ಬೆಂಗಳೂರು:ನಾವು ಧರಿಸುವ ಬಟ್ಟೆಗಳ ಮೇಲೆ ಕಲೆಯಾದರೆ ಅವುಗಳನ್ನು ಹೋಗಲಾಡಿಸಲು ಡಿಟರ್ಜೆಂಟ್​, ಲಿಕ್ಷಿಡ್​ ಅಥವಾ ಸೋಪ್​ ಬಳಸುತ್ತೇವೆ. ಇನ್ನು ಕೆಲವೊಮ್ಮೆ ಡ್ರೈ ಕ್ಲೀನ್​ ಮಾಡಿಸುತ್ತೇವೆ. ಹಾಗಿದ್ದರೂ ಆ ಕಲೆಗಳು ಮಾಯವಾಗುವುದಿಲ್ಲ. ಹೀಗಿರುವಾಗ ನಾವು ಕೆಲ ಮನೆಮದ್ದುಗಳು ಬಟ್ಟೆ ಮೇಲಿನ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಸಹಾಯ ಮಾಡುತ್ತವೆ.
ಅದಕ್ಕೆ ಪೂರಕವೆಂಬಂತೆ ಮಹಿಳೆಯೊಬ್ಬರು ಈಗ ಒಂದು ಸುಲಭ ಉಪಾಯ ತೋರಿಸಿಕೊಟ್ಟಿದ್ದು, ಇದನ್ನು ನೋಡಿದ ನೆಟ್ಟಿಗರು ನಿನ್​ ಟ್ಯಾಲೆಂಟ್​ ಮೆಚ್ಚಬೇಕಮ್ಮ ಎಂದು ಹಾಡಿಹೊಗಳಿದ್ದಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಡೋಲೋ 650 ಮಾತ್ರೆಗಳನ್ನು ತೆಗೆದುಕೊಳ್ಳುವ ಮಹಿಳೆ ಅದನ್ನು ನೀರಿನಲ್ಲಿ ಬರೆಸುತ್ತಾರೆ. ಬಳಿಕ ಬಟ್ಟೆ ಕಲೆಯಾಗಿರುವ ಜಾಗಕ್ಕೆ ಹಚ್ಚಿ ಅದನ್ನು ಕೆಲ ಕ್ಷಣದಲ್ಲೇ ಮಾಯ ಮಾಡುತ್ತಾರೆ. ಇವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆಗೆ ಒಳಪಟ್ಟಿದ್ದು, ಮೇರಿಕಾದ ವಿಜ್ಞಾನಿಗಳು ಭಾರತದ ಈ ಆವಿಷ್ಕಾರಕ್ಕೆ ಬೆರಗಾಗಿದ್ದಾರೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.
Dolo 650 new use has come in market. American scientists are amazed at indian innovation😃😃😄😝😝😝pic.twitter.com/GrrCkHzzKm
ಇದನ್ನೂ ಓದಿ:ತನ್ನ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದ ಟೀಂ ಇಂಡಿಯಾ; ಪಾರುಪತ್ಯ ಮೆರೆದ ಬ್ಯಾಟ್ಸ್​ಮನ್​ಗಳು
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು  ಬಟ್ಟೆಗಳಲ್ಲಿನ ಕಲೆಗಳನ್ನು ಡೋಲೋ-650 ಮಾತ್ರೆಯನ್ನು ಬಳಸಿ ಹೇಗೆ ತೆಗೆದುಹಾಕಬಹುದು ಎಂಬುದನ್ನು ಹೇಳಿಕೊಡುತ್ತಿರುವುನ್ನು ಕಾಣಬಹುದು. ಆ ಮಹಿಳೆ  ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಗ್ಯಾಸ್ ಒಲೆಯ ಮೇಲೆ ಕುದಿಯಲು ಇಡುತ್ತಾರೆ.  ನಂತರ ಎರಡು ಡೋಲೋ-650 ಮಾತ್ರೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕ್ತಾರೆ.
ಬಳಿಕ ಆ ನೀರಿಗೆ ಎರಡು ಚಮಚ ಬೇಕಿಂಗ್ ಸೋಡಾ ಮತ್ತು ಅರ್ಧ ಕಪ್ ಡಿಟರ್ಜೆಂಟ್ ಪೌಡರ್ ಹಾಕಿ  ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾರೆ. ಹೀಗೆ ನೀರನ್ನು ಚೆನ್ನಾಗಿ ಕುದಿಸಿ, ನಂತರ ಕಲೆಯಾಗಿರುವಂತಹ ಬಿಳಿ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಎರಡು ನಿಮಿಷಗಳ ಕಾಲ ಡೋಲೋ-650 ಮಾತ್ರೆಯನ್ನು ಹಾಕಿದ ನೀರಿನಲ್ಲಿ ಅದ್ದಿಡುತ್ತಾರೆ.  ಕೊನೆಯಲ್ಲಿ ಬಟ್ಟೆಯನ್ನು ತಿಕ್ಕಿ ತೊಳೆಯದೆಯೂ ಸುಲಭವಾಗಿ ಬಟ್ಟೆಯ ಕಲೆ ತೆಗೆದು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 19 =
Remember me
