ನವದೆಹಲಿ:ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಇದೇ ಸಂದರ್ಭದಲ್ಲಿ ಮಹಿಳೆಯರು ಗೌರವ ಸಲ್ಲಿಸಿದರು.
ಗೌರವ ಸಲ್ಲಿಸಿದ ಮಹಿಳೆಯರಿಗೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ತಲೆಬಾಗಿ ಗೌರವಿಸಿದರು. ಎಲ್ಲ ಮಹಿಳೆಯರಿಗೂ ಇದೊಂದು ದೊಡ್ಡ ಕೊಡುಗೆ ಎಂದು ಅಲ್ಲಿ ನೆರೆದಿದ್ದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು.
#WATCH| Women's Reservation Bill | Women felicitate Prime Minister Narendra Modi at the BJP Headquarters in Delhi; PM bows before them to pay them respect.pic.twitter.com/mBQOkhtHUY
— ANI (@ANI)September 22, 2023

ದಮನಕ್ಕೊಳಗಾದ ಮಹಿಳೆಯರ ಶಕ್ತಿ ಈಗ ಮುಂದೆ ಬರುತ್ತಿದೆ. ನಾನು ಕೂಡ ಒಬಿಸಿಗೆ ಸೇರಿದ್ದೇನೆ ಮತ್ತು ಯಾರು ಕಷ್ಟಪಡುತ್ತಾರೋ ಅವರು ಮೇಲೆ ಬರುತ್ತಾರೆ. ಕಷ್ಟಪಟ್ಟರೆ ಮಹಿಳೆಯು ಸಹ ಮೇಲೆ ಬರುತ್ತಾಳೆ. ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಲು ಸಾಕಷ್ಟು ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ರಮಾ ದೇವಿ ಇದೇ ಸಂದರ್ಭದಲ್ಲಿ ಹೇಳಿದರು.
#WATCH| Delhi: "PM Modi has invited us… The strength of women which was suppressed is coming forward now… I also belong to OBC so the one who would struggle will come up…If a woman works hard she would come up…Our President Droupadi Murmu has done a lot of struggle and…pic.twitter.com/ISBeZ68Aaq
— ANI (@ANI)September 22, 2023

ಅಂದಹಾಗೆ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಮತ್ತು ಮತ್ತು ರಾಜ್ಯ ಸಭೆ ಎರಡರಲ್ಲೂ ಸರ್ವಾನುಮತದಿಂದ ಅಂಗೀಕಾರವಾಗಿದೆ. ರಾಷ್ಟ್ರಪತಿಗಳ ಅಂಕಿತ ಒಂದೇ ಬಾಕಿ ಉಳಿದಿದ್ದು, ರಾಷ್ಟ್ರಪತಿಗಳು ಸಹಿ ಹಾಕಿದರೆ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಲಿದೆ. ಇಂದು ರಾಷ್ಟ್ರಪತಿಗಳ ಅಂಕಿತ ಬೀಳುವ ಸಾಧ್ಯತೆ ಇದೆ.(ಏಜೆನ್ಸೀಸ್​)
ಕಾವೇರಿ ಜಲ ವಿವಾದ; ಪ್ರಲ್ಹಾದ ಜೋಶಿ ರಾಜೀನಾಮೆಗೆ ಎಚ್​.ಸಿ. ಮಹದೇವಪ್ಪ ಒತ್ತಾಯ

ಬೆಂಗಳೂರಿಗೆ ನೀರು ನಿಲ್ಲಿಸಿ ರೈತರ ಬೆಳೆಗೆ ಹರಿಸಿ: ಮಂಡ್ಯ ಪಂಪ್​ಹೌಸ್​ಗೆ ಸಂಘಟನೆಗಳ ಮುತ್ತಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
