ಮುಂಬೈ:ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಈ ಐತಿಹಾಸಿಕ ದಿನಾಚರಣೆ ಮೊದಲು ಆರಂಭಗೊಂಡಿದ್ದು ಉತ್ತರ ಅಮೆರಿಕ ಮತ್ತು ಯೂರೋಪ್​ನ ಭಾಗಗಳಲ್ಲಿ. ಇದು ಶುರುವಾಗಿದ್ದು ಮಹಿಳಾ ಕಾರ್ಮಿಕರ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಲು.
ಆದರೆ, ಈಗ ವಿಶ್ವದ ಅನೇಕ ದೇಶಗಳಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನಕ್ಕೆ ಕೆಲ ದೇಶಗಳು ರಾಷ್ಟ್ರಿಯ ರಜೆಯನ್ನೂ ಘೋಷಿಸಿವೆ.
ಭಾರತದಲ್ಲೂ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು, ವಿವಿಧ ಸಂಘಟನೆಗಳು ವಿವಿಧ ರೀತಿಯ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತವೆ. ಇನ್ನು ಮಹಾರಾಷ್ಟ್ರದಲ್ಲಿ ಈ ಬಾರಿ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದ ಬುಲ್ದಾನ ಜಿಲ್ಲೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿರುವುದು ಅಲ್ಲಿನ ಜಿಲ್ಲಾಧಿಕಾರಿ ಸುಮನ್​ ರಾವತ್​ ಚಂದ್ರ ಅವರು.
ಅಂದು ಬುಲ್ದಾನ ಜಿಲ್ಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಯೊಬ್ಬರು ಕಾರ್ಯ ನಿರ್ವಹಿಸಲಿದ್ದಾರೆ. ಹೌದು ಇದನ್ನು ಅಲ್ಲಿನ ಜಿಲ್ಲಾಧಿಕಾರಿ ಸುಮನ್​ ರಾವತ್​ ಅವರು ಟ್ವೀಟ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದು ಹಾಗೆ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿರುವವರು ಅಲ್ಲಿನ ಜಿಲ್ಲಾ ಪರಿಷತ್​ ನಡೆಸುವ ಶಾಲೆಯ ವಿದ್ಯಾರ್ಥಿನಿ ಪೂನಮ್​ ದೇಶಮುಖ್.
ಹೀಗೆ ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಲು ಹಲವು ವಿದ್ಯಾರ್ಥಿನಿಯರಲ್ಲಿ ಆಯ್ಕೆಯಾಗಿದ್ದು ಪೂನಮ್​. ಹೀಗೆ ಆಯ್ಕೆಯಾದ ಕೆಲ ವಿದ್ಯಾರ್ಥಿನಿಯರಿಗೆ ವಾರದವರೆಗೆ ಅವಕಾಶ ನೀಡಲಾಗುತ್ತದೆ. ಆದರೆ ಮಹಿಳಾ ದಿನಾಚರಣೆಯಂದು ಪೂನಮ್​ಗೆ ಈ ಅವಕಾಶ ದೊರೆತಿದೆ.
ಈ ಟ್ವೀಟ್​ಗೆ ಹಲವು ಜನರು ಪ್ರತಿಕ್ರಿಯಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಯೋಚನೆಯಿಂದ ಹಲವು ಮಹಿಳೆಯರಿಗೆ ಸ್ಫೂರ್ತಿ ದೊರೆಯಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)
#CollectorForADay#IWD2020To a run up the International Womens Day, for a week few of the bright girls vl be given n opportunity to be Collector for a day. Today’s Collector Zilla Parishad School’s bright star Poonam Deshmukh.@NITIAayog@CMOMaharashtrapic.twitter.com/GtXgALX9gO
— Suman Rawat Chandra, IAS (@oiseaulibre3)March 2, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
