ನವದೆಹಲಿ:ರಾಜಸ್ಥಾನ ಸರ್ಕಾರ ಮುಂದೇನಾಗಲಿದೆ? ಸಚಿನ್​ ಪೈಲಟ್​ ರಾಜಿಯಾಗಲಿದ್ದಾರಾ? ಅಶೋಕ್​ ಗೆಹ್ಲೋಟ್​ ಜತೆ ಡಿಸಿಎಂ ಆಗಿ ಮುಂದುವರಿಯಲಿದ್ದಾರಾ? ಹೈಕಮಾಂಡ್​ ಸೂಚನೆಯಂತೆ ನಾಳೆ ಸಿಎಂ ನಿವಾಸದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಡಿಸಿಎಂ ಸಚಿನ್​ ಪೈಲಟ್​ ಅವರ ಕಚೇರಿಯಿಂದ ಹೇಳಿಕೆಯೊಂದು ಬಿಡುಗಡೆಯಾಗಿದೆ.
ಜು.13ರಂದು ಅಶೋಕ್​ ಗೆಹ್ಲೋಟ್​ ನಿವಾಸದಲ್ಲಿ ಆಯೋಜಿಸಲಾಗಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿನ್​ ಪೈಲಟ್​ ಅವರು ಪಾಲ್ಗೊಳ್ಳುವುದಿಲ್ಲ ಎಂದು ಡಿಸಿಎಂ ಕಚೇರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಅಶೋಕ್​ ಗೆಹ್ಲೋಟ್​ ಅವರ ಸರ್ಕಾರ ಇನ್ನೂ ಅಸ್ಥಿರವಾಗಿದೆ. ಬಹುಮತ ಹೊಂದಿಲ್ಲ ಎಂದೂ ಹೇಳಿದೆ.ಇದನ್ನೂ ಓದಿ:ಸಿಎಂ ವಿರುದ್ಧ ಬಂಡಾಯ ಎದ್ದು ದೆಹಲಿಗೆ ತೆರಳಿದ್ದ ಸಚಿನ್​ ಪೈಲಟ್​ಗೆ ಕಾಂಗ್ರೆಸ್​ ‘ಹೈ’ ಶಾಕ್​…!
ಅಷ್ಟೇ ಅಲ್ಲ, ಸಚಿನ್​ ಪೈಲಟ್​ ಕೂಡ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನೇ ಪುನರುಚ್ಚರಿಸಿದ್ದಾರೆ. ನನ್ನ ಜತೆ ಶಾಸಕರು ಇದ್ದಾರೆ. ನಾಳಿನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್​ ಅಧ್ಯಕ್ಷ ಸೋನಿಯಾ ಗಾಂಧಿಯನ್ನಾಗಲಿ, ರಾಹುಲ್​ ಗಾಂಧಿಯನ್ನಾಗಲಿ ನನಗೆ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಜೈಪುರಕ್ಕೆ ಹೋಗುವ ಮಾತೇ ಇಲ್ಲ ಎಂದು ಸಚಿನ್​ ಪೈಲಟ್​ ತಿಳಿಸಿದ್ದಾರೆ.
ಸುಮಾರು 30 ಕಾಂಗ್ರೆಸ್​ ಶಾಸಕರು ಸಚಿನ್​ ಪೈಲಟ್​ ಜತೆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಸಚಿನ್​ ಪೈಲಟ್​ ಜತೆ ದೆಹಲಿಗೆ ಹೋಗಿ, ಈಗ ಉಲ್ಟಾ ಹೊಡೆದ ಶಾಸಕರು; ನಾವು ಕಾಂಗ್ರೆಸ್​ ಸೈನಿಕರು ಎಂದರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eleven =
Remember me
