಿ ತನ್ನ ದೇಹದ ಅಂಗವನ್ನು ಸ್ಪರ್ಶಿಸಿದ್ದನ್ನು ಅರಿತ ಯುವತಿ ಆತನ ವಿರುದ್ಧ ಧ್ವನಿ ಏರಿಸಿ, ಸಾರ್ವಜನಿಕರ ಮುಂದೆ ನಿಂದಿಸಿದ್ದಾಳೆ.
ಇದನ್ನೂ ಓದಿ:ಅಯೋಧ್ಯೆ ಶ್ರೀರಾಮನ ದೇವಸ್ಥಾನದ ಸುರಕ್ಷತೆಗೆ (AI) ಆಧುನಿಕ ತಂತ್ರಜ್ಞಾನದ ಕಣ್ಗಾವಲು
ಈ ಘಟನೆ ಕೇರಳದ ತ್ರಿಶೂರ್‌ನಲ್ಲಿ ಸಂಭವಿಸಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದೆ. ಅಪಾದಿತ ವೃದ್ಧನನ್ನು ಅಲಿ ಎಂದು ಗುರುತಿಸಲಾಗಿದ್ದು, ಯುವತಿ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
किराने की दुकान चलाने वाले अली नाम के बुजुर्ग व्यक्ति ने सामान खरीदने आई एक लड़की के स्तनों को पकड़ा।
यह घटना केरल के त्रिशूर मेडिकल कॉलेज के पास हुई।pic.twitter.com/sjIjeszLuV
— Sarvesh kumar02 (Modi Ka Parivar) (@Sarvesh38453373)January 5, 2024

ವೃದ್ಧ ತನ್ನ ಎದೆ ಭಾಗವನ್ನು ಸ್ಪರ್ಶಿಸಿದ ಎಂದು ಆರೋಪಿಸಿದ ಯುವತಿ, ಕೆಲ ಸಮಯ ಬಾಯಿಗೆ ಬಂದಂತೆ ನಿಂದಿಸಿ, ತದನಂತರ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾಳೆ. ಯುವತಿಗೆ ಕ್ಷಮೆ ಕೋರಿದ ವೃದ್ಧ, ತನ್ನ ವಿರುದ್ಧ ಪೊಲೀಸ್ ದೂರು ನೀಡದಂತೆ ಮನವಿ ಮಾಡಿದ್ದಾನೆ ಎನ್ನಲಾಗಿದೆ,(ಏಜೆನ್ಸೀಸ್).
ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಿದ ಮಹೇಶ್​ ಬಾಬು ಚಿತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 12 =
Remember me
